12 ದೊಡ್ಡ ರಾಜ್ಯಗಳು ಬಿಜೆಪಿ ತೆಕ್ಕೆಗೆ: 2024ರ ಮೋದಿ ಹಾದಿ ಸುಗಮ..?!

ನಿನ್ನ ಹೊರಬಿದ್ದ ಪಂಚರಾಜ್ಯಗಳ ಫಲಿತಾಂಶದೊಂದಿಗೆ ಮಧ್ಯಪ್ರದೇಶ, ಛತ್ತೀಸ್ಗಢ (12 big states with BJP) ಮತ್ತು ರಾಜಸ್ಥಾನ (Madhya Pradesh, Chhattisgarh and Rajasthan)

ಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಈಗ ಭಾರತದ 12 ರಾಜ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇನ್ನೊಂದೆಡೆ 4 ರಾಜ್ಯಗಳಲ್ಲಿ ಮೈತ್ರಿ ಪಕ್ಷವಾಗಿ ಅಧಿಕಾರದಲ್ಲಿದೆ. ಏತನ್ಮಧ್ಯೆ, ಕಾಂಗ್ರೆಸ್

ಹಿಮಾಚಲ ಪ್ರದೇಶ, ಕರ್ನಾಟಕ (Karnataka) ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮಾತ್ರ ಅಧಿಕಾರದ ಸೂತ್ರ ಹಿಡಿದಿದೆ.

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಭರ್ಜರಿ ಜಯ ಸಾಧಿಸುವುದರೊಂದಿಗೆ, ಈಗ ಭಾರತದ 28 ರಾಜ್ಯಗಳ ಪೈಕಿ 12 ರಾಜ್ಯಗಳನ್ನು ಆಳುತ್ತಿರುವುದರಿಂದ ಪಕ್ಷದ

ರಾಜಕೀಯ ಕ್ಷೇತ್ರವು ಗಮನಾರ್ಹವಾಗಿ ವಿಸ್ತರಿಸಿದೆ. ಡಿಸೆಂಬರ್ (December) 2023ರ ಹೊತ್ತಿಗೆ, ಬಿಜೆಪಿ ಆಡಳಿತದ ಪ್ರದೇಶಗಳು ಭಾರತದ ಭೂಪ್ರದೇಶದ ಶೇ.58 ಪ್ರತಿಶತವನ್ನು ಹೊಂದಿದ್ದು,

ಜನಸಂಖ್ಯೆಯ ಶೇ.57 (12 big states with BJP) ಪ್ರತಿಶತವನ್ನು ಹೊಂದಿದೆ.

ಇದೇ ವೇಳೆ ಕಾಂಗ್ರೆಸ್ (Congress) ಆಡಳಿತದ ರಾಜ್ಯಗಳು ದೇಶದ ಶೇ.41ರಷ್ಟು ಭೂಪ್ರದೇಶವನ್ನು ಹೊಂದಿದ್ದು, ಶೇ.43ರಷ್ಟು ಜನಸಂಖ್ಯೆಯನ್ನು ಹೊಂದಿದೆ. 2014ರಲ್ಲಿ ಪ್ರಧಾನಿ ಮೋದಿ

ನೇತೃತ್ವದ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ, ಬಿಜೆಪಿ ಪಕ್ಷವು ರಾಜಸ್ಥಾನ, ಗುಜರಾತ್ (Gujarat) ಮಧ್ಯಪ್ರದೇಶ, ಗೋವಾ ಮತ್ತು ಛತ್ತೀಸ್ಗಢ ಸೇರಿದಂತೆ 10 ರಾಜ್ಯಗಳಲ್ಲಿ ಆಡಳಿತದಲ್ಲಿತ್ತು.

ಇದೀಗ ಈ ಸಂಖ್ಯೆಯನ್ನು 12ಕ್ಕೆ ಏರಿಕೆಯಾಗಿದ್ದು, ಬಿಜೆಪಿಯ ರಾಜಕೀಯ ಶಕ್ತಿ ಹೆಚ್ಚಿದೆ.

2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಪಂಚರಾಜ್ಯಗಳ ಫಲಿತಾಂಶ ಭಾರೀ ಮಹತ್ವ ಪಡೆದುಕೊಂಡಿತ್ತು. ಕೇಂದ್ರದಲ್ಲಿ ಅಧಿಕಾರಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು

ಕಿತ್ತೊಗೆಯಲು ಈ ಪಂಚರಾಜ್ಯಗಳ ಚುನಾವಣೆ ಪ್ರಮುಖ ರಾಜಕೀಯ ದಾಳವಾಗಿತ್ತು. ಹೀಗಾಗಿಯೇ ಈ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿತ್ತು. ಆದರೆ ಅಂತಿಮವಾಗಿ ಪಂಚರಾಜ್ಯಗಳ

ಮತದಾರ ಬಿಜೆಪಿ ಕಡೆಗೆ ಹೆಚ್ಚಿನ ಒಲವು ತೋರಿರುವುದು ಸ್ಪಷ್ಟವಾಗಿದೆ. ಈ ಪಂಚರಾಜ್ಯಗಳ ಫಲಿತಾಂಶ 2024ರ ಲೋಕಸಭಾ ಚುನಾವಣೆಗೆ ಮೋದಿ (Modi) ಅವರ ಹಾದಿಯನ್ನು ಸುಗಮಗೊಳಿಸಿದೆ.

ಉತ್ತರಾಖಂಡ್ (Uttarakhand), ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ಗೋವಾ, ಅಸ್ಸಾಂ , ತ್ರಿಪುರ, ಮಣಿಪುರ (Manipura), ಅರುಣಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತು

ಛತ್ತೀಸ್ಘಡ ರಾಜ್ಯಗಳು ಬಿಜೆಪಿ ತೆಕ್ಕೆಗೆ ಬಂದಿರುವುದು ಮೋದಿಯವರ 2024ರ ಹಾದಿಯನ್ನು ಸುಗಮಗೊಳಿಸಿದ್ದರೆ, ಇನ್ನೊಂದೆಡೆ ಪ್ರಾದೇಶಿಕ ಪಕ್ಷಗಳು ಬಿಜೆಪಿಯತ್ತ ಹೆಚ್ಚಿನ ಒಲವು ತೋರುವ ಸಾಧ್ಯತೆಗಳು

ಹೆಚ್ಚಿವೆ. ಈ ಫಲಿತಾಂಶದಿಂದಾಗಿ ಕಾಂಗ್ರೆಸ್ ನೇತೃತ್ವದ ʼಇಂಡಿಯಾʼ (INDIA) ಮೈತ್ರಿಕೂಟದ ಉತ್ಸಾಹವು ಕುಗ್ಗಿದ್ದು, ಈ ಫಲಿತಾಂಶ ಇಂಡಿಯಾ ಮೈತ್ರಿಕೂಟದ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಇದನ್ನು ಓದಿ: ಇಗ್ನೊದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ; 81,100 ಆಕರ್ಷಕ ವೇತನ..!

Exit mobile version