ಶಾಲೆಯ ಶುಲ್ಕ ಪಾವತಿಸದಕ್ಕೆ ಕಿರುಕುಳ ; 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ! : ವರದಿ

Ghaziabad : ಇಂಡಿಯಾ ಟುಡೇ ಸುದ್ದಿವಾಹಿನಿಯ ವರದಿ ಅನುಸಾರ, 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯು ಶಾಲೆಯ ಶುಲ್ಕ(13 year Boy Commits Suicide) ಪಾವತಿ ಮಾಡದಕ್ಕೆ, ಶಾಲಾ ಆಡಳಿತ ಮಂಡಳಿ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಮನನೊಂದು ಆತ್ಮಹತ್ಯೆ(Sucide) ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಘಜಿಯಾಬಾದ್‌ನಲ್ಲಿ 15 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ವಿದ್ಯಾರ್ಥಿಯ ಪೋಷಕರು ಶಾಲೆಯ ಆಡಳಿತ ಮಂಡಳಿಯನ್ನು ನೇರವಾಗಿ ಆರೋಪಿಸಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೃತ ವಿದ್ಯಾರ್ಥಿಯನ್ನು ಪ್ರಿನ್ಸ್ ಎಂದು ಗುರುತಿಸಲಾಗಿದ್ದು, ಗಾಜಿಯಾಬಾದ್‌ನ ಥಾನಾ ಸಿಹಾನಿ ಗೇಟ್‌ನಲ್ಲಿರುವ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.

ಈ ಪ್ರಕರಣದ ಬಗ್ಗೆ ಖುದ್ದಾಗಿ ಮೃತ ವಿದ್ಯಾರ್ಥಿಯ ಕುಟುಂಬಸ್ಥರನ್ನು ಪ್ರಶ್ನಿಸಿದಾಗ, ಮಗುವಿನ ಶಾಲಾ ಶುಲ್ಕವನ್ನು ಠೇವಣಿ ಮಾಡಲಾಗಿಲ್ಲ, ಇದರಿಂದಾಗಿ ಶಾಲೆಯ ಆಡಳಿತ ಮಂಡಳಿಯವರು ಪದೇ ಪದೇ ನನ್ನ ಮಗನಿಗೆ ಕಿರುಕುಳ ನೀಡುತ್ತಿದ್ದರು.

https://youtu.be/Zf6cf8JyL6g 6 ತಿಂಗಳಿಂದ ಸ್ಥಗಿತಗೊಂಡಿರುವ ಯಶವಂತಪುರ ಜಂಕ್ಷನ್ ರಸ್ತೆ ಕಾಮಗಾರಿ.

ಗುರುವಾರ ಅವನು ಶಾಲೆಯಿಂದ ಮನೆಗೆ ಹಿಂದಿರುಗಿದಾಗ ಬಹಳ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ದುಡುಕಿ ನಿರ್ಧಾರ ಕೈಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಕಳೆದ 6 ತಿಂಗಳಿಂದ ಮಗುವಿನ ಶುಲ್ಕ ಪಾವತಿಸಿರಲಿಲ್ಲ, ಇದರಿಂದ ಕಿರುಕುಳ ನೀಡಿದ್ದಲ್ಲದೆ, ಇತರ ವಿದ್ಯಾರ್ಥಿಗಳ ಮುಂದೆ ನಿಂದಿಸಿದ್ದಾರೆ ಎಂದು ತಂದೆ ರಾಜಕುಮಾರ ಆರೋಪಿಸಿದ್ದಾರೆ.

https://youtu.be/EcQwWOTLHZo ಐತಿಹಾಸಿಕ ಕೋಟೆ, ವೀರನ ದುರ್ಗಕ್ಕೆ ಕಲ್ಲು ಗಣಿ ಕಳ್ಳರ ಕನ್ನ!

ಮೃತ ಮಗುವಿನ ಕುಟುಂಬಸ್ಥರು ಶಾಲಾ ಆಡಳಿತ ಮಂಡಳಿ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಇದೇ ರೀತಿ ಪುಣೆಯಲ್ಲಿ(Pune) 21 ವರ್ಷದ ವಿದ್ಯಾರ್ಥಿಯೊಬ್ಬ ಗುರುವಾರ ತನ್ನ ಕಾಲೇಜು ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ತನ್ನ ಜೀವವನ್ನು ಅಂತ್ಯ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

ಮೃತ ವಿದ್ಯಾರ್ಥಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ಪುಣೆಯ ಲೋನಿ ಕಲ್ಭೋರ್‌ನಲ್ಲಿರುವ ಪ್ರತಿಷ್ಠಿತ ಎಂಐಟಿ ಕಾಲೇಜಿನಲ್ಲಿ ಡಿಸೈನಿಂಗ್ ಕೋರ್ಸ್ ಅನ್ನು ಓದುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಎಂಐಟಿ ಕಾಲೇಜು ಅಧ್ಯಾಪಕರು ಮಾತನಾಡಿ, ವಿದ್ಯಾರ್ಥಿ ದಕ್ಷಿಣ ಭಾರತದವರಾಗಿದ್ದು, ತುಂಬಾ ಅಧ್ಯಯನಶೀಲರಾಗಿದ್ದರು.

ಇದನ್ನೂ ಓದಿ : https://vijayatimes.com/hdk-finds-bjp-mistake/

ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಅಂತಿಮ ಸೆಮಿಸ್ಟರ್‌ ಪರೀಕ್ಷೆಗೆ ಹಾಜರಾಗಬೇಕಿತ್ತು ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Exit mobile version