ಭರವಸೆಯ ಬಿಹಾರ ಬಿಜೆಪಿ ಪ್ರಣಾಳಿಕೆ?

ಪಟ್ನಾ, ಅ. 22: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಬಿಹಾರದ 19 ಲಕ್ಷ ಜನರಿಗೆ ಉದ್ಯೋಗ ನೀಡುವ ಆಶ್ವಾಸನೆಯನ್ನು ನೀಡಲಾಗಿದೆ. ಅಲ್ಲದೇ, ರಾಜ್ಯದ ಪ್ರತಿಯೊಬ್ಬರಿಗೂ ಕೋವಿಡ್‌-19 ಲಸಿಕೆಯನ್ನು ಉಚಿತವಾಗಿ ನೀಡುವ ಭರವಸೆಯನ್ನು ಪ್ರಣಾಳಿಕೆ ಒಳಗೊಂಡಿದೆ.

ಎನ್‌ಡಿಎ ಅಧಿಕಾರವಧಿಯಲ್ಲಿ ಬಿಹಾರದ ಜಿಡಿಪಿ ತೀವ್ರಗತಿಯಲ್ಲಿ ಏರಿಕೆ ಕಂಡಿದೆ. ಕಳೆದ 15 ವರ್ಷಗಳಲ್ಲಿ ರಾಜ್ಯದ ಜಿಡಿಪಿ ಶೇ.3 ರಿಂದ 11.3 ಕ್ಕೆ ಏರಿದೆ. ಅದು ಎನ್‌ಡಿಎ ಅವಧಿಯಲ್ಲಾಗಿದ್ದೇ ಹೊರತು, 15 ವರ್ಷಗಳ ‘ಜಂಗಲ್ ರಾಜ್’ ಆಡಳಿತದಲ್ಲಿ ಅಲ್ಲ ಎಂದು ನಿರ್ಮಲಾ ತಿಳಿಸಿದರು.

ಬಿಜೆಪಿ ಬಿಹಾರ್‌ ಅಧ್ಯಕ್ಷ ಸಂಜಯ್‌ ಜಸ್ವಾಲ್‌, ʻಪ್ರಣಾಳಿಕೆಯಲ್ಲಿ ಉಲ್ಲೇಖಿಸಿದಂತೆ 19 ಉದ್ಯೋಗದಲ್ಲಿ 3 ಲಕ್ಷ ಶಿಕ್ಷಕರ ಹುದ್ದೆ, 1 ಲಕ್ಷ ವೈದ್ಯಕೀಯ ಕ್ಷೇತ್ರಕ್ಕೆ (ಸರ್ಕಾರಿ ವಲಯ) ಆದ್ಯತೆ ನೀಡಲಾಗುವುದು. ಅಲ್ಲದೇ, ಬಿಹಾರ್‌ನಲ್ಲಿ ಐಟಿ ಹಾಗೂ ಕೃಷಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್‌ 10 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ, ಬಿಜೆಪಿ ʻಸಂಕಲ್ಪ ಪತ್ರʼ ಹೆಸರಿನಲ್ಲಿ ಈ ಸಂಖ್ಯೆಯನ್ನು 19 ಲಕ್ಷಕ್ಕೆ ಏರಿಸಿದೆ.

ಬಿಹಾರ್‌ ರಾಜ್ಯದಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಇದೇ ಅಕ್ಟೋಬರ್‌ 28, ನವೆಂಬರ್‌ 3 ಮತ್ತು 7ರಂದು ಮತದಾನ ನಡೆಯಲಿದೆ. ನವೆಂಬರ್‌ 10 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಬಿಜೆಪಿ ಪ್ರಣಾಳಿಕೆಯ ಭರವಸೆಗಳು:

Exit mobile version