ಶ್ರೀಕಿಯ ಎನ್ ಕೌಂಟರ್ ಸಾಧ್ಯತೆ? Congress ಮಾಡ್ತಿದೆ ಗಂಭೀರ ಆರೋಪ

ರಾಜ್ಯದಲ್ಲಿ ಬಿಟ್ಕಾಯಿನ್ಹಗರಣಕ್ಕೆ (Bitcoin Scam) ದಿನಕ್ಕೊಂದು ಟ್ವಿಸ್ಟ್ಸಿಕ್ತಿದೆ. ಹೊಸ ಹೊಸ ಕತೆಗಳು ಹುಟ್ಟಿ ಕೊಳ್ಳುತ್ತಿವೆ. ಬಿಜೆಪಿ (BJP) ಹಾಗೂ ಕಾಂಗ್ರೆಸ್(Congress) ನಡುವೆ ಭರ್ಜರಿ ಕೆಸರೆರಚಾಟ ನಡೀತಿದೆ. ಇವತ್ತು ಹಗರಣಕ್ಕೆ ಹೊಸತೊಂದು ಶಾಕಿಂಗ್ರೂಪ ಕೊಟ್ಟಿದೆ ಕಾಂಗ್ರೆಸ್‌. ಅದೇಂನಂದ್ರೆ ಬಿಟ್ಕಾಯಿನ್ಹಗರಣದ ರೂವಾರಿ  ಹ್ಯಾಕರ್ ಶ್ರೀಕಿ (Hacker Sriki) ಪ್ರಾಣ ಅಪಾಯದಲ್ಲಿದೆ ಅನ್ನೋದು.

ಹ್ಯಾಕರ್ ಶ್ರೀಕಿಯನ್ನು ಯಾವ ಕ್ಷಣದಲ್ಲಾದ್ರೂ ಎನ್ಕೌಂಟರ್ಮಾಡೋ ಸಾಧ್ಯತೆ ಇದೆ ಅಂತ ಕಾಂಗ್ರೆಸ್ ವಕ್ತಾರ ಸಂಕೇತ್ ಏಣಗಿ (Congress Spokeperson Sanket Yenagi) ಗಂಭೀರ  ಆರೋಪ ಮಾಡಿದ್ದಾರೆ. ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಸಂಕೇತ್ ಏಣಗಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಉತ್ತರ ಪ್ರದೇಶ ಪೊಲೀಸರಿಂದ ಎನ್ ಕೌಂಟರ್ ಗೆ ಬಲಿಯಾದ ವಿಕಾಸ್ ದುಬೆ ಪ್ರಕರಣವನ್ನು ಉದಾಹರಣೆಯಾಗಿ ನೀಡಿದ್ದಾರೆ.

ಸಂಕೇತ್ ಏಣಗಿ ಟ್ವೀಟ್

ಉತ್ತರ ಪ್ರದೇಶದ ಅಪರಾಧಗಳಲ್ಲಿಯ ತನ್ನ ಪಾತ್ರ ಬಹಿರಂಗವಾಗದಂತೆ  ಬಿಜೆಪಿ ಸರ್ಕಾರ  ಪೊಲೀಸ್ ಎನ್ಕೌಂಟರ್ ಮುಖೇನ ಆರೋಪಿ ವಿಕಾಸ ದುಬೆಯ ಹತ್ಯೆಯಂತೆಯೇ ಕರ್ನಾಟಕದ ಬಿಜೆಪಿ ಸರ್ಕಾರ ತನ್ನ ಪಕ್ಷದವರ ರಕ್ಷಣೆಗೋಸ್ಕರ Bitcoin_Scandal ನ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರಿಕಿಯ  ಪೊಲೀಸ್ ಎನ್ ಕೌಂಟರ್ ಮಾಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ವಕ್ತಾರ, ವಕೀಲ ಸಂಕೇತ್ ಏಣಗಿ ಗಂಭೀರ ಆರೋಪ ಮಾಡಿದ್ದಾರೆ

ಗ್ಯಾಂಗ್ಸ್ಟರ್ವಿಕಾಸ್ ದುಬೆ ಎನ್ ಕೌಂಟರ್

ಗ್ಯಾಂಗ್‌ಸ್ಟರ್‌ ವಿಕಾಸ್ ದುಬೆಯನ್ನು ಮಧ್ಯಪ್ರದೇಶದಲ್ಲಿ ಉಜ್ಜಯಿನಿಯಲ್ಲಿ ಬಂಧಿಸಲಾಗಿತ್ತು. ಆದರೆ, ಮಧ್ಯಪ್ರದೇಶದ ಉಜ್ಜಯಿನಿಯಿಂದ ಉತ್ತರ ಪ್ರದೇಶದ ಶಿವ್ಲಿಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಕಾರ್ ಕಾನ್ಪುರದ ಬಳಿ ಪಲ್ಟಿಯಾಗಿತ್ತು. ಈ ವೇಳೆ ವಿಕಾಸ್ ದುಬೆ ಪೊಲೀಸರ ಬಳಿ ಇದ್ದ ಗನ್ ಕಿತ್ತುಕೊಂಡು, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಕೂಡಲೇ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿತ್ತು.

ಇನ್ನೂ ಈ ಎನ್‌ಕೌಂಟರ್‌ ಕುರಿತು ಟ್ವೀಟ್ ಮೂಲಕ ಕಟುವಾಗಿ ವಿಮರ್ಶೆ ಮಾಡಿದ್ದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, “ಗ್ಯಾಂಗ್‌ಸ್ಟರ್‌ ವಿಕಾಸ್ ದುಬೆ ಪ್ರಯಾಣಿಸಿದ್ದ ಪೊಲೀಸ್ ವಾಹನವನ್ನು ಉರುಳಿಸಿ, ಆತನನ್ನು ಎನ್‌ಕೌಂಟರ್‌ ಮಾಡುವ ಮೂಲಕ, ಉರುಳಬೇಕಿದ್ದ ಉತ್ತರಪ್ರದೇಶ ಸರ್ಕಾರವನ್ನು ಉಳಿಸಲಾಗಿದೆ” ಎಂದು ವಾಗ್ದಾಳಿ ನಡೆಸಿದ್ದರು.

ಯಾರು ಹ್ಯಾಕರ್ ಶ್ರೀಕಿ?

ಕನ್ನಡದ ಹುಡುಗ ಶ್ರೀಕಿ ಬಾಲ್ಯದಲ್ಲೇ ಬುದ್ಧಿವಂತ, ಆದರೆ ಈತನ ಬುದ್ಧಿವಂತಿಕೆ ಖರ್ಚಾಗಿದ್ದೆಲ್ಲಾ ಕಾನೂನು ಬಾಹಿರ ಕೆಲಸಗಳಿಗೇನೆ. 4ನೇ ತರಗತಿಯಲ್ಲಿ ಇರುವಾಗಲೇ ಶ್ರೀಕಿ ಹ್ಯಾಕರ್​ಗಳ ಗುಂಪಿನ ಸದಸ್ಯನಾಗಿದ್ದ. ಬಾಲ್ಯದಲ್ಲೇ ಈತನ ಅಂತರ್ಜಾಲ ಕಳ್ಳಾಟ ಶುರುವಾಗಿದೆ. ದೇಶ ವಿದೇಶಗಳನ್ನ ಸುತ್ತಿದ್ದ ಶ್ರೀಕಿ 2015ರಲ್ಲಿ ಭಾರತಕ್ಕೆ ಮರಳಿರುತ್ತಾರೆ. ಭಾರತಕ್ಕೆ ಬರುವ ಮುಂಚೆ ನೆದರ್‌ ಲ್ಯಾಂಡ್ಸ್ ನಲ್ಲಿ ನೆಲೆಸಿದ್ದ. ಇನ್ನೂ ನೆದರ್‌ಲ್ಯಾಂಡ್ಸ್‌ನಲ್ಲಿ ಶ್ರೀಕಿ ಜೊತೆಯಲ್ಲಿ ಇದ್ದ  ಡ್ರೈವರ್ ವಾಲಿದ್ದ್  ಶ್ರೀಕಿ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದ. ಮನೆಯಲ್ಲಿದ್ದ 2 ಲ್ಯಾಪ್ ಟಾಪ್, 2 ಫೋನ್ ಗಳು ಹಾಗೂ ಪಾಸ್‌ಪೋರ್ಟ್ ಗಳನ್ನು ಕಳ್ಳತನ ಮಾಡಿದ್ದ ಡ್ರೈವರ್ ವಾಲಿದ್ದ್.

3 ಮಿಲಿಯನ್ ಬಿಟ್ ಕಾಯಿನ್ ಕರೆನ್ಸಿಗಳು

ಶ್ರೀಕಿ ಅಕೌಂಟ್ ನಲ್ಲಿ ಸುಮಾರು 3 ಮಿಲಿಯನ್ ಬಿಟ್ ಕಾಯಿನ್ ಕರೆನ್ಸಿಗಳು ಸಹ ಇದ್ದವು. ಶ್ರೀಕಿ ಲ್ಯಾಪ್ ಟಾಪ್ ಕಳ್ಳತನ ಆಗಿರುವುದರಿಂದ ಅಕೌಂಟ್ ನಲ್ಲಿ ಇದ್ದ ಕರೆನ್ಸಿಗಳು ಎಲ್ಲವೂ ಸ್ಟಾಕ್‌ ಆಗಿರುತ್ತದೆ. ಶ್ರೀಕೃಷ್ಣ ಮತ್ತೆ ಹಳೆಯ ಸ್ನೇಹಿತರನ್ನು ಹುಡುಕಿಕೊಂಡು ಫ್ರಾನ್ಸ್, ಜರ್ಮನಿ ಸೇರಿದಂತೆ ಇನ್ನೂ ಹಲವು ದೇಶವನ್ನು ಸುತ್ತುತ್ತಾನೆ. ಅಲ್ಲಿ ಯಾವುದೇ ರೀತಿಯ ಪ್ರಯೋಜನವಾಗದೆ 2015ಕ್ಕೆ ಭಾರತಕ್ಕೆ ಹಿಂದಿರುಗುತ್ತಾನೆ ಶ್ರೀಕೃಷ್ಣ.

Exit mobile version