ಮೊಬೈಲ್‌ ಮೂಲಕ ಸಮನ್ಸ್‌ ನೀಡಲು ಚಿಂತನೆ

ನವದೆಹಲಿ, ಅ. 28: ಪ್ರಸ್ತುತ ಆರೋಪಿಗಳಿಗೆ ಸಮನ್ಸ್‌ನ್ನು ಕಾಗದ ರೂಪದಲ್ಲಿ ನೀಡಲಾಗುತ್ತಿತ್ತು. ಇದರ ಬದಲು ಮೊಬೈಲ್‌ಗಳಿಗೆ ಎಸ್‌ಎಮ್‌ಎಸ್‌, ವಾಟ್ಸಾಪ್‌ ಹಾಗೂ ಇಮೇಲ್‌ಗಳ ಮೂಲಕ ಸಮನ್ಸ್‌ ನೀಡಲು ಸುಪ್ರೀಂ ಕೋರ್ಟ್‌ ಚಿಂತನೆ ನಡೆಸಿದೆ.  ಈ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಡಿಜಿಟಲ್ ವಿಧಾನವನ್ನು ಅಳವಡಿಸಿಕೊಳ್ಳಲು ಮುಂದಾಗಿರುವ ಸುಪ್ರೀಂ ಕೋರ್ಟ್ ರಾಜ್ಯದ ಎಲ್ಲಾ ಹೈಕೋರ್ಟ್ ಹಾಗೂ ರಾಜ್ಯ ಡಿಜಿಪಿಗಳ ಅಭಿಪ್ರಾಯ ಕೇಳಿದೆ.

ಈ ಬಗ್ಗೆ ಪರಿಶೀಲನೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಹಾಗೂ ಎಲ್. ನಾಗೇಶ್ವರ ನೇತೃತ್ವದ ನ್ಯಾಯಪೀಠ, ಹಿರಿಯ ವಕೀಲರು ನೀಡಿರುವ ವರದಿ ಸಂಬಂಧ 4 ವಾರಗಳೊಳಗಾಗಿ ಸಲಹೆ ನೀಡುವಂತೆ ಹೈಕೋರ್ಟ್ ಹಾಗೂ ರಾಜ್ಯ ಡಿಜಿಪಿಗಳಿಗೆ ಸೂಚನೆ ನೀಡಿದೆ.

Exit mobile version