ಪ್ರಧಾನಿಗೆ 70ನೇ ಹುಟ್ಟು ಹಬ್ಬದ ಸಂಭ್ರಮ; ಗಣ್ಯರಿಂದ ಮೋದಿಯವರಿಗೆ ಶುಭಾಷಯಗಳ ಮಹಾಪೂರ:

ಹೊಸದಿಲ್ಲಿ: ನರೇಂದ್ರ ಮೋದಿಯವರವರಿಗೆ  70 ನೇ ಹುಟ್ಟುಹಬ್ಬದ ಸಂಭ್ರಮ .  ಹುಟ್ಟು ಹಬ್ಬದ ಪ್ರಯುಕ್ತ ಗುರುವಾರ  ದೆಹಲಿಯಲ್ಲಿ  ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್,  ರಾಷ್ರಪತಿ  ರಾಮ್ ನಾಥ್ ಕೋವಿಂದ್, ಉಪರಾಷ್ರಪತಿ ಎಂ. ವೆಂಕಯ್ಯನಾಯ್ಡು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿ ಹಲವು ಗಣ್ಯ ವ್ಯಕ್ತಿಗಳು ಶುಭ ಹಾರೈಕೆ ಸಲ್ಲಿಸಿದ್ದಾರೆ.

ದೇಶಾದ್ಯಂತ ಇಂದು ಗುರುವಾರ( ಸೆ 17-2020)ಪ್ರಧಾನಿ ಮೋದಿಯವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.ಅನೇಕ ಕಾರ್ಯಕರ್ತರು ಕೇಕ್ ಕತ್ತರಿಸೋದರ ಜೊತೆಗೆ  ಗಿಡಗಳನ್ನು ನೆಡುವ ಮೂಲಕ ಹುಟ್ಟುಹಬ್ಬನ್ನು ಸಂಭ್ರಮಿಸಿದ್ರೆ  ; ಕೆಲವೊಂದೆಡೆ ನೇತ್ರದಾನ ಮಾಡುವ ಮೂಲಕ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ  ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

 ಇತ್ತ  ಕೊಯಂಬತ್ತೂರಿನ ಬಿಜೆಪಿ ಕಾರ್ಯಕರ್ತರು ಬುಧವಾರ ಶಿವನ್ ಕಾಮಾಚಿ ಅಮ್ಮನ್ ದೇವಾಲಯದಲ್ಲಿ 70 ಕೆ ಜಿ ಲಡ್ಡು ಮಾಡಿ ದೇವಾಲಯದ ಸುತ್ತ ಮೆರವಣಿಗೆ ನಡೆಸಿ ನಂತರ ದೇವರ ಸನ್ನಿಧಾನದಲ್ಲಿ ಲಡ್ಡು ಸಮರ್ಪಿಸಿ ಪ್ರಧಾನಿಯವರ ಶ್ರೇಯಸ್ಸಿಗಾಗಿ ವಿಷೇಶ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ದೇವರಿಗೆ ನೈವೇದ್ಯದ ರೂಪದಲ್ಲಿ ಲಡ್ಡು ಅರ್ಪಿಸಿದ ಬಳಿಕ ಅದನ್ನು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ  ಹಂಚಿದ್ದಾರೆ .

 ಇನ್ನೊಂದೆಡೆ ಪ್ರಧಾನಿಯವರ ಹುಟ್ಟು ಹಬ್ಬದ ಪ್ರಯುಕ್ತ ಒಂದು ವಾರದಿಂದ ಬಿಜೆಪಿ ಕಾರ್ಯ ಕರ್ತರು ಕೆಲವು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ಬಡವರಿಗೆ ದಿನಸಿ ಹಂಚಿದರು, ರಕ್ತದಾನ ಶಿಬಿರ, ಹಾಗೂ ಕಣ್ಣಿನ ತಪಾಸಣೆಯಂತಹ ಜನೋಪಯೋಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನಸೇವೆಗೈದಿದ್ದಾರೆ ..

Exit mobile version