ಬ್ಯಾಂಕ್ ಲಾಕರ್ ಗಳು ಎಷ್ಟು ಸೇಫ್?

ಭಾರತದಲ್ಲಿ ಚಿನ್ನದೊಂದಿಗೆ ಭಾವನಾತ್ಮಕ ಸಂಬಂಧವ ನ್ನಿಟ್ಟುಕೊಂಡಿರುತ್ತಾರೆ. ಚಿನ್ನದ ಮಾರುಕಟ್ಟೆಗೆ ಭಾರತ ಬಹಳ ಹೆಸರುವಾಸಿಯಾದ ದೇಶ. ಮುತ್ತು ರತ್ನಗಳನ್ನು ಬೀದಿ ಬೀದಿಯಲ್ಲಿ ಇತ್ತು ಮಾರುವ ಪರಂಪರೆಯನ್ನು ಹೊಂದಿದ ರಾಷ್ಟ್ರ ನಮ್ಮದು. ಅಂತಹ ಶ್ರೀಮಂತ ಪರಂಪರೆ ಹೊಂದಿರುವ ನಮ್ಮ ಸಂಸ್ಕ್ರತಿಯಲ್ಲಿ ಬಂಗಾರಕ್ಕೆ ಬಹಳ ಮಹತ್ವ ಇದೆ. ಇಂದಿಗೂ ಕೂಡ ಹಬ್ಬ ಹರಿದಿನದ ಸಂದರ್ಭದಲ್ಲಿ ಬಂಗಾರ ಎಲ್ಲರ ಪ್ರಥಮ ಆಯ್ಕೆ ಆಗಿರುತ್ತದೆ.

ಪ್ರಾಚೀನ ಕಾಲದಿಂದಲೂ ಚಿನ್ನವನ್ನು ಸುರಕ್ಷಿತ ಹೂಡಿಕೆಯಾ ಮೂಲವೆಂದು ಪರಿಗಣಿಸಲಾಗಿದೆ. ಕಷ್ಟಕಾಲದಲ್ಲಿ ಕೂಡಿಟ್ಟ ಚಿನ್ನವನ್ನು ಬಳಸಿ ತಮ್ಮ ಸಂಸಾರದ ಬವಣೆಯನ್ನು ನೀಗಿಸಿಕೊಳ್ಳುತ್ತಾರೆ. ಆದರೆ ಪ್ರಸ್ತುತ ಚಿನ್ನವನ್ನು ಮನೆಯಲ್ಲಿ ಟ್ಟುಕೊಳ್ಳುವುದು ಅಥವಾ ಧರಿಸುವುದು ಕೂಡ ಅಪಾಯಕಾರಿಯಾಗಿದೆ. ಹೀಗಾಗಿಯೇ ಬ್ಯಾಂಕುಗಳ ಲಾಕರ್ ಗಳಲ್ಲಿ ಚಿನ್ನವನ್ನು ಸುರಕ್ಷಿತವಾಗಿಡುತ್ತಾರೆ. ಆದರೆ ಇದೀಗ ನಾವು ಹೇಳುತ್ತಿರುವ ಸುದ್ದಿ ಬ್ಯಾಂಕ್ ಲಾಕರ್ ಗಲ್ಲಿ ಚಿನ್ನ ಇಟ್ಟವರಿಗೆ ದೊಡ್ಡ ಶಾಕ್ ನೀಡಲಿದೆ.

ನೀವು ಚಿನ್ನದ ಆಭರಣಗಳು ಅಥವಾ ಕೆಲವು ಪ್ರಮುಖ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟುಕೊಂಡಿದ್ದರೆ ಅವುಗಳು ಅಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಭಾವಿಸಿದರೆ, ಅದು ನಿಮ್ಮ ದೊಡ್ಡ ತಪ್ಪು. ಹೌದು ನೀವು ಬಾಂಕ್ ಲಾಕರ್ ಗಳು ಸುರಕ್ಷಿತವೆಂದು ಭದ್ರವಾಗಿ ರಿಸಿದ ಯಾವುದೇ ವಸ್ತುಗಳ ಕುರಿತು ಬ್ಯಾಂಕಿನಲ್ಲಿ ಕಳ್ಳತನ, ಬೆಂಕಿಯಂತಹ ಅವಘಡ ಸಂಭವಿಸಿದಾಗ ಅದರ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ನಿಜವಾಗಿಯೂ ಇದು ಸತ್ಯ ಸಂಗತಿ.

2017 ರಲ್ಲಿ ರಿಸರ್ವ್ ಬ್ಯಾಂಕ್ ನ ನಿಯಮದ ಪ್ರಕಾರ ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುವ ನಿಮ್ಮ ಬಂಗಾರ ಎಷ್ಟೊಂದು ಸುರಕ್ಷಿತ ಎಂದು ಹುಡುಕಲು ಹೊರಟಾಗ ಸಿಕ್ಕ ಮಾಹಿತಿ ನಿಜಕ್ಕೂ ಶಾಕಿಂಗ್. ಈ ನಿಯಮಗಳ ಪ್ರಕಾರ ಯಾವುದೇ ಅವಘಡದ ಸಂದರ್ಭದಲ್ಲಿ ಲಾಕರ್‌ನಲ್ಲಿ ಇರಿಸಲಾಗಿರುವ ಬೆಲೆಬಾಳುವ ವಸ್ತುಗಳನ್ನು ಗ್ರಾಹಕರಿಗೆ ಸರಿದೂಗಿಸುವುದು ಬ್ಯಾಂಕುಗಳ ಜವಾಬ್ದಾರಿಯಲ್ಲ.

ಇದರರ್ಥ ದರೋಡೆ, ಬೆಂಕಿ, ಒಂದು ರೀತಿಯ ಪ್ರಾಕೃತಿಕ ವಿಕೋಪದಂತಹ ಯಾವುದೇ ರೀತಿಯ ಅಹಿತಕರ ಘಟನೆಗಳು ಬ್ಯಾಂಕಿನ ಮೇಲೆ ಪರಿಣಾಮ ಬೀರಿದ ಸಂದರ್ಭದಲ್ಲಿ ಬ್ಯಾಂಕ್ ತನ್ನ ಗ್ರಾಹಕರಿಗೆ ಪರಿಹಾರವನ್ನು ನೀಡುವುದಿಲ್ಲ. ಬ್ಯಾಂಕಿನ ಲಾಕರ್ ಒಪ್ಪಂದದಲ್ಲಿ ಹೊಣೆಗಾರಿಕೆ ಪಾವತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲದ ಕಾರಣ, ಅವರ ಬೆಲೆಬಾಳುವ ವಸ್ತುಗಳನ್ನು ವಿಮೆ ಮಾಡುವುದು ಗ್ರಾಹಕರ ಜವಾಬ್ದಾರಿಯಾಗಿದೆ. ಹೀಗಾಗಿ ಇನ್ನು ಮುಂದೆ ಬ್ಯಾಂಕ್ ಲಾಕರ್ ಗಳಲ್ಲಿ ಚಿನ್ನ ಅಥವಾ ಯಾವುದೇ ಅಮೂಲ್ಯ ವಸ್ತುಗಳನ್ನಿಡುವ ಮುನ್ನ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ.

Exit mobile version