Shimoga: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಿ ಉದ್ರಿಕ್ತರ (144 Section alert in Shimoga) ಗುಂಪು ಅನ್ಯ ಕೋಮಿನ
ಪ್ರದೇಶಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಇದರಿಂದ ಶಿವಮೊಗ್ಗ ರಣಾಂಗಣ ಆಗಿದ್ದು, ಪೊಲೀಸ್ ಜೀಪಿನ ಮೇಲೆಯೂ ಕಲ್ಲುತೂರಾಟ ನಡೆದಿದೆ. ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ. ಯಾವ ಮಟ್ಟಿಗೆ
ಪೊಲೀಸರನ್ನು ನಿಯೋಜಿಸಲಾಗಿದೆ ಅಂದ್ರೆ ನಗರದಲ್ಲಿ ಎಲ್ಲಿ ನೋಡಿದರೂ (144 Section alert in Shimoga) ಪೊಲೀಸರ ಬೂಟಿನ ಸದ್ದೇ ಕೇಳುತ್ತಿದೆ.

ಘಟನೆಯಲ್ಲಿ ಐವರು ಸಾರ್ವಜನಿಕರಿಗೆ ಮತ್ತು ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿ 144 ಸೆಕ್ಷನ್ ನಿಷೇಧಾಜ್ಞೆ
ಜಾರಿಗೊಳಿಸಿದ್ದಾರೆ. ಈದ್ ಮಿಲಾದ್ (Eid-Milad) ಅಂಗವಾಗಿ ಶಿವಮೊಗ್ಗದಲ್ಲಿ ಬೃಹತ್ ಮಟ್ಟದಲ್ಲಿ ಮೆರವಣಿಗೆಯನ್ನು ಆಯೋಜನೆ ಮಾಡಲಾಗಿತ್ತು.
ರಾಗಿಗುಡ್ಡವನ್ನು (Ragigudda) ತಲುಪಿದ ಮೆರವಣಿಗೆಯು ಈ ವೇಳೆ ಕಟೌಟ್ (Cut-out) ವಿಚಾರವಾಗಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಪರಿಸ್ಥಿತಿ
ವಿಕೋಪಕ್ಕೆ ತಿರುಗಿ ಘರ್ಷಣೆಯಾಗಿದೆ. ಈ ವೇಳೆ ಕೆಲ ವ್ಯಕ್ತಿಗಳು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಎರಡು ಕೋಮಿನ ಯುವಕರ ಗುಂಪಿನಿಂದ ಕಲ್ಲು ತೂರಾಟ ನಡೆದ ಪರಿಣಾಮ 7ಕ್ಕೂ
ಹೆಚ್ಚು ಕಾರುಗಳು ಹಾಗೂ ಮನೆಯ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ.
ಇನ್ನು ಕಲ್ಲು ತೂರಾಟದಿಂದ ಕೆಲವರಿಗೆ ಗಂಭೀರ ಗಾಯಗಳು ಸಹ ಆಗಿದ್ದು, ಘಟನೆಯಲ್ಲಿ 35ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಇಷ್ಟು ಮಾತ್ರವಲ್ಲದೆ ಗಲಭೆ ತಡೆಯಲು ಮುಂದಾದ ಪೊಲೀಸ್
ವಾಹನಗಳ ಮೇಲೆಯೂ ಕಲ್ಲುತೂರಾಟ ನಡೆದಿದ್ದು, ಪೊಲೀಸ್ ಬ್ಯಾರಿಕೇಡ್ (Barricade) ಹತ್ತಿ ನುಗ್ಗಲು ಸಹ ಯತ್ನಿಸಿದ್ದಾರೆ. ಈ ವೇಳೆ ಪರಿಸ್ಥಿತಿಯನ್ನು ತಹಬದಿಗೆ ತರಲು ಪೊಲೀಸರು ಲಾಠಿ ಪ್ರಹಾರ ಮಾಡಿ
ಗಲಭೆಕೋರರನ್ನು ಚದುರಿಸಿದ್ದಾರೆೆ. ಹೀಗಾಗಿ ಈದ್ ಮಿಲಾದ್ ಮೆರವಣಿಗೆ ಅರ್ಧದಲ್ಲೇ ನಿಂತು ಹೋಗಿತ್ತು. ಮತ್ತಷ್ಟು ಜನರನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಾಂತಿನಗರ (Shanthinagara) ಮುಖ್ಯ ರಸ್ತೆಯ ಮೂಲಕ ರಾಗಿ ಗುಡ್ಡಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ಮಾಡಲಾಗುತ್ತಿದ್ದು, ಶಾಂತಿ ನಗರಕ್ಕೆ ಪ್ರವೇಶಿಸುವ ಮತ್ತು
ಹೊರ ಬರುವ ವಾಹನಗಳ ತಡೆದು ಪೊಲೀಸರು ತಪಾಸಣೆ ಮಾಡಿ ಕಳುಹಿಸುತ್ತಿದ್ದಾರೆ. ಅನುಮಾನಾಸ್ಪದವಾಗಿ ತಿರುಗಿದವರ ಬೈಕ್ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಇದೀಗ ಶಿವಮೊಗ್ಗ ಬಿಗಿ
ಬಂದೋಬಸ್ತ್ನಿಂದಾಗಿ ಪೊಲೀಸರು ಸಂಪೂರ್ಣ ಹತೋಟಿಗೆ ತಂದಿದ್ದಾರೆ.
ಇದೀಗ ರಾಗಿಗುಡ್ಡ- ಶಾಂತಿನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇಡೀ ಪ್ರದೇಶದಲ್ಲಿ ಈ ಹಿನ್ನೆಲೆಯಲ್ಲಿ ಐವರಿಗಿಂತ ಹೆಚ್ಚು ಮಂದಿ ಒಂದೆಡೆ ಗುಂಪು ಸೇರದಂತೆ ಪೊಲೀಸರು ಎಲ್ಲೆಡೆ ಅನೌನ್ಸ್
(Announce) ಮೂಲಕ ಸೂಚನೆ ನೀಡುತ್ತಿದ್ದಾರೆ. ಸೆಕ್ಷನ್ ಇರುವ ಹಿನ್ನೆಲೆಯಲ್ಲಿ ಮನೆ ಸೇರಿಕೊಳ್ಳುವಂತೆ ಘೋಷಣೆ ಮಾಡುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಜಿ ಕೆ ಮಿಥುನ್ ಕುಮಾರ್ (G.K Mithun Kumar)
ಭೇಟಿ ನೀಡಿದ್ದು ಮುಖಂಡರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ಇದನ್ನು ಓದಿ: ಯುದ್ಧಪೀಡಿತ ಇಸ್ರೇಲ್ನಿಂದ ಭಾರತೀಯ ನಾಗರಿಕರನ್ನು ಕರೆತರಲು “ಆಪರೇಷನ್ ಅಜಯ್” ಆರಂಭ
- ಭವ್ಯಶ್ರೀ ಆರ್.ಜೆ