ಮೆಟ್ರೋ ರೈಲು ಸೇವೆ ದೇಶಾದ್ಯಂತ ಆರಂಭ

ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮೆಟ್ರೋ ರೈಲು ಸೇವೆ ದೇಶಾದ್ಯಂತ ಸೋಮವಾರದಿಂದ ಆರಂಭಗೊಂಡಿದೆ.

ಕೊರೊನಾ ಲಾಕ್ ಡೌನ್ ಕಾರಣದಿಂದ ಕಳೆದ ಮಾರ್ಚ್‌ನಿಂದ ಸಂಪೂರ್ಣ ಸ್ಥಗಿತಗೊಂಡಿತ್ತು.‌ ಆದರೆ ಇದೀಗ ದೇಶದಲ್ಲಿ ‌ಅನ್ ಲಾಕ್ 4.0 ಪ್ರಕ್ರಿಯೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ‌ಮೆಟ್ರೋ ರೈಲು ಸೇವೆ ಆರಂಭಗೊಂಡಿದೆ. ಈ ಹಿಂದೆ ಮೆಟ್ರೋ ರೈಲು ಪ್ರಯಾಣಕ್ಕೆ ನೀಡಲಾಗುತ್ತಿದ್ದ ಟೋಕನ್ ನೀಡುವುದನ್ನು ಕೈಬಿಡಲಾಗಿದ್ದು, ಕೇವಲ ಸ್ಮಾರ್ಟ್ ಕಾರ್ಡ್ ಮೂಲಕ ಪ್ರಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವವರು 1 ಗಂಟೆ ಮುಂಚಿತವಾಗಿ ಆನ್‌ಲೈನ್ ಮೂಲಕ ಸ್ಮಾರ್ಟ್ ಕಾರ್ಡ್ ಗಳನ್ನು ಟಾಪ್ಅಪ್ ಮಾಡಬೇಕಿದೆ. ಉಳಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದ್ದು, ಮಾಸ್ಕ್ ಬಳಕೆ ಕಡ್ಡಾಯಗೊಳಿಸಲಾಗಿದೆ.

Exit mobile version