ವಿಯೆನ್ನಾಗೆ ಮೋದಿ ಬೆಂಬಲ

ನವದೆಹಲಿ, ನ. 3: ಆಸ್ಟ್ರಿಯಾ ರಾಜಧಾನಿ  ವಿಯೆನ್ನಾದಲ್ಲಿ ಶಸ್ತ್ರಾಸ್ತ್ರ ಸಜ್ಜಿತವಾಗಿ  ನಡೆದ ಭಯೋತ್ಪಾದನಾ ದಾಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಘಾತ ವ್ಯಕ್ತಪಡಿಸಿದ್ದು, ವಿಯೆನ್ನಾ ಜೊತೆ ನಾವಿದ್ದೇವೆ ಎಂದು ಬೆಂಬಲ ಸೂಚಿಸಿದ್ದಾರೆ.

ಧಾಳಿ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಭೀಕರ ಭಯೋತ್ಪಾದಕ ದಾಳಿಯಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ ಮತ್ತು ದುಃಖಿತನಾಗಿದ್ದೇನೆ ಎಂದು ಹೇಳಿದ್ದಾರೆ.ಈ ದುರಂತ ಸಮಯದಲ್ಲಿ ಭಾರತ ಆಸ್ಟ್ರಿಯಾದೊಂದಿಗೆ ನಿಂತಿದೆ. ನನ್ನ ಆಲೋಚನೆಗಳು ಮೃತರು ಮತ್ತು ಅವರ ಕುಟುಂಬಗಳೊಂದಿಗೆ ಇವೆ.’ ಎಂದು ತಿಳಿಸಿದ್ದಾರೆ.

ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ದಲ್ಲಿ ಉಗ್ರರು ಏಕಾ ಏಕಿ ಗುಂಡು ಹಾರಿಸಿ ಈ ಪೈಕಿ ಇಬ್ಬರು ಮ್ರತರಾಗಿದ್ದು 15 ಮಂದಿಗೆ ಗಾಯವಾಗಿದೆ.ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

Exit mobile version