ಲತಾ ಮಂಗೇಶ್ಕರ್‌ರವರ ಆರೋಗ್ಯದಲ್ಲಿ ಏರುಪೇರು: ಐಸಿಯುನಲ್ಲೇ ಮುಂದುವರೆದ ಚಿಕಿತ್ಸೆ

Latha Mangeshkar

ಲತಾ ಮಂಗೇಶ್ಕರ್ ರವರನ್ನು ಕೋವಿಡ್‌ ಕಾರಣದಿಂದಾಗಿ ಕೆಲವು ದಿನಗಳ ಹಿಂದೆ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲು ಮಾಡಲಾಗಿತ್ತು ,ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದರು. “ಅವರ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ “ಎಂದು ವೈದ್ಯರು ಹೇಳಿಕೆ ನೀಡಿದ್ದಾರೆ. ಅವರು ಇನ್ನೂ ಹತ್ತು ದಿನಗಳ ಕಾಲ ಐಸಿಯುನಲ್ಲೇ ಚಿಕಿತ್ಸೆ ಪಡೆಯಬೇಕಾಗುತ್ತದೆ ,10 ದಿನಗಳ  ದಿನಗಳ ನಂತರ ಸಾಮಾನ್ಯ ವಾರ್ಡ್‌ಗೆ  ಶಿಫ್ಠ್‌  ಮಾಡುವ ಸಾಧ್ಯತೆ ಇದೆ ಎಂದು  ವ್ಯೆದ್ಯರು ತಿಳಿಸಿದ್ದಾರೆ.

“ಕೋವಿಡ್‌ ಕಾರಣದಿಂದಾಗಿ ಅಕ್ಕನನ್ನು ನಮಗೆ ನೋಡಲು ಅವಕಾಶ ಸಿಕ್ಕಿಲ್ಲ.ಆರೋಗ್ಯ ಸಿಬ್ಬಂದಿಗಳು ಹೆಚ್ಚಿನ ಕಾಳಜಿಯನ್ನು ವಹಿಸಿಕೊಳ್ಳುತ್ತಿದ್ದಾರೆ ,ವಯಸ್ಸಾದ ಕಾರಣ ಇನ್ನು ಸ್ವಲ್ಪ ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬಹುದು “ ಎಂದು ಸಹೋದರಿ ಉಷಾ ಮಂಗೇಶ್ಕರ್ ಅವರು ತಿಳಿಸಿದ್ದಾರೆ

70 ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದವರು ಲತಾ ಮಂಗೇಶ್ಕರ್ , ಇವರು ಹಲವಾರು ಪ್ರಶಸ್ತಿಗಳಿಗೆ ಕೂಡ ಭಾಜನರಾಗಿದ್ದಾರೆ .ಹಲವಾರು ಅಭಿಮಾನಿಗಳನ್ನು ಹೊಂದಿರುವ ಲತಾಮಂಗೇಶ್ಕರ್ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ

Exit mobile version