ಮಾಲ್ಡೀವ್ಸ್ ಗೆ 250 ಡಾಲರ್ ಸಾಲ ನೀಡಿದ ಭಾರತ:

ಕೊರೋನಾ ಸಮಯದಲ್ಲಿ ಕಠಿಣ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಮಾಲ್ಡೀವ್ಸ್ ಗೆ ಭಾರತ 250 ಮಿಲಿಯನ್ ಡಾಲರ್  ಸಾಲವನ್ನು 10 ವರ್ಷಗಳ ಅವಧಿಯಲ್ಲಿ ಮರುಪಾವತಿಸುವ ಷರತ್ತಿನೊಂದಿಗೆ  ನೀಡಲಾಗಿದೆ. ಮಾಲ್ಡೀವ್ಸ್ ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ  ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರು  ನರೇಂದ್ರ ಮೋದಿಯವರಿಗೆ ಮಾಡಿದ ಮನವಿಯ ಮೇರೆಗೆ ಈ ಹಣವನ್ನು ನೀಡಲಾಗಿದೆ. ಮಾಲ್ಡೀವ್ಸ್ ಗೆ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಾಲವನ್ನು ಪಡೆಯಲು  ಸ್ವಾತಂತ್ರ್ಯವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ವಿವರಿಸಿದ್ದಾರೆ.

ಕೋವಿಡ್ -29 ಸಮಯದಲ್ಲಿ ಭಾರತ ಮಾಲ್ಡೀವ್ಸ್ಗೆ ನಿರಂತರ ಸಹಾಯ ಹಸ್ತ ನೀಡಿದೆ. ವೈದ್ಯರ ತಂಡವನ್ನು, ಮಾರ್ಚಲ್ಲಿ ಮಾಲ್ಡೀವ್ಸ್ಗೆ ಕಳಿಸಿತ್ತು. ಎಪ್ರೀಲ್ ನಲ್ಲಿ 6.2 ಟನ್ ಗಳಷ್ಟು ಔಷಧವನ್ನು 4 ಭಾರತೀಯ ನಗರಗಳಿಂದ ವಾಯುಪಡೆ ಮುಖಾಂತರ ವಿಮಾನದಲ್ಲಿ ಸಾಗಿಸಿತ್ತು.ಮೇ ನಲ್ಲಿ 580 ಟನ್ ಗಳಷ್ಟು ಆಹಾರ ಸಹಾಯವನ್ನೂ ನೀಡಿತ್ತು.

ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ಮಾಲ್ಡೀವ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್, ಹಣಕಾಸು ಸಚಿವ ಇಬ್ರಾಹಿಂ ಅಮೀರ್, ಭಾರತೀಯ ಹೈಕಮಿಷನರ್ ಸಂಜಯ್ ಸುಧೀರ್ ಮತ್ತು ಎಸ್ಇಒ ಭಾರತ್ ಮಿಶ್ರಾ ಅವರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಈ ಅನುಧಾನವನ್ನು ಹಸ್ತಾಂತರಿಸಲಾಯಿತು.  ಈ ನೆರವಿಗೆ ಭಾರತ ಸರ್ಕಾರ ಮತ್ತು ಜನತೆಗೆ ಮಾಲ್ಡೀವ್ ಅಧ್ಯಕ್ಷರು ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿದರು.

Exit mobile version