ವಾಷಿಂಗ್ಟನ್ ನಲ್ಲಿ ಭೀಕರ ಕೊಲೆ ; ಹೆಚ್ಚಿದ ಆಕ್ರೋಶ

white shape of body and blood stains on asphalt texture

ವಾಷಿಂಗ್ ಟನ್ ನಲ್ಲಿ ಇತ್ತೀಚೆಗಷ್ಟೇ ಕಪ್ಪು ಜನಾಂಗದ ಜಾರ್ಜ್ ಫ್ಲಾಯ್ಡ್ ಹತ್ಯೆಯ ಆಕ್ರೋಶ, ಪ್ರತಿಭಟನೆ  ಜೋರಾಗೆ ನಡೆಯುತ್ತಿದೆ. ಶನಿವಾರ ತಡರಾತ್ರಿ 27 ವರ್ಷದ ರೇಶಾರ್ಡ್ ಬ್ರೂಕ್ಸ್ ಎಂಬ ಕಪ್ಪು ವರ್ಣೀಯನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಅನ್ನೋದು ವರದಿಯಾಗಿದೆ. ಈ ಪ್ರಕರಣದ ಬೆನ್ನಲ್ಲೇ ಅಟ್ಲಾಂಟಾ ಪೊಲೀಸ್ ವರಿಷ್ಠ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಮೇಯರ್ ತಿಳಿಸಿದ್ದಾರೆ.

ಇನ್ನು ರೇಶಾರ್ಡ್ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾಕಾರರು ಇಂಟರ್ ಸ್ಟೇಟ್ ಹೈವೇಯನ್ನು ಬಂದ್ ಮಾಡಿದ್ದಾರೆ. ಅಲ್ಲದೇ ಬ್ರೂಕ್ಸ್ ಹತ್ಯೆ ನಡೆದ ವೆಂಡಿ ರೆಸ್ಟೋರೆಂಟ್ ಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿರುವುದಾಗಿ ವರದಿ ವಿವರಿಸಿದೆ.

ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಮದ್ಯಪಾನ ಮಾಡಿರುವ ಶಂಕೆ ವ್ಯಕ್ತಪಡಿಸಿ ಪರೀಕ್ಷೆಗೆ ಒಳಗಾಗಲು ಸೂಚನೆ ನೀಡಿದ್ದರು. ಆದರೆ ಬ್ರೂಕ್ಸ್ ನಿರಾಕರಿಸಿದ್ದ.ಈ ವೇಳೆ ಬ್ರೂಕ್ಸ್ ನನ್ನು ಬಂಧಿಸಲು ಯತ್ನಿಸಿದ್ದರು. ಅಲ್ಲದೇ ಆತ ಅಲ್ಲಿಂದ ಓಡಲು ಆರಂಭಿಸಿದಾಗ ಪೊಲೀಸರು ಗುಂಡು ಹಾರಿಸಿರುವುದಾಗಿ ತಿಳಿಸಿದ್ದಾರೆ

Exit mobile version