ಪ್ರಧಾನಿಯನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ

ಭಾರತ ಮತ್ತು ಚೀನಾ ಗಡಿ ಲಡಾಕ್ ಗಾಲ್ವಾನ್  ಕಣಿವೆ  ಪ್ರದೇಶದಲ್ಲಿ  ಸೈನಿಕರ ನಡುವೆ  ನಡೆದ ಘರ್ಷಣೆಯಲ್ಲಿ  ೨೦ ಯೋಧರ ಸಾವನ್ನಪ್ಪಿದ್ದಾರೆ. ಆದ್ರೆ ಇಷ್ಟೆಲ್ಲಾ ಬೆಳವಣಿಗೆಗಳು ನಡೆದ್ರೂ  ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವುದೇ ಕ್ರಮಕೈಗೊಳ್ಳದೆ  ಯಾಕೆ ಮೌನವಹಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಇದರ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಬುಧವಾರ  ಟ್ವೀಟ್ ಮಾಡಿದ್ದು  ಮೋದಿ ಯಾಕೆ ಮೌನವಾಗಿದ್ದಾರೆ?  ಅವರು ಯಾಕೆ ಅಡಗಿಕೊಂಡಿದ್ದಾರೆ. ಎಲ್ಲವೂ ಸಾಕಾಗಿದೆ. ಚೀನಾ ದೇಶ ಯಾಕೆ ಹೀಗೆ ಮಾಡುತ್ತಿದೆ. ಎಂಬುದು ಗೊತ್ತಾಗಬೇಕಾಗಿದೆ.ಎಂದು ಟ್ವೀಟ್ ಮಾಡಿದ್ದಾರೆ.

ಮಂಗಳವಾರ ನಡೆದ ಚೀನಾ- ಭಾರತ ಘರ್ಷಣೆಯಲ್ಲಿ   ಚೀನಾದ ಸುಮಾರು ೪೩  ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ. ಜೊತೆ ಹಲವು ಮಂದಿಗೆ ಗಂಭೀರ ಗಾಯಗಳಾಗಿದೆ .ಇಷ್ಟಾಗಿದ್ರು  ಇದರ ಬಗ್ಗೆ ಚೀನಾ ತುಟಿಕ್ ಪಿಟಿಕ್ ಅನ್ನದೇ ಇರೋದು  ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Exit mobile version