ಬೆಂಗಳೂರು, ನ.1: ಮಿನಿ ಉಪಸಮರ ಎಂದೇ ಭಾವಿಸಲಾಗಿರುವ ಶಿರಾ ಮತ್ತು ಆರ್ಆರ್ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿಳಲಿದೆ.
ಮತದಾರರ ಮನವೊಲಿಕೆಗೆ ಪ್ರಮುಖ ರಾಜಕೀಯ ಪಕ್ಷಗಳು ಕೊನೆ ಕ್ಷಣದ ಕಸರತ್ತು ನಡೆಸುತ್ತಿವೆ. ಘಟಾನುಘಟಿ ನಾಯಕರು, ಚಿತ್ರರಂಗದವರು, ಗಣ್ಯಾತಿಗಣ್ಯರು ಸೇರಿದಂತೆ ಅನೇಕರು ಮೂರು ಪಕ್ಷಗಳ ಪರವಾಗಿ ಬರೊಬ್ಬರಿಯಾಗಿ ಬಹಿರಂಗ ಮತಬೇಟೆ ನಡೆಸುತ್ತಿದ್ದಾರೆ. ಈ ರೀತಿಯ ಮತಪ್ರಚಾರಕ್ಕೆ ಇಂದು ತೆರೆಬಿಳಲಿದ್ದು, ಇನ್ನು ಏನಿದ್ದರೂ ಮನೆಮನೆ ಭೇಟಿ ನೀಡಿ ಮತಯಾಚಿಸಬಹುದು.