ಯಾವ ರಾಷ್ಟ್ರವು ಸುರಕ್ಷಿತವಾಗಿಲ್ಲಎಚ್ಚರವಾಗಿರಿ: ವಿಶ್ವ ಆರೋಗ್ಯ ಸಂಸ್ಥೆ

ಜಗತ್ತಿನಾದ್ಯಂತ ಕೋವಿಡ್-19 ವೈರಸ್ ಸೋಂಕಿನ ಅಟ್ಟಹಾಸ ಹೆಚ್ಚುತ್ತಲೆ ಇದೆ. ಸದ್ಯಕ್ಕೆ ಕರೋನಾ ಸೋಂಕು ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇನ್ನಷ್ಟು ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ. ಸದ್ಯ ಯಾವುದೇ ರಾಷ್ಟ್ರವೂ ಸುರಕ್ಷಿತವಾಗಿಲ್ಲ. ಎಲ್ಲರೂ ಹುಷಾರಾಗಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇಂದು(ಬುಧವಾರ) ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಕರೋನಾ ವೈರಸ್ ಸೋಂಕು ಇನ್ನಷ್ಟು ಹೆಚ್ಚಾಗುವುದು ಖಚಿತ. ಕರೋನಾ ವೈರಸ್ ನಿಯಂತ್ರಣಕ್ಕೆ ಬಂದರು ಯಾವುದಾದರೂ ಕಡೆ ವೈರಸ್ ಇದ್ದೇ ಇರುತ್ತದೆ. ಸದ್ಯಕ್ಕೆ ಯಾವುದೇ ರಾಷ್ಟ್ರವೂ ಸುರಕ್ಷಿತವಾಗಿಲ್ಲ ಎಂದು ಸ್ಪಷ್ಟವಾದ ಮಾಹಿತಿ ನೀಡಿದೆ.
ಮುಂದಿನ ದಿನಗಲ್ಲಿ ಸೋಂಕು ಇನ್ನಷ್ಟು ಹೆಚ್ಚಾಗುವುದರಿಂದ ನಾವೆಲ್ಲ ಸಜ್ಜಾಗಬೇಕಿದೆ. ಸೋಂಕನ್ನು ಸದ್ಯಕ್ಕೆ ನಿವಾರಿಸಲು ಸಾಧ್ಯವಾಗದ್ದರಿಂದ ಎಲ್ಲರೂ ಇದರೊಂದಿಗೆ ಬದುಕುವುದರೊಂದಿಗೆ ಸೋಂಕಿಗೆ ತುತ್ತಾಗದಂತೆ ಎಲ್ಲಾ ರೀತಿಯ ಮುಂಜಾಗ್ರತೆ ತೆಗೆದಿಕೊಳ್ಳಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪಶ್ಚಿಮ ಪೆಸಿಫಿಕ್‍ನ ಪ್ರಾದೇಶಿಕ ನಿದೇರ್ಶಕ ಡಾ. ತಾಕೇಸಿ ಕಸಾಯ್ ಹೇಳಿದ್ದಾರೆ.
ಅಮೆರಿಕದಲ್ಲಿ ಮತ್ತೆ ಸೋಂಕು ಹೆಚ್ಚಾಗಿದೆ. ಮೊದಲೆ ಮುಂಜಾಗ್ರತೆ ಕ್ರಮ ಕೈಗೊಂಡಿದ್ದರೆ ಅಮೆರಿಕ ಇಂದು ಈ ಪರಿಸ್ಥಿತಿಂಗೆ ಬವರುತ್ತಿರಲಿಲ್ಲ. ಇನ್ನು ಮುಂದೆ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಪ್ರತಿದಿನಕ್ಕೆ 1 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಮೆರಿಕ ಸಾಂಕ್ರಾಮಿಕ ರೋಗಗಳ ತಜ್ಞ ಆಂಥೋನಿ ಫೌಸಿ ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ ಎಂದು ಸಂದೇಶವನ್ನು ನೀಡಿದೆ.

Exit mobile version