ಬಾಂಗ್ಲಾ ಕ್ರಿಕೆಟಿಗನಿಗೆ ಶಸ್ತ್ರಸಜ್ಜಿತ ಅಂಗರಕ್ಷಕನ ಭದ್ರತೆ

ಬಾಂಗ್ಲಾದೇಶ, ನ. 19: ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್ರೌಂಡರ್ ಶಕೀಬ್-ಅಲ್-ಹಸನ್ ಅವರಿಗೆ ಜೀವ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸರ್ಕಾರದಿಂದ ಶಸ್ತ್ರಸಜ್ಜಿತ ಅಂಗರಕ್ಷಕ ಸಿಬ್ಬಂದಿಯ ರಕ್ಷಣೆ ಒದಗಿಸಲಾಗಿದೆ.

ಬಾಂಗ್ಲಾದೇಶದ ಸ್ಟಾರ್ ಆಟಗಾರನಾಗಿರುವ ಶಕೀಬ್ ಅಲ್ ಹಸನ್, ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆದ ಕಾಳಿ ಪೂಜೆಯಲ್ಲಿ ಭಾಗವಹಿಸಿದ್ದರು. ಆದರೆ ಹಿಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಗ್ಗೆ ಕ್ರಿಕೆಟಿಗ ಶಕೀಬ್, ಕ್ಷಮೆಯಾಚಿಸಿದ್ದರು. ಈ ನಡುವೆ ವ್ಯಕ್ತಿಯೊಬ್ಬ ಫೇಸ್ಬುಕ್ ಮೂಲಕ ಶಕೀಬ್ ಅವರಿಗೆ ಜೀವ ಬೆದರಿಕೆವೊಡ್ಡಿದ್ದ. ಈ ಸಂಬಂಧ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ರಾಪಿಡ್ ಆ್ಯಕ್ಷನ್ ಬೆಟಾಲಿಯನ್
(ಆರ್ಎಬಿ) ಸಿಬ್ಬಂದಿ, ಬಾಂಗ್ಲಾದೇಶ ಕ್ರಿಕೆಟಿಗನಿಗೆ ಜೀವ ಬೆದರಿಕೆ ಹಾಕಿದ್ದ ಮೋಸಿನ್ ತಲುಕ್ದರ್ ಎಂಬಾತನನ್ನು ಬಂಧಿಸಿದ್ದರು.

ಈ ನಡುವೆ ಶಕೀಬ್-ಅಲ್-ಹಸನ್ಗೆ ತಮ್ಮ ದೇಶದ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯಪಾಲಕ ನಿಜಾ಼ಮುದ್ದೀನ್ ಚೌಧರಿ, ಕ್ರಿಕೆಟಿಗನ ಭದ್ರತೆಗೆ
ಶಸ್ತ್ರಸಜ್ಜಿತ ಅಂಗರಕ್ಷಕ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

Exit mobile version