ಬೆಂಗಳೂರು, ಅ. 28: ಮಾಸ್ಕ್ ಧರಿಸುವ ವಿಚಾರವಾಗಿ ವಿಧ ವಿಧವಾದ ನೀತಿ ನೀಯಮಗಳನ್ನು ದೇಶದಾದ್ಯಂತ ಜಾರಿಗೊಳಿಸಲಾಗಿದೆ. ಈಗ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಮಾಸ್ಕ್ ಧರಿಸುವ ವಿಚಾರವಾಗಿ ಹೊಸ ರೂಲ್ಸ್ನ್ನು ತರಲಾಗಿದೆ ಇದು ವಾಹನ ಸವಾರರಿಗೆ ಶಾಕ್ ನೀಡಿದೆ.
ಇದರ ಪ್ರಕಾರ ೫ ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಬೈಕ್, ಕಾರು ಮುಂತಾದ ವಾಹನಗಳಲ್ಲಿ ಒಬ್ಬರೇ ಇದ್ದರೆ ಮಾಸ್ಕ ಧರಿಸಬೇಕೆಂದಿರಲಿಲ್ಲ. ಆದರೆ ಬಿಬಿಎಂಪಿಯ ಹೊಸ ನಿಯಮದ ಅನ್ವಯ ಯಾವುದೇ ವಾಹನಗಳಲ್ಲಿ ಒಬ್ಬರೇ ಇದ್ದರು ಮಾಸ್ಕ್ ಕಡ್ಡಾಯ ಎಂದು ಆದೇಶಿಸಲಾಘಿದೆ. ಮಾರುಕಟ್ಟೆಗೆ ಹೋಗುವಾಗ, ಅಂಗಡಿಗಳಿಗೆ ಹೋಗುವಾಗ ಜನರು ಮಾಸ್ಕ್ ಧರಿಸಲೇಬೇಕು. ಒಂದುವೇಳೆ ಮಾಸ್ಕ್ ಧರಿಸದಿದ್ದರೆ 250 ರೂ ದಂಡ ವಸೂಲಿ ಮಾಡಲಾಗುವುದು ಎಂದು ಪಾಲಿಕೆ ತಿಳಿಸಿದೆ.
ಇನ್ನು 5 ವರ್ಷದವರೆಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಿಲ್ಲ, ಇನ್ನು ಈಜುಕೊಳದಲ್ಲಿ ಈಜುವಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಶ್ರವಣ ಸಾಧನ ಅಳವಡಿಕೆ ಮಾಡಿಕೊಂಡವರಿಗೆ, ಉಸಿರಾಟ ಹಾಗೂ ಹಲ್ಲಿನ ತೊಂದರೆ ಇದ್ದವರಿಗೆ ಮಾಸ್ಕ್ ನಿಂದ ವಿನಾಯಿತಿ ನೀಡಲಾಗಿದೆ ಎಂದು ಬಿಬಿಎಂಪಿ ಹೊಸ ರೂಲ್ಸ್ ತಂದಿದೆ.