ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ; ನಗರದಲ್ಲಿ ಪ್ರತಿಭಟನೆ

ಒಂದೆಡೆ ಕಿಲ್ಲರ್ ವೈರಸ್ ಕೊರೋನಾ  ಅಟ್ಟಹಾಸ ಜಾಸ್ತಿಯಾಗ್ತಾ ಇದೆ . ಇನ್ನೊಂದೆಡೆ ಕೊರೋನಾವನ್ನೇ ಕೆಲವೊಬ್ಬರು ಬ್ಯುಸಿನೆಸ್ ಮಾಡಿರೋ ಉದಾಹರಣೆಗಳು ಕಣ್ಮುಂದೆ ನಡೆಯುತ್ತಿದೆ.ಮೆಡಿಕಲ್  ಕಿಟ್ ಖರೀದಿಯಲ್ಲೂ  ಅವ್ಯವಹಾರ ನಡೆದಿರೋ ಆರೋಪದ ಹಿನ್ನಲೆ ಸೋಮವಾರ ಪ್ರತಿಭಟನೆ ನಡೆಸಲಾಯಿತು .

ಬೆಂಗಳೂರಿನ  ಕಾಂಗ್ರೆಸ್ ಭವನದ ಮುಂಭಾಗದಲ್ಲಿ ನಗರ ಘಟಕ ಮುಖಂಡ ಮನೋಹರ್ ನೇತೃತ್ವದಲ್ಲಿ  ಧರಣಿ ಸಡೆಸಲಾಗಿದೆ. ಧರಣಿ ಸಂದರ್ಭದಲ್ಲಿ ಸ್ಯಾನಿಟೈಸರ್ , ಪಿಪಿಎ ಕಿಟ್ , ವೆಂಟಿಲೇಟರ್  ಖರೀದಿಯಲ್ಲಿ ಅವ್ಯವಹಾರ ನಡೆದಿದೆ.  ಇದರ ಬಗ್ಗೆ ಕೂಡಲೇ ತನಿಖೆ ನಡೆಸಬೇಕೆಂದು ಒತ್ತಾಯ ಮಾಡಲಾಗಿದೆ. ಜೊತೆಗೆ  ಹಾಸಿಗೆ ಮೇಲೆ ರೋಗಿಯಂತೆ  ಮಲಗಿ ಆಕ್ರೋಶ ವ್ಯಕ್ತ ಪಡಿಸಲಾಯಿತು .

ಇನ್ನು ಇದೇ ಸಂದರ್ಭದಲ್ಲಿ ಬಡವರ ಹಣವನ್ನು ಸರ್ಕಾರ  ನುಂಗುತ್ತಿದೆ. ರಾಜ್ಯದ ಜನರ ಆರೋಗ್ಯವನ್ನು ಸರ್ಕಾರ ಕಾಪಾಡೋ ಕೆಲಸ ಮಾಡುತ್ತಿಲ್ಲ . ರೋಗಿಗಳ ಹಣವನ್ನು  ಹಗಲು ದರೋಡೆ ಮಾಡುತ್ತಿದೆ ಎಂದು  ಆರ್. ಅಶೋಕ್ , ಶ್ರೀ ರಾಮುಲು ಹಾಗೂ ಕೆ. ಸುಧಾಕರ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು.

Exit mobile version