ಸೌಂದರ್ಯ ಹೆಚ್ಚಿಸಲು ಬಳಸಿ ಅಲವೀರ

ನಿತ್ಯ ಜೀವನದಲ್ಲಿ ನಮಗೆ ಪ್ರಕ್ರತಿಯಲ್ಲಿ ಅನೇಕ ಬಗೆಯ ಆರೋಗ್ಯ ಗಿಡಗಳು ಸಿಗುತ್ತವೆ, ಅದರಲ್ಲಿ ಅಲವೀರ ಗಿಡವೂ ಒಂದು. ಇದು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಉಪಯುಕ್ತವಾಗಿದೆ. ಸೋಪು, ಶಾಂಪೂ,ಅನೇಕ ಬಗೆಯ ಕ್ರೀಮುಗಳು, ಬಾಡೀ ಲೋಷನ್ ಗಳು, ಕೂದಲ ಆರೈಕೆ, ಚರ್ಮದ ಆರೈಕೆಗಳು, ಮುಂತಾದ ಸೌಂದರ್ಯ ವರ್ಧಕಗಳಲ್ಲಿ ಈ ಅಲವೀರವನ್ನು ಬಹಳಷ್ಟು ಹೆಚ್ಚಾಗಿ ಬಳಸಲಾಗುತ್ತದೆ.

ಹೊಟ್ಟೆಯೊಳಗಿನ ಸಮಸ್ಯೆಗಳಿಗೂ ಇದನ್ನು ಉಪಯೋಗಿಸಬಹುದಾಗಿದೆ. ಇದರ ಜ್ಯೂಸ್ ಕುಡಿಯುವುದರಿಂದ  ದೇಹಕ್ಕೆ ಉಪಯುಕ್ತವಾದ ಪೌಷ್ಟಿಕಾಂಶಗಳನ್ನು ಸಿಗುತ್ತವೆ. ಚಯಾಪಚಯ ಕ್ರಿಯೆ ಸರಾಗವಾಗುವಂತೆ ನೋಡಿಕೊಳ್ಳುತ್ತದೆ, ದೇಹಕ್ಕೆ ಬೇಡದ ವಿಷಕಾರೀ ಅಂಶಗಳು ಮತ್ತು ಕೊಬ್ಬನ್ನು ಕರಗಿಸಿ ದೇಹವನ್ನು ಶುದ್ದಗೊಳಿಸುತ್ತದೆ.  ಇದು ತೂಕವನ್ನು ಕಳೆದು ಕೊಳ್ಳಲು ಸಹಕಾರಿಯಾಗಿದೆ. ಹೆಣ್ಣು ಮಕ್ಕಳ ಋತುಚಕ್ರ ಸಮಸ್ಯೆಗೂ ಇದು ಪರಿಣಾಮಕಾರಿ ಔಷಧಿಯಾಗಿದೆ

ಗ್ಯಾಸ್ಟಿಕ್ ಸಮಸ್ಯೆ, ಪಿತ್ತ ಸಮಸ್ಯೆ, ಮುಂತಾದ ಸಮಸ್ಯೆಗಳಿಗೆ ಗಂಡಸರಿಗೂ ಹೆಂಗಸರಿಗೂ ಹಾಗೂ ಮಕ್ಕಳಿಗೂ   ಈ ಅಲೊವೀರ ಲೋಳೆರಸದಿಂದ ಅನೇಕ ರೀತಿಯ ಪ್ರಯೋಜನವಿದೆ. ಮೂತ್ರ ವಿಸರ್ಜನೆ ಸಲೀಸಾಗಿ ಆಗಲು ಉಪಕಾರಿಯಾಗಿದೆ. ಅಲವೀರದ ಎಲೆಯನ್ನು ತಂದು ಅದರ ಲೋಳೆಯನ್ನು ಕಟ್ ಮಾಡಿ ತೆಗೆದು ಎರಡು ಮೂರು ತುಂಡು ಲೋಳೆಗೆ ಒಂದು ತುಂಡು ಶುಂಠಿ, ಅರ್ಧ ಲಿಂಬೆ ರಸವನ್ನು ಸೇರಿಸಿ ಮಿಕ್ಸಿಯಲ್ಲಿ ಹಾಕಿ ನೀರು ಸೇರಿಸಿ ತಯಾರಿಸಿ ಕುಡಿದರೆ ಉತ್ತಮ ಪರಿಣಾಮ ಕಾಣಬಹುದು.

ಮುಖದ ಚರ್ಮ ಕಳೆಕಳೆಯಾಗಿರುವಲ್ಲಿ ಇದರ ಜೆಲ್ಲನ್ನು ಒಂದು ಟಿ ಸ್ಪೂನ್  ನಿಂಬೆ ರಸದೊಂದಿಗೆ ಅಥವಾ ಬಾದಾಮೀ ಎಣ್ಣೆಯೊಂದಿಗೆ  ಬೆರಸಿ, ಅಥವಾ ಬರೀ ಲೋಳೆ ರಸವನ್ನೇ ಬೇಕಾದರೂ 10 ದಿನ ಹಚ್ಚಿದರೆ ನಿಮಗೇ ಇದರ ಬೆನಿಫಿಟ್  ತಿಳಿಯುತ್ತದೆ.  ಕೂದಲ ಆರೈಕೆಯಲ್ಲೂ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರ ಲೋಳೇ ತೆಗೆದು ತಲೆಕೂದಲಿಗೆ ಹಾಗೂ ಕೂದಲ ಬುಡಕ್ಕೆ ಎಣ್ಣೆ ಜೊತೆ ಹಚ್ಚಿಕೊಂಡರೆ ಕೂದಲ ಬೆಳವಣಿಗೆ ಹಾಗೂ ಕೂದಲ ಹೊಳಪು ಚೆನ್ನಾಗಿ ಆಗುವುದರಲ್ಲಿ ಸಂದೇಹವಿಲ್ಲ.

Exit mobile version