ಮೈಸೂರಿಗೆ ಮೆಟ್ರೋ: ಕರ್ನಾಟಕಕ್ಕೆ 1200 ಎಲೆಕ್ಟ್ರಿಕ್ ಬಸ್, ಮೋದಿ ಘೋಷಣೆ

New Delhi: ಮಾಲಿನ್ಯ ನಿಯಂತ್ರಣದ ಭಾಗವಾಗಿ ದೇಶದ ವಿವಿಧ ರಾಜ್ಯಗಳಿಗೆ ಎಲೆಕ್ಟ್ರಿಕ್ ಬಸ್ಗಳನ್ನು (Electric Bus) ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಯೋಜನೆಯಡಿ ಕರ್ನಾಟಕಕ್ಕೆ 1200 ಎಲೆಕ್ಟ್ರಿಕ್ ಬಸ್ಗಳನ್ನು ನೀಡಲಾಗುವುದು ಜೊತೆಗೆ ಕರ್ನಾಟಕದಲ್ಲಿ (Karnataka) ಮೇಟ್ರೋ ಜಾಲವನ್ನು ವಿಸ್ತರಣೆ ಮಾಡಲು ಅರಮನೆ ನಗರಿ ಮೈಸೂರಿಗೂ ಮೇಟ್ರೋ ಯೋಜನೆ ರೂಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಘೋಷಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ (Uttara Pradesh) ಪ್ರಾದೇಶಿಕ ಕ್ಷಿಪ್ರ ಸಾರಿಗೆ ಕಾರಿಡಾರ್ನ ದೆಹಲಿ-ಗಾಜಿಯಾಬಾದ್ – ಮೀರತ್ ರೈಲುಗಳ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತರಪ್ರದೇಶದಂತೆ ಕರ್ನಾಟಕದಲ್ಲಿಯೂ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ 500 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ಈ ಅನುದಾನಮ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಸದ್ಯ ದೇಶದಲ್ಲಿ 80 ಲಕ್ಷಕ್ಕೂ ಅಧಿಕ ಜನರು ಮೇಟ್ರೋದಲ್ಲಿ (Metro) ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿಯೇ ಕರ್ನಾಟಕದಲ್ಲೂ ಮೆಟ್ರೋ ವಿಸ್ತರಣೆ ಮಾಡಲಾಗುತ್ತಿದೆ.

ಇದರೊಂದಿಗೆ ಮೈಸೂರಿನಲ್ಲೂ (Mysore) ಮೆಟ್ರೋ ಸಾರಿಗೆ ಪ್ರಾರಂಭಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದರು. ಇನ್ನು ಕಳೆದ ಕೆಲ ವರ್ಷಗಳಿಂದ ರೈಲ್ವೆ ಇಲಾಖೆಯಲ್ಲಾಗಿರುವ ಬದಲಾವಣೆಗಳು ನನಗೆ ಹೆಚ್ಚು ತೃಪ್ತಿ ನೀಡಿದೆ. ರೈಲ್ವೆ ಇಲಾಖೆಯಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದು ನಾರಿ ಶಕ್ತಿಯ ಪ್ರತೀಕವಾಗಿದೆ. ಭಾರತದ ಹೊಸ ಸಂಕಲ್ಪವನ್ನು ಈ ರೈಲು ತೋರಿಸುತ್ತಿದೆ.

ನಮೋ ಭಾರತ್ ರೈಲುಗಳು (Namo Bharat Train) ಭಾರತದಲ್ಲೇ ತಯಾರಾಗಿದ್ದು, ವಿಶ್ವದರ್ಜೆಯ ಗುಣಮಟ್ಟ ಮತ್ತು ತಾಂತ್ರಿಕತೆಯನ್ನು ಹೊಂದಿವೆ. ಹೀಗಾಗಿಯೇ ಇದು ಅತ್ಯುತ್ತಮ ಪ್ರಯಾಣದ ಅನುಭವವನ್ನು ನೀಡಲಿದೆ. ಈ ರೈಲಿನ ವ್ಯವಸ್ಥೆಯಿಂದ ಭಾರತದ ಆರ್ಥಿಕತೆ ಸದೃಡಗೊಳ್ಳಲಿದೆ. ಭಾರತೀಯ ರೈಲ್ವೆ ಸಂಪರ್ಕಜಾಲ ವಿಸ್ತರಣೆಯಿಂದ ದೇಶದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ನಮ್ಮ ಸರ್ಕಾರ ರೈಲ್ವೆ ಯೋಜನೆಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು, ಭಾರತೀಯ ರೈಲ್ವೆ 100% ವಿದ್ಯುಧೀಕರಣ ದೂರ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

Exit mobile version