ಕಾಬೂಲ್ ನಿಂದ 120 ಭಾರತೀಯರು ಭಾರತಕ್ಕೆ ಆಗಮನ

ಕಾಬೂಲ್ ಆ 17  : ತಾಲಿಬಾನ್ ಉಗ್ರಗಾಮಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಹಿನ್ನಲೆಯಲ್ಲಿ ಸಾಕಷ್ಟು ಮಂದಿ ಅಫ್ಘಾನಿಸ್ತಾನವನ್ನು ಬಿಟ್ಟು ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಭಾರತದ ರಾಯಭಾರಿ ಕಚೇರಿಯಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳು ಇಂದು ಗುಜರಾತ್ ನ ಜಾಮ್ ನಗರಕ್ಕೆ ಬಂಧಿಳಿದ್ದಿದ್ದಾರೆ.

ಈ ಹಿನ್ನಲೆಯಲ್ಲಿ ಭಾರತದ ವಾಯುಸೇನೆ ಆಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಉದ್ಯೋಗಿಗಳು ಸೇರಿದಂತೆ ಸುಮಾರು 120 ಮಂದಿ ಭಾರತೀಯನ್ನು ಹೊತ್ತ ಭಾರತೀಯ ವಾಯುಸೇನೆ ಸಿ – 17 ವಿಮಾನ ಇಂದು ಜಾಮ್ ನಗರವನ್ನು ಬಂದು ತಲುಪಿದೆ. ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಎಲ್ಲ ಉದ್ಯೋಗಿಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ತಾಲಿಬಾನಿಗಳ ಬೆದರಿಕೆಯ ನಡುವೆ ಕಳೆದ ಸೋಮವಾರದಿಂದ ನಡೆಯುತ್ತಿದೆ. ಭಾರತೀಯ ವಾಯುಸೇನೆಯು ಭಾರತೀಯ ರಾಯಭಾರಿಗಳೊಂದಿಗೆ ಮತ್ತು ರಾಯಭಾರಿ ಕಚೇರಿಯ ಅಗತ್ಯ ದಾಖಲೆಗಳೊಂದಿಗೆ ಇಂದು ಜಾಮ್ ನಗರಕ್ಕೆ ಬಂದಿಳಿದಿದೆ.

Exit mobile version