ಶೀಘ್ರವೇ ಹೋಲ್‍ಸೇಲ್‍ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಫ್ಲಿಪ್‍ಕಾರ್ಟ್

ಆನ್‍ಲೈನ್‍ ಮಾರುಕಟ್ಟೆಯಲ್ಲಿ ಗ್ರಾಹಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಫ್ಲಿಪ್‍ಕಾರ್ಟ್ ಸಂಸ್ಥೆಯು ಹೋಲ್‌ಸೇಲ್‌ ಮಾರುಕಟ್ಟೆಗೆ ಪ್ರವೇಶಿಸುವುದಾಗಿ ಘೋಷಿಸಿದೆ.

ಭಾರತದ ಆನ್‍ಲೈನ್ ಮಾರುಕಟ್ಟೆಯಲ್ಲಿ ಯಶಸ್ಸು ಕಂಡಿರುವ ಫ್ಲಿಪ್‍ಕಾರ್ಟ್‍ ಸಂಸ್ಥೆಯೊಂದಿಗೆ ಅಮೆರಿಕಾದ ಪ್ರತಿಷ್ಠಿತ ವಾಲ್ ಮಾರ್ಟ್ ಸಂಸ್ಥೆ ಇತ್ತೀಚೆಗಷ್ಟೇ ಹೂಡಿಕೆ ಮಾಡಿತ್ತು. ಈ ಬೆನ್ನಲ್ಲೇ ದೇಶದ ಸಗಟು ವ್ಯಾಪಾರದಲ್ಲಿ ಹಿಡಿತ ಸಾಧಿಸಲು ಫ್ಲಿಪ್‌ಕಾರ್ಟ್‌ ಮುಂದಾಗಿದೆ. ಈವರೆಗೂ ಎಲ್ಲಾ ರೀತಿಯ ಪದಾರ್ಥಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡುತ್ತಿರುವ ಫ್ಲಿಪ್‍ಕಾರ್ಟ್‍, ಇದೀಗ ಕಿರಾಣಿ ಅಂಗಡಿಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸೆಳೆಯುವ ನಿಟ್ಟಿನಲ್ಲಿ ಹೋಲ್‌ಸೇಲ್‌ ವ್ಯಾಪಾರಕ್ಕೆ ಮುಂದಾಗಿದೆ. ಇವುಗಳಿಗೆ ನ್ಯಾಯಯುತ ಬೆಲೆಯಲ್ಲಿ ಅಗತ್ಯ ವಸ್ತುಗಳನ್ನು ಪೂರೈಸುವುದಾಗಿ ಫ್ಲಿಪ್‌ಕಾರ್ಟ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

2007 ರಲ್ಲಿ ಸ್ಥಾಪನೆಯಾದ ಫ್ಲಿಪ್‌ಕಾರ್ಟ್ ಸಮೂಹ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳಾದ ಫೋನ್ ಪೇ, ಫ್ಯಾಶನ್ ಸ್ಪೆಷಾಲಿಟಿ, ಮತ್ತು ಇ-ಕಾರ್ಟ್ ಅನ್ನು ಒಳಗೊಂಡಿದೆ. ಮತ್ತು ದ್ವಿತೀಯ ಮತ್ತು ತೃತೀಯ ದರ್ಜೆಯ ಭಾರತದ ನಗರಗಳ ಕೊನೆಯ ಮೈಲಿಯವರೆಗೆ ಸರಕು ಸೇವೆಯನ್ನು ಒದಗಿಸುವ ಲಾಜಿಸ್ಟಿಕ್ಸ್ ಮತ್ತು ವಿತರಣಾ ಸಂಸ್ಥೆಯಾಗಿದೆ.

Exit mobile version