ಕಾರ್ಯಕ್ಷಮತೆಯ ಆಧಾರದ ಮೇಲೆ 10,000 ಉದ್ಯೋಗಿಗಳನ್ನು ವಜಾಗೊಳಿಸಲು ಗೂಗಲ್‌ ನಿರ್ಧಾರ‌!

India : ಗೂಗಲ್(Google) ಮಾತೃಸಂಸ್ಥೆ ಆಲ್ಫಾಬೆಟ್ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಬೇಕು ಮತ್ತು ಇತರ ಡಿಜಿಟಲ್ ಕಂಪನಿಗಳಿಗೆ(10K Google Employees) ಹೋಲಿಸಿದರೆ ಆಲ್ಪಾಬೆಟ್‌ ಕಂಪನಿಯು ತನ್ನ ಉದ್ಯೋಗಿಗಳಿಗೆ ಅತಿ ಹೆಚ್ಚು ಸಂಬಳ ಪಾವತಿಸುತ್ತದೆ ಎಂದು ಹೆಡ್ಜ್ ಫಂಡ್ ಬಿಲಿಯನೇರ್ ಕ್ರಿಸ್ಟೋಫರ್ ಹೋಹ್ನ್ ಗೂಗಲ್ ಮೂಲ ಕಂಪನಿಗೆ ಪತ್ರ ಬರೆದಿದ್ದಾರೆ.

ಹೀಗಾಗಿ ಗೂಗಲ್ ಉದ್ಯೋಗಿಗಳ(10K Google Employees) ಕಾರ್ಯಕ್ಷಮತೆ ಸುಧಾರಣೆ ಯೋಜನೆಯನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದೆ. ಅದರ ಭಾಗವಾಗಿ 10,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ.

ಗೂಗಲ್ ತನ್ನ ಮ್ಯಾನೇಜರ್‌ಗಳಿಗೆ 6% ಸಿಬ್ಬಂದಿ ಅಥವಾ 10,000 ಉದ್ಯೋಗಿಗಳನ್ನು ವಜಾಗೊಳಿಸಲು ಆದೇಶಿದೆ.

ವರದಿಗಳ ಪ್ರಕಾರ, ಕಳಪೆ ಪ್ರದರ್ಶನ ನೀಡುತ್ತಿರುವ ಉದ್ಯೋಗಿಗಳನ್ನು ವಜಾಗೊಳಿಸಲು ಸೂಚಿಸಲಾಗಿದೆ.

ಅದರೊಂದಿಗೆ ಉದ್ಯೋಗಿಗಳಿಗೆ ನೀಡುವ ಬೋನಸ್‌ಗಳು ಮತ್ತು ಸ್ಟಾಕ್‌ಗಳಂತಹ ಪರ್ಕ್‌ಗಳನ್ನು ಕಡಿಮೆ ಮಾಡಲು ಕಾರ್ಯಕ್ಷಮತೆಯ ರೇಟಿಂಗ್‌ಗಳನ್ನು ಸಹ ಬಳಸಿಕೊಳ್ಳಬಹುದು ಎಂದು ಸೂಚಿಸಲಾಗಿದೆ. 

ಇದನ್ನೂ ಓದಿ : https://vijayatimes.com/rehmat-tarikere-slashing-statement/

ಕಂಪನಿಯ ಮುಖ್ಯ ಹೂಡಿಕೆದಾರ ಹೆಡ್ಜ್ ಫಂಡ್‌ನಿಂದ  ಬಂದ ಒತ್ತಡದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಹೆಡ್ಜ್ ಫಂಡ್ ಬಿಲಿಯನೇರ್ ಕ್ರಿಸ್ಟೋಫರ್ ಹೋಹ್ನ್ ಅವರು, ಕಂಪನಿಯಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಸಲಹೆ ನೀಡುವಂತೆ ಗೂಗಲ್ ಮಾತೃ ಸಂಸ್ಥೆ ಆಲ್ಫಾಬೆಟ್‌ಗೆ ಪತ್ರ ಬರೆದಿದ್ದಾರೆ ಎಂದು ವರದಿ ಹೇಳಲಾಗಿದೆ. 

https://youtu.be/HmN6BjXEDyg

ಕಂಪನಿಯ ಅತಿಯಾದ ಉದ್ಯೋಗಿಗಳ ಸಂಖ್ಯೆಯು ಪ್ರಸ್ತುತ ವ್ಯಾಪಾರ ಪರಿಸ್ಥಿತಿಯನ್ನು ಪೂರೈಸುವುದಿಲ್ಲ.

ಹೀಗಾಗಿ ಕಡಿಮೆ ಸಂಭಾವನೆ ಪಡೆಯುವ ವೃತ್ತಿಪರರೊಂದಿಗೆ  ಗೂಗಲ್‌ಅನ್ನು ಸಮರ್ಪಕವಾಗಿ ನಿರ್ವಹಿಸಬಹುದೆಂದು ಕ್ರಿಸ್ಟೋಫರ್ ಹೋಹ್ನ್  ಹೇಳಿದ್ದಾರೆ.

ಇದನ್ನೂ ಓದಿ : https://vijayatimes.com/talia-sinott-eats-biscuits-as-food/

ಇತ್ತೀಚಿನ ದಿನಗಳಲ್ಲಿ ಭಾರತ(India) ಸೇರಿದಂತೆ ಜಗತ್ತಿನ ಅನೇಕ ದೈತ್ಯ ಟೆಕ್‌ಸಂಸ್ಥೆಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿವೆ. 

ಈಗಾಗಲೇ ಫೇಸ್‌ಬುಕ್‌, ಟ್ವೀಟರ್‌, ಇನ್ಪೋಸಿಸ್‌ ಸೇರಿದಂತೆ ಅನೇಕ ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿವೆ. ಇದೀಗ ಗೂಗಲ್‌ ಕೂಡಾ ಉದ್ಯೋಗಿಗಳ ಕಡಿತಕ್ಕೆ ಮುಂದಾಗಿದೆ.

Exit mobile version