ಭಾರತೀಯ ಗ್ರಾಹಕರಿಗೆ ಪೇಟಿಎಂ ಶುಭ ಸುದ್ದಿಯನ್ನು ನೀಡಿದೆ. ಪೇಟಿಎಂ ಕಂಪೆನಿಯು ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿದೆ. ಪ್ರತಿ ಖರೀದಿಯಲ್ಲೂ ಕ್ಯಾಶ್ಬ್ಯಾಕ್ ನೀಡುತ್ತಿರುವುದು ಈ ಕಾರ್ಡ್ನ ವಿಶೇಷತೆಯಾಗಿದೆ.
ಈ ಕಾರ್ಡ್ ಅನೇಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಮುಂದಿನ 12-18 ತಿಂಗಳೊಳಗಾಗಿ 20 ಲಕ್ಷ ಕ್ರೆಡಿಟ್ ಕಾರ್ಡ್ಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ. ಅಪ್ಲಿಕೇಷನ್ ಮೂಲಕ ಕ್ರೆಡಿಟ್ ಕಾರ್ಡ್ ಪಿನ್ ಬದಲಿಸಬಹುದು, ವಿಳಾಸ ನವೀಕರಿಸಬಹುದು, ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡುವಂತಹ ಹೊಸ ಆವಿಷ್ಕಾರವನ್ನು ಮಾಡಲಾಗಿದೆ. ಕಾರ್ಡ್ನಿಂದಾಗುವ ವಂಚನೆ ತಪ್ಪಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.
ಇದರ ಜತೆಗೆ ವಿಮೆ ಸೌಲಭ್ಯವನ್ನು ನೀಡಲಾಗಿದೆ. ಕ್ಯಾಶ್ ಬ್ಯಾಕ್, ಗಿಫ್ಟ್ ವೋಚರ್ ರೂಪದಲ್ಲಿರುತ್ತದೆ. ಗ್ರಾಹಕರ ಹಿನ್ನಲೆ ಹಾಗೂ ಅವರ ವಹಿವಾಟು, ಮಾರಾಟದ ವಿವರವನ್ನು ಪರಿಶೀಲಿಸಿ ನಂತರ ಕ್ರೆಡಿಟ್ ಕಾರ್ಡ್ ನೀಡುತ್ತದೆ. ಅಪ್ಲಿಕೇಷನ್ ಪ್ರಕ್ರಿಯೆ ಆನ್ಲೈನ್ ಆಗಿರುತ್ತದೆ ಎಂದು ತಿಳಿಸಿದೆ.