ರಾಹುಲ್ ಗಾಂಧಿಗೆ ಜ್ಞಾನದ ಹಸಿವಿಲ್ಲ; ಒಬಾಮಾ ಟೀಕೆ

ಹೊಸದಿಲ್ಲಿ, ನ. 13: ರಾಹುಲ್ ಗಾಂಧಿಗೆ ಜ್ಞಾನದ ಹಸಿವಿಲ್ಲ ಎಂದು ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಟೀಕಿಸಿದ್ದಾರೆ. ತಮ್ಮ ‘ದಿ ಪ್ರಾಮಿಸ್ಡ್ ಲ್ಯಾಂಡ್’ ಎಂಬ ಪುಸ್ತಕದಲ್ಲಿ ವಿಶ್ವದ ಹಲವು ನಾಯಕರೊಂದಿಗಿನ ಒಡನಾಟದ ಬಗ್ಗೆ ಪ್ರಸ್ತಾಪ ಮಾಡಿರುವ ಒಬಾಮಾ, ಹಲವರ ಕುರಿತು ಮಾತನಾಡಿದ್ದಾರೆ. ಈ ಪುಸ್ತಕದಲ್ಲಿ ರಾಹುಲ್ ಗಾಂಧಿ ಪ್ರಸ್ತಾಪಿಸಿರುವ ಅವರು, ನರ್ವಸ್ ಆಗಿರುವ ಹಾಗೂ ರೂಪುಗೊಳ್ಳದ ಕ್ವಾಲಿಟಿಯನ್ನು ರಾಹುಲ್ ಗಾಂಧಿ ಹೊಂದಿದ್ದಾರೆ.

ಟ್ಯೂಷನ್ ಪಡೆದು ಟೀಚರ್ ಮೆಚ್ಚಿಸಲು ಯತ್ನಿಸುವ ವಿದ್ಯಾರ್ಥಿಯಂತೆ ಅವರಿದ್ದಾರೆ. ಆದರೆ ರಾಹುಲ್ ಗಾಂಧಿ ಅವರ ಅಂತರಾಳದಲ್ಲಿ ಯಾವುದೇ ವಿಷಯದ ಪಾಂಡಿತ್ಯ ಪಡೆಯುವ ಹಸಿವಾಗಲಿ, ಬದ್ಧತೆಯಾಗಲಿ ಹೊಂದಿಲ್ಲ ಎಂದು ಟೀಕಿಸಿದ್ದಾರೆ ಎನ್ನಲಾಗಿದೆ.

ಇದೇ ಪುಸ್ತಕದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ಪ್ರಸ್ತಾಪಿಸಿರುವ ಒಬಾಮಾ, ಮನಮೋಹನ್ ಸಿಂಗ್ ಅವರು ಮ್ಯಾನ್ ಆಫ್‍ ಇಂಟಿಗ್ರಿಟಿ ಎಂದು ಪ್ರಶಂಸೆಯ ಮಾತನಾಡಿದ್ದಾರೆ. ಸಿಂಗ್ ಅವರು ಭಾವನಾತ್ಮಕ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

Exit mobile version