ಮೈಸೂರಿನಲ್ಲಿ ವಿಚಿತ್ರವಾದ ಶ್ವೇತ ವರ್ಣದ ಗೂಬೆ ಪತ್ತೆ:

ಮೈಸೂರು,ಅ,12– ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ವಿಚಿತ್ರವಾದ ಶ್ವೇತ ವರ್ಣದ ಗೂಬೆ ಪತ್ತೆಯಾಗಿದೆ. ಉರಗ ತಜ್ಞ ಸ್ನೇಕ್ ಶ್ಯಾಮ್ ಪುತ್ರ ಸೂರ್ಯ ಕಿರಣ್ ಅವರು ಹದ್ದು ಗಿಡಗಗಳ ಬಾಯಿಗೆ ತುತ್ತಾಗಲಿದ್ದ ಗೂಬೆಯನ್ನು ರಕ್ಷಿಸಿದ್ದಾರೆ.

ಮೈಸೂರಿನ ಕೆ.ಆರ್.ಮೊಹಲ್ಲಾದಲ್ಲಿ ವಿಚಿತ್ರವಾದ ಗೂಬೆ ನೋಡಿದ ಜನರು ಸೂರ್ಯ ಕಿರಣ್ ಗೆ ಫೋನ್ ಮಾಡಿದ್ದಾರೆ. ಆತ ಸ್ಥಳಕ್ಕೆ ಬಂದು ನೋಡಿದಾಗ ಅದು ಹೆದರಿ ಭಯದಿಂದ ಕೂತಿತ್ತು. ತರುವಾಯ ಅದನ್ನು ಸೂರ್ಯ ಕಿರಣ್ ರಕ್ಷಿಸಿ ಆರೈಕೆ ಮಾಡಿದರು.

ಗೂಬೆ ನಿಶಾಚಾರಿ. ರಾತ್ರಿ ವೇಳೆ ಮಾತ್ರ ಸಂಚರಿಸುವ ಒಂದು ಪಕ್ಷಿ. ಇಲಿ, ಕೀಟಗಳನ್ನು ತಿನ್ನುತ್ತದೆ. ಅಪರೂಪದಲ್ಲಿ ಅಪರೂಪವಾದ ಈ ಗೂಬೆಯ ಹೆಸರು ಕೊಟ್ಟಿಗೆಯ ಗೂಬೆ ಅಂತ. ತುಂಬಾ ವಿರಳವಾದ ಈ ಗೂಬೆ ಮೈಸೂರಿಗೆ ಬಂದ ಬಗೆ ಹೇಗೆ ಎಂಬುವುದು ಪ್ರಶ್ನೆಯಾಗಿದೆ.

Exit mobile version