ಮಣಿಪಾಲ್ ಆಸ್ಪತ್ರೆ​ ತೆಕ್ಕೆಗೆ ಕೊಲಂಬಿಯಾ ಏಷ್ಯಾ

ನವದೆಹಲಿ ನ.2: ಭಾರತದಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯನ್ನು ಮಣಿಪಾಲ್ ಆಸ್ಪತ್ರೆ ಖರೀದಿಸಲಿದೆ. ಈ ಸಂಬಂಧ ಈಗಾಗಲೇ ಒಪ್ಪಂದವಾಗಿದೆ ಎಂದು ಮೂಲಗಳು ತಿಳಿಸಿವೆ.
ಮಣಿಪಾಲ್ ಹಾಸ್ಪಿಟಲ್ಸ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್ (ಕೊಲಂಬಿಯಾ ಏಷ್ಯಾ)ನ ಶೇಕಡ 100 ಪಾಲನ್ನು ಖರೀದಿಸಲು ಕಂಪನಿ ಮುಂದಾಗಿದೆ. ಅಪ್ರೂವಲ್​ಗಳನ್ನು ಈಗಾಗಲೇ ಪಡೆದುಕೊಂಡಿದೆ.
ಉಳಿದ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದೆ.
ಮಣಿಪಾಲ್ ಫ್ಯಾಮಿಲಿಗೆ ಕೊಲಂಬಿಯಾ ಏಷ್ಯಾ ಸೇರ್ಪಡೆಯಾಗುತ್ತಿದ್ದು, ಅದನ್ನು ಸ್ವಾಗತಿಸುತ್ತೇವೆ. ಹಲವಾರು ವರ್ಷಗಳಿಂದ ಉತ್ತಮ ಆರೋಗ್ಯ ಸೇವೆಗೆ ಹೆಸರುವಾಸಿಯಾಗಿರುವ ಆಸ್ಪತ್ರೆಯ ಸಾಧನೆಯನ್ನೂ ನಾವು ಪರಿಗಣಿಸುತ್ತೇವೆ, ಪ್ರಶಂಸಿಸುತ್ತೇವೆ ಎಂದು ಮಣಿಪಾಲ್ ಎಜುಕೇಶನ್ ​ಆಂಡ್ ಮೆಡಿಕಲ್ ಗ್ರೂಪ್​ ಚೇರ್​ಮನ್​ ರಂಜನ್ ಪೈ ಹೇಳಿದ್ದಾರೆ.
ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ 2005ರಲ್ಲಿ ಭಾರತದಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಪ್ರಸ್ತುತ ದೇಶಾದ್ಯಂತ 11 ಆಸ್ಪತ್ರೆಗಳ ಸರಣಿಯನ್ನು ಹೊಂದಿದೆ ಎಂದು ಮಣಿಪಾಲ್ಸ್ ಆಸ್ಪತ್ರೆ ಹೇಳಿಕೆ ನೀಡಿದೆ.

Exit mobile version