ರದ್ದಾಗಲಿದೆಯೇ ಹಾಲ್ಟ್‌ ರೈಲು ನಿಲ್ದಾಣಗಳು?

ನವದೆಹಲಿ, ಅ. 17: ಕೊರೊನಾ ಆತಂಕದ ನಡುವೆ ರೈಲುಗಳ ಓಡಾಟ ಪ್ರಾರಂಭವಾಗಿದ್ದು, ಈ ಮಧ್ಯೆ ಭಾರತೀಯ ರೈಲ್ವೆ ಇಲಾಖೆಯು ನೂತನ ನಿರ್ಧಾರ ಕೈಗೊಳ್ಳಲು ಮುಂದಾಗಿದೆ, ಸುಮಾರು 600 ಎಕ್ಸ್‌ಪ್ರೆಸ್‌ ರೈಲುಗಳನ್ನು ರದ್ದುಗೊಳಿಸುವ ಹಾಗೂ 10,200 ಹಾಲ್ಟ್‌ ರೈಲು ನಿಲ್ದಾಣಗಳನ್ನು ರದ್ದುಗೊಳಿಸುವ ಸಾಧ್ಯತೆ ಇದ್ದು, ಶೀಘ್ರದಲ್ಲಿಯೇ ವೇಳಾ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗ್ತಿದೆ.

ಈಗಿನ ಯೋಜನೆ ಪ್ರಕಾರ 360 ಪ್ಯಾಸೆಂಜರ್‌ ರೈಲುಗಳನ್ನು ಎಕ್ಸ್‌ಪ್ರೆಸ್‌ ರೈಲುಗಳನ್ನಾಗಿ ಹಾಗೂ 120 ಎಕ್ಸ್‌ಪ್ರೆಸ್‌ ರೈಲುಗಳನ್ನು ಸೂಪರ್‌ಫಾಸ್ಟ್‌ ದರ್ಜೆಗೆ ಏರಿಸುವ ಉದ್ದೇಶವಿದೆ. ಇದಕ್ಕೆ ಶೀಘ್ರವೇ ರೈಲ್ವೆ ಸವಾಲಯದಿಂದ ಒಪ್ಪಿಗೆ ಪಡೆಯುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

Exit mobile version