ವಿದ್ಯಾ ಸಂಸ್ಥೆಗಳಿಗೆ ಸಿಹಿ ಸುದ್ದಿ

ಬೆಂಗಳೂರು : ಕೊರೊನಾದಿಂದಾಗಿ ರಾಜ್ಯದಲ್ಲಿ ಹಲವಾರು ತಿಂಗಳಿನಿಂದ ಶಾಲೆಗಳು ಮುಚ್ಚಿವೆ. ಅಂತಿಮ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಿದ್ದಾರೆ. ಈಗ ಕೊರೊನಾ ಭೀತಿಯ ನಡುವೆ ನವೆಂಬರ್ 2ನೇ ವಾರದಲ್ಲಿ ಯುಜಿ, ಪಿಜಿ ಕಾಲೇಜು ಆರಂಭದ ಬಗ್ಗೆ ಚಿಂತನೆ ನಡೆಸಲಾಗಿದೆ ಎಂಬುದಾಗಿ ಶಿಕ್ಷಣ ಇಲಾಖೆ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಈ ಕುರಿತಂತೆ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಅವರು ರಾಜ್ಯ ಸರ್ಕಾರಕ್ಕೆ ಯುಜಿ, ಪಿಜಿ ಕಾಲೇಜು ಆರಂಭದ ಬಗ್ಗೆ ವರದಿ ಕೂಡ ಸಲ್ಲಿಸಿದ್ದಾರೆ ಎನ್ನಲಾಗಿದೆ. ಕಾಲೇಜು ಪ್ರಾರಂಭಕ್ಕೂ ಮುನ್ನಾ ಮಾರ್ಗಸೂಚಿ ಏನ್ ಪಾಲಿಸಬೇಕು ಎಂಬ ಬಗ್ಗೆಯೂ ಸರ್ಕಾರಕ್ಕೆ ತಿಳಿಸಲಾಗಿದೆ ಎನ್ನಲಾಗಿದೆ. ಈ ಮೂಲಕ ಕೊರೋನಾ ಸೋಂಕಿನ ಸಂಕಷ್ಟದ ನಡುವೆಯೂ ನವೆಂಬರ್ ನಲ್ಲಿ ಕಾಲೇಜು ಓಪನ್ ಆಗುತ್ತಾ ಎನ್ನುವ ಬಗ್ಗೆ ಕಾದು ನೋಡಬೇಕಿದೆ.

Exit mobile version