ಪ್ರಿಯಾಂಕ ಆಳ್ವಾಗೆ ಮತ್ತೊಮ್ಮೆ ನೋಟೀಸ್‌ ಜಾರಿ

ಮುಂಬೈ, ಅ. 17: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕ ಸಂಬಂಧಿಸಿದಂತೆ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ವಿಚಾರಣೆಗೆ ಹಾಜರಾಗುವಂತೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಪತ್ನಿಗೆ ಶನಿವಾರ ಮತ್ತೆ ಸಿಸಿಬಿ ಮತ್ತೆ ನೋಟಿಸ್ ಜಾರಿ ಮಾಡಿದೆ.  

ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ಪತ್ನಿ ಪ್ರಿಯಾಂಕಾ ಆಳ್ವಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತಾದರೂ, ವಿಚಾರಣೆಗೆ ಪ್ರಿಯಾಂಕಾ ಹಾಜರಾಗದ ಕಾರಣ ಮತ್ತೆ ನೋಟೀಸ್ ಜಾರಿ ಮಾಡಿರುವುದಾಗಿ ಸಿಸಿಬಿ ಮೂಲಗಳು ತಿಳಿಸಿವೆ.

ಈ ಕಾರಣದಿಂದಾಗಿ ಸಿಸಿಬಿ ಪೊಲೀಸರು ಮತ್ತೆ ಇಂದು ನೋಟಿಸ್ ಜಾರಿ ಮಾಡಿದ್ದಾರೆ. ವಾಟ್ಸ್ ಆಪ್ ಮೂಲಕವೂ ಪ್ರಿಯಾಂಕಾ ಆಳ್ವಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂಬುದಾಗಿ ಮಾಹಿತಿ ಮೂಲಗಳು ತಿಳಿಸಿವೆ.

Exit mobile version