ಭಾರತದತ್ತ ಪ್ರಯಾಣ ಬೆಳೆಸಿರುವ ರಫೇಲ್ ಯುದ್ಧ ವಿಮಾನಗಳು

ಫ್ರಾನ್ಸ್‌ನಿಂದ ಭಾರತದತ್ತ ಪ್ರಯಾಣ ಬೆಳೆಸಿರುವ ಅತ್ಯಾಧುನಿಕ ಐದು ರಫೇಲ್ ಯುದ್ಧ ವಿಮಾನಗಳು ಜು.29(ಬುಧವಾರ) ಅಂಬಾಲಾ ವಾಯುಸೇನಾ ನೆಲೆಗೆ ಬಂದಿಳಿಯಲಿವೆ.

ಫ್ರಾನ್ಸ್‍ನ ಮೆರಿಗ್ನಾಕ್‍ ವಾಯುನೆಲೆಯಿಂದ ಭಾರತದ  ಹೊರಟಿರುವ ರಫೇಲ್ ಯುದ್ದ ವಿಮಾನಗಳು ಸದ್ಯ ಸಂಯುಕ್ತ ಅರಬ್ ಸಂಸ್ಥಾನ ತಲುಪಿವೆ. ಅಂದಾಜು 7 ಗಂಟೆಗಳ ಪ್ರಯಾಣದ ಬಳಿಕ ರಫೇಲ್ ಯುದ್ಧ ವಿಮಾನಗಳು ಯುಎಇಯ ಅಲ್ ದಫ್ರಾ ವಾಯುಸೇನಾ ನೆಲೆಗೆ ಬಂದಿಳಿದಿವೆ. ಭಾರತೀಯ ವಾಯುಸೇವೆಯ ಆರು ನುರಿತ ಪೈಲೆಟ್‍ಗಳು ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ತರಲಿದ್ದಾರೆ.

ಮೊದಲ ಕಂತಿನ ಐದು ರಫೇಲ್ ಯುದ್ಧ ವಿಮಾನಗಳಲ್ಲಿ 3 ಸಿಂಗಲ್ ಸೀಟರ್ ಹಾಗೂ 2 ಅವಳಿ ಸೀಟರ್‍ಗಳನ್ನು ಹೊಂದಿವೆ. ಈ ಐದು ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನ ಡಸ್ಸಾಲ್ಟ್ ಏವಿಯೇಶನ್ ಸಂಸ್ಥೆ ನಿರ್ಮಿಸಿದೆ. ಸದ್ಯ ಯುಎಇ ತಲುಪಿರುವ ರಫೇಲ್ ಯುದ್ಧ ವಿಮಾನಗಳು, ಇಲ್ಲಿಂದ ಭಾರತದತ್ತ ಪ್ರಯಾಣ ಬೆಳೆಸಲಿವೆ. ಜು.29ರಂದು ಅಂಬಾಲಾ ವಾಯುನೆಲೆಗೆ ಬಂದಿಳಿಯುತ್ತಿದ್ದಂತೆ ಐದು ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯು ಸೇನೆಗೆ ನಿಯೋಜನೆಗೊಳ್ಳಲಿವೆ.

Exit mobile version