ರಾಮನಗರ, ನ. 12: ಜಿಲ್ಲೆಯ ಪ್ರತಿಷ್ಠಿತ ಟೊಯೊಟಾ ಕಿರ್ಲೋಸ್ಕರ್ ಮೋಟರ್ ಕಂಪೆನಿ ಲಾಕೌಟ್ ಆಗಿದ್ದು, ಕಂಪೆನಿಯ ಕಾರ್ಮಿಕರು ಪ್ರತಿಭಟನೆ ಕೈಗೊಂಡಿದ್ದಾರೆ. ಕಂಪೆನಿಯ ಆಡಳಿತ ಮಂಡಳಿ ತಾತ್ಕಾಲಿಕ ಲಾಕೌಟ್ ಘೋಷಣೆ ಮಾಡಿದ್ದು, ಟೊಯೋಟಾ ಕಿರ್ಲೋಸ್ಕಾರ್ ಮೋಟಾರ್ ಕಂಪೆನಿಯ ಕಾರ್ಮಿಕರ ಸಂಘದ ಖಜಾಂಜಿಯನ್ನು ಕೆಲಸದಿಂದ ತೆಗೆದು ಹಾಕಿದ ಹಿನ್ನಲೆಯಲ್ಲಿ ಕಾರ್ಮಿಕರು ಕಂಪೆನಿ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸುತ್ತಿದ್ದರು.
ಈ ಹಿನ್ನಲೆಯಲ್ಲಿ ಕಂಪೆನಿಯನ್ನು ತಾತ್ಕಾಲಿಕವಾಗಿ ಲಾಕೌಟ್ ಮಾಡಲಾಗಿದೆ. ಸುಮಾರು 3500 ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಕಂಪೆನಿಗೆ ಪೋಲೀಸ್ ಭದ್ರತೆ ಸಹ ಒದಗಿಸಲಾಗಿದೆ.