ಪೆಟ್ರೋಲ್ ಮತ್ತು ಡಿಸೇಲ್ ಜಿಎಸ್‌ಟಿ ವ್ಯಾಪ್ತಿಗಿಲ್ಲ

ನವದೆಹಲಿ ಸೆ 18 : ಪೆಟ್ರೋಲ್ ಮತ್ತು ಡಿಸೇಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಯೊಳಗೆ ತರಲು ಯಾವುದೇ ರಾಜ್ಯ ಸರ್ಕಾರಗಳು ಒಲವು ತೋರದ ಕಾರಣ ಪೆಟ್ರೋಲ್ ಮತ್ತು ಡಿಸೇಲ್‌ ಅನ್ನು ಜಿಎಸ್‌ಟಿಯಿಂದ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಈ ಬಗ್ಗೆ ಮಾತನಾಡಿದ  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸದ್ಯ ರಾಜ್ಯಗಳ ಪ್ರಮುಖ ಆದಾಯದ ಮೂಲ ಪೆಟ್ರೋಲ್ ಹಾಗೂ ಡೀಸೆಲ್ ಆಗಿದೆ. ಹೀಗಾಗಿ ಸಮಿತಿ ಸಭೆಯಲ್ಲಿನ ಸದಸ್ಯರು ಪೆಟ್ರೋಲ್ ಹಾಗೂ ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರಲು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಸಭೆಯಲ್ಲಿ ಪ್ರಮುಖವಾಗಿ ಒಂದು ಲೀಟರ್​ಗಿಂತ ಹೆಚ್ಚಿನ ತೆಂಗಿನ ಎಣ್ಣೆಗೆ ಶೇಕಡಾ 5 ಜಿಎಸ್​ಟಿ ವಿಧಿಸಲು ಮಂಡಳಿ ನಿರ್ಧರಿಸಿತು. ಹಣ್ಣಿನ ಜ್ಯೂಸ್‌ಗಳ ಮೇಲೆ ಶೇ.12ರಷ್ಟು ಪರಿಹಾರದೊಂದಿಗೆ ಜಿಎಸ್‌ಟಿ ಶೇಕಡಾ 28ಕ್ಕೆ ಏರಿಸಲು ನಿರ್ಧರಿಸಲಾಯಿತು. ಇಟೋಲಿಜುಮಾಬ್, ಪೋಸಕೋಜೋಲ್, ಪವಿಪಿರವಿರ್, ಕಾಸಿರಿವಿಮಬ್, ಇಂಡಿವಿಮಬ್, ಡಿಯೋಕ್ಸಿ ಡಿ ಗ್ಲೂಕೋಸ್ ಮೇಲಿನ ಜಿಎಸ್‌ಟಿ ಶೇ 12 ರಿಂದ ಶೇಕಡಾ 5ಕ್ಕೆ ಇಳಿಸಲು ನಿರ್ಣಯಿಸಲಾಯಿತು. ಜೊತೆಗೆ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆಗಳಾದ ಸ್ವಿಗ್ಗಿ ಮತ್ತು ಜೊಮಾಟೊ ಇನ್ನು ಮುಂದೆ ಸರ್ಕಾರಕ್ಕೆ ಜಿಎಸ್ಟಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಸಚಿವೆ ತಿಳಿಸಿದರು.

Exit mobile version