ಮನೆ ಮನೆಗೆ ಗಾಂಜಾ ಡೆಲಿವರಿ ! ಚೆನ್ನೈನಲ್ಲಿ ಹೈಟೆಕ್‌ ದಂಧೆ

ಚೆನ್ನೈ: ಈಗ ಆಹಾರದಿಂದ ಹಿಡಿದು, ದಿನಸಿ, ಮಾತ್ರೆ ಹೀಗೇ ಎಲ್ಲವೂ ಆನ್‌ಲೈನ್‌ನಲ್ಲಿ ಲಭ್ಯವಿರುವುದು ಸರ್ವೇ ಸಾಮಾನ್ಯ, ಆದರೆ ಇತ್ತೀಚೆಗೆ ಘಾಟು ಹೊಡೆಯುತ್ತಿರುವ ಗಾಂಜಾ ದಂಧೆ ಕೂಡಾ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದು ಚೆನ್ನೈ ಪೊಲೀಸರ ತಲೆ ಕೆಡಿಸಿದೆ.

ಫುಡ್‌ ಡೆಲಿವರಿ ಬಾಯ್ಸ್‌ ಮೂಲಕ ಗಾಂಜಾ ಮಾಫಿಯಾ ನಡೆಯುತ್ತಿದೆ. ಸದ್ಯ ಚೆನ್ನೈನಲ್ಲಿ ಇಂತಹ ಮೂರು ಪ್ರಕರಣಗಳು ಬೆಳಕಿಗೆ ಬಂದಿದೆ. ವಾಟ್ಸಾಪ್‌ ಅಥವಾ ಮೇಲ್‌ ಮೂಲಕ ಆನ್‌ಲೈನ್‌ನಲ್ಲೇ ಗಾಂಜಾವನ್ನು ಆರ್ಡರ್‌ ಮಾಡಿ ಬಳಿಕ ಫುಡ್‌ ಡೆಲಿವರಿ ಬಾಯ್ಸ್‌ ವೇಷ ತೊಡುವ ಯುವಕರು ಗಾಂಜಾ ಪ್ಯಾಕೆಟ್‌ಗಳನ್ನ ಪಾರ್ಸೆಲ್‌ ರೂಪದಲ್ಲಿ ಸೂಚಿಸಿದ ಲೊಕೇಷನ್‌ಗೆ ತಲುಪಿಸುವ ಕೆಲಸ ಮಾಡಿ ಈಗ ಪೊಲೀಸರ ಅತಿಥಿಯಾದ ಘಟನೆ ವರದಿಯಾಗಿದೆ.

ಗಾಂಜಾವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಚೆನ್ನೈ ನಗರದ ಪ್ರಮುಖ ಗಾಂಜಾ ಪೆಡ್ಲರ್‌ಗಲೇ ಇದ್ದು, ಅವರು ಒಂದು ವಾಟ್ಸಾಪ್‌ ಮೂಲಕ ಈ ದಂಧೆಯನ್ನು ನಡೆಸುತ್ತಿದ್ದಾರೆ. ಈ ಗ್ರೂಪಿನಲ್ಲಿದ್ದವರೆಲ್ಲೂ ಗಾಂಜಾ ವ್ಯವಹಾರ ಮಾಡುವವರಾಗಿದ್ದು, ಕೋಡ್‌ ರೆಫರಲ್‌ ಮೂಲಕ ಕೂಡಾ ಈ ಗುಂಪಿಗೆ ಜಾಯಿನ್‌ ಆಗಬಹುದಾಗಿದೆ.

ಮೊದಲಿಗೆ ಜಾಯಿನ್‌ ಆದ ಸದಸ್ಯನಿಗೆ ಉಚಿತ ಸ್ಯಾಂಪಲ್‌ ಗಾಂಜಾವನ್ನು ನೀಡಲಾಗುತ್ತದೆ. ಅಲ್ಲದೇ ರೆಫರಲ್‌ ಲಿಂಕ್‌ ಕಳುಹಿಸಿ ಮೂಲ ಸದಸ್ಯ ತಿಂಗಳಿಗೆ ಕನಿಷ್ಟ ಸರಿಸುಮಾರು 20 ಸಾವಿರು ರೂಗಳನ್ನು ಸಂಪಾಧಿಸುತ್ತಾನೆ. ಈ ಗ್ರೂಪ್‌ನಲ್ಲಿ ಅತೀ ಹೆಚ್ಚು ಟೆಕ್ಕಿಗಳೆ ಇದ್ದು, ಇ-ಮೇಲ್‌ ಮೂಲಕವು ಆರ್ಡರ್‌‌ಗಳು ಮಾಡುತ್ತಾರಂತೆ.

ಆರ್ಡರ್‌ ಮಾಡಿದ ಲೊಕೇಶನ್‌ಗೆ ಪೆಡ್ಲರ್‌ಗಳು ಡೆಲಿವರಿ ಹುಡುಗರನ್ನು ಕಳುಹಿಸುತ್ತಾನೆ. ಯಾರಿಗೂ ತಿಳಿಯಬಾರದು ಎನ್ನುವ ಉದ್ದೇಶದಿಂದ ಫುಡ್‌ ಪ್ಯಾಕ್‌ ಮಾಡಿದಂತೆ ಗಾಂಜಾವನ್ನು ಒಳಗೆ ಇಟ್ಟು ಪ್ಯಾಕ್‌ ಮಾಡಲಾಗುತ್ತೆ. ಒಂದು ವೇಳೆ ಮನೆ ಡೆಲಿವರಿ ಬೇಡವೆಂದಾದರೆ ತಾವೇ ಸೂಚಿಸಿದ ಜಾಗಕ್ಕೆ ಡೆಲಿವರಿ ಹುಡುಗನನ್ನು ಪೆಡ್ಲರ್‌ಗಳು ಕಳುಹಿಸಿಕೊಡುತ್ತಾರೆ. ಡೆಲಿವರಿ ಮಾಡುವ ಸಂದರ್ಭದಲ್ಲಿ ಪೋಟ್ಲಂ, ಧಮ್‌, ಕಿಸಾ ಎನ್ನುವಂಹ ಕೀ ವರ್ಡ್‌ಗಳನ್ನು ಬಳಕೆ ಮಾಡುತ್ತಾರೆ.

ಈ ಗಾಂಜಾಗಳನ್ನು ಆಂಧ್ರಪ್ರದೇಶ – ಒಡಿಶಾ ಗಡಿ ಭಾಗದಿಂದ ಚೆನ್ನೈಗೆ ತರಲಾಗುತ್ತದೆ. ರೈಲು ಮೂಲಕವೇ ಈ ಎಲ್ಲಾ ಸಾಗಾಟದ ದಂಧೆ ನಡೆಯುತ್ತದೆ ಎಂದು ಪೊಲೀಸರು ತಿಳಿಸಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

Exit mobile version