ಮುನಿರತ್ನ ಹಾಗೂ ಸಂಪುಟ ಸಚಿವರಿಗೆ ಡಿಕೆಶಿ ತಿರುಗೇಟು

ಬೆಂಗಳೂರು, ಅ.30: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ದೇವಾಲಯ ಹಾಗೂ ಚರ್ಚ್​​ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಮುಖ್ಯಮಂತ್ರಿ ಆಗಬೇಕು ಎಂದು ಹೇಳುತ್ತಾರೆ. ಡಿಕೆ ಶಿವಕುಮಾರ್ ಬೆಂಬಲಕ್ಕೆ ಯಾರು ಇಲ್ಲ ಎಂದು ಹೇಳುತ್ತಾರೆ. ಇದು ಸತ್ಯದ ಸಂಗತಿ. ನಾನು ಒಂಟಿ,  ಈ ಭೂಮಿಗೆ ಬರುವಾಗ ನಾನೊಬ್ಬನೇ ಬಂದೆ, ಸಾಯುವಾಗಲು ನನ್ನ ಜೊತೆ ಯಾರು ಬರುವುದಿಲ್ಲ. ಮುನಿರತ್ನ ಅವರು ಅವಾಗ ಸಿನೆಮಾ ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದರು, ಈಗ ನಟರಾಗಿದ್ದಾರೆ, ಅವರಿಗೆ ನಾನು ಹಾರೈಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

ಅನೇಕ ಶಾಸಕರು, ಮಂತ್ರಿಗಳು ಅನೇಕ ರೀತಿಯಲ್ಲಿ ಮಾತನಾಡಿದ್ದಾರೆ. ಆ ಬಗ್ಗೆ ನಾನೀಗ ವ್ಯಾಖ್ಯಾನಿಸುವುದಿಲ್ಲ. ಕಾಂಗ್ರೆಸ್‌ ನನ್ನ ರಕ್ತದಿಂದ ಬಂದಿದೆ. ನನ್ನ ಉಸಿರು ಕಾಂಗ್ರೆಸ್‌ ಎಂದು ಮುನಿರತ್ನ ಅವರೇ ಈ ಹಿಂದೆ ಹೇಳಲಿಲ್ವಾ? ಎಂದು ಪ್ರಶ್ನಿಸಿದರು.

ಪ್ರಚಾರ ಕಾರ್ಯಕ್ಕೆ ತಡೆ ಒಡ್ಡಿದ್ದಾರೆ, ಎಂದರೆ ರಾಜ್ಯದ ಮುಖ್ಯಮಂತ್ರಿಗೆ ಯಾವ ರೀತಿಯ ಆತಂಕವಿದೆ ಎಂಬುದನ್ನು ನೀವೆ ಕಣ್ಣಾರೆ ನೋಡಬಹುದು. ಈ ಹಂತದಲ್ಲಿ ಅವರು ಯಾಕೆ ಕಣ್ಣೀರನ್ನು ಸುರಿಸಬೇಕು? ಅಂತಹ ತೊಂದರೆ ಏನು ಒದಗಿ ಬಂದಿದೆ. ವೋಟರ್ ಐಡಿ ಪ್ರಿಂಟ್ ಮಾಡಿ ಹಣ ಹಂಚುತ್ತಿರುವುದುನಿಜ. ನಕಲಿ ವೋಟರ್ ಐಡಿ ಬಗ್ಗೆ ಇದೆ ಮುನಿರತ್ನ ಬಗ್ಗೆ ಈ ಹಿಂದೆ ಮೋದಿ, ಯಡಿಯೂರಪ್ಪನವರು  ಮಾತನಾಡಿದ್ದಾರೆ. ಈಗ ಅವರನ್ನು ಇದೇ ಮುಖಂಡರು ಸಮರ್ಥನೆ ಮಾಡಿಕೊಳ್ಳಲಿ ಎಂದು ಮುನಿರತ್ನ ಹಾಗೂ ಸಂಪುಟ ಸಚಿವರಿಗೆ ಡಿಕೆಶಿ ತಿರುಗೇಟು ‌ನೀಡಿದರು. ಇದಾದ ಬಳಿಕ ರಾಜರಾಜೇಶ್ವರಿನಗರದ ವೀನಸ್ ಚರ್ಚ್​​​ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Exit mobile version