‘ಫೇಸ್‌ಬುಕ್’ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು ನ. 3: ಫೇಸ್‌ಬುಕ್ ಬಳಕೆದಾರರಿಗೆ ಡಾರ್ಕ್‌ಮೋಡ್ ಥೀಮ್ ಲಭ್ಯವಾಗಿದ್ದು ಗುಡ್ ನ್ಯೂಸ್ ಸಿಕ್ಕಂತಾಗಿದೆ. ಬಹುಬೇಡಿಕೆಯ ಡಾರ್ಕ್ ಮೋಡ್ ಆಯ್ಕೆ ಇದೀಗ ಮತ್ತಷ್ಟು ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಲಭ್ಯವಾಗುತ್ತಿದೆ.

ಡಾರ್ಕ್ ಥೀಮ್ ಬಳಕೆದಾರರಿಗೆ ಕಪ್ಪು ಹಿನ್ನೆಲೆಗೆ ಬದಲಾಯಿಸಲು ಅನುಮತಿಸುತ್ತದೆ ಇದು ಬ್ಯಾಟರಿ ಬಳಕೆಗೆ ಉತ್ತಮವಾಗಿದ್ದು, ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಫೇಸ್ ಬುಕ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗಾಗಿ ಡಾರ್ಕ್ ಮೋಡ್ ಅನ್ನು ಭಾನುವಾರ ಬಿಡುಗಡೆ ಮಾಡಿತ್ತು. ಡಾರ್ಕ್ ಥೀಮ್ ಈಗಾಗಲೇ ಕೆಲವು ಆಂಡ್ರಾಯ್ಡ್ ಫೇಸ್ ಬುಕ್ ಬಳಕೆದಾರರಿಗೆ ಲಭ್ಯವಿದ್ದು, ಕಂಪನಿಯು ಅದನ್ನು ವ್ಯಾಪಕವಾಗಿ ಬಿಡುಗಡೆ ಮಾಡಲು ಆರಂಭಿಸಿದೆ. ನೀವು ಇನ್ನೂ ಡಾರ್ಕ್ ಮೋಡ್ ಫೀಚರ್ ಅನ್ನು ಪಡೆದಿಲ್ಲಎಂದಾದಲ್ಲಿ, ಮುಂಬರುವ ದಿನಗಳಲ್ಲಿ ನೀವು ಅದನ್ನು ಪಡೆಯುತ್ತೀರಿ.

ಆಂಡ್ರಾಯ್ಡ್ ನಲ್ಲಿ ಡಾರ್ಕ್ ಮೋಡ್ ಪಡೆಯಲು, ಗೂಗಲ್ ಪ್ಲೇ ಸ್ಟೋರ್ ನಿಂದ ಫೇಸ್ ಬುಕ್ ಅಪ್ಲಿಕೇಶನ್ ನ ಇತ್ತೀಚಿನ ಆವೃತ್ತಿಯನ್ನು ನೀವು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಡೆಸ್ಕ್ ಟಾಪ್ ಮತ್ತು ಫೇಸ್ ಬುಕ್ ಲೈಟ್ ಆಪ್ ಬಳಕೆದಾರರಿಗೆ ಡಾರ್ಕ್ ಮೋಡ್ ಫೀಚರ್ ಈಗಾಗಲೇ ಲಭ್ಯವಿದೆ. ಫೇಸ್ ಬುಕ್ ನ ಇತರ ಅಪ್ಲಿಕೇಶನ್ ಗಳಾದ ವಾಟ್ಸಾಪ್ ಮತ್ತು ಇನ್ ಸ್ಟಾಗ್ರಾಂ ಈಗಾಗಲೇ ಐಒಎಸ್ ಮತ್ತು ಆಂಡ್ರಾಯ್ಡ್ ಆವೃತ್ತಿಗಳಲ್ಲಿ ಡಾರ್ಕ್ ಮೋಡ್ ಅನ್ನು ಹೊಂದಿದೆ.

Exit mobile version