ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿ ಎಂದು ಹೇಳಿಕೊಂಡು 15 ಕೋಟಿ ರೂ. ವಂಚಿಸಿದ ವ್ಯಕ್ತಿಗೆ ಬಿತ್ತು ಗೂಸಾ!

New Delhi : ಕೋವಿಡ್ ಲಸಿಕೆ (15 crore cheated person) ಸಾಗಣೆಗೆ ಕೆಲಸದ ಆದೇಶಗಳನ್ನು ನೀಡುವ ನೆಪದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯಂತೆ ನಟಿಸಿ ಆರು ಜನರಿಗೆ,

15 ಕೋಟಿ ರೂ. ವಂಚಿಸಿದ ಆರೋಪದ ಮೇಲೆ 49 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಗುರುವಾರ ನವದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ವಂಚಿಸಿದ ವ್ಯಕ್ತಿಯನ್ನು ಉಮೇಶ್ ಬಾತ್ರಾ (49) (Umesh bathra) ಎಂದು ಗುರುತಿಸಲಾಗಿದ್ದು, ಆತನನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಾತ್ರಾ ಎಂಬ ವ್ಯಕ್ತಿ ನಿರ್ಮಾಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು.

ಆದರೆ ಲಾಕ್‌ಡೌನ್ (Lock down) ಸಮಯದಲ್ಲಿ ತೀರ ಆರ್ಥಿಕ ಪರಿಸ್ಥಿತಿಗೆ ಹೊಡೆತ ಬಿದ್ದ ಪರಿಣಾಮ ಈ ಹಗರಣದ ಹಿಂದಿರುವ ಕಿಂಗ್‌ಪಿನ್‌ನೊಂದಿಗೆ ಕೈಜೋಡಿಸಿ ಜನರನ್ನು ವಂಚಿಸಲು ಹರ್ಮೆನ್ ಸಬೆರ್ವಾಲ್,

ಗೋವಿಂದ್ ತುಲ್ಶ್ಯಾನ್ ಮತ್ತು ಇತರ ಮೂವರೊಂದಿಗೆ ಸೇರಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಅವರೆಲ್ಲರನ್ನು ಈಗ (15 crore cheated person) ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೋವಿಡ್ ಲಸಿಕೆಗಳನ್ನು ಸಾಗಿಸಲು ವರ್ಕ್ ಆರ್ಡರ್ ನೀಡುವ ನೆಪದಲ್ಲಿ 3-4 ಕೋಟಿ ರೂ. ವಂಚಿಸಲಾಗಿದೆ ಎಂದು ಆರೋಪಿಸಿ ಹಲವಾರು ದೂರುಗಳನ್ನು ಸ್ವೀಕರಿಸಿದ ಬೆನ್ನಲ್ಲೇ,

ನಮ್ಮ ತಂಡ ತನಿಖೆಯನ್ನು ಪ್ರಾರಂಭಿಸಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ವಿಚಾರಣೆ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವಂಚಿತಗೊಂಡ ಆರು ಜನರು ಪೊಲೀಸರಿಗೆ ದೂರು ನೀಡಿದ್ದು, ತಮಗೆ ಒಟ್ಟು ಮೊತ್ತ 15 ಕೋಟಿ ರೂ. ವಂಚನೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: https://vijayatimes.com/hidden-number-plates/

ಮೇ 2021 ರಲ್ಲಿ ಆರೋಪಿಗಳು ದೂರುದಾರರನ್ನು ಸಂಪರ್ಕಿಸಿ ಕೋವಿಡ್ ಲಸಿಕೆಗಳನ್ನು ಸಾಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ (Ministry of Health and family welfare) ಕೆಲಸದ ಆದೇಶಗಳನ್ನು ನೀಡಿದ್ದರು,

ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಉಪ ಪೊಲೀಸ್ ಆಯುಕ್ತ (ಇಒಡಬ್ಲ್ಯೂ) (Deputy commisioner police) ಎಂ.ಐ ಹೈದರ್ ಹೇಳಿದ್ದಾರೆ (M I Hyder).

ಆರೋಪಿಗಳು ಸಂತ್ರಸ್ತರನ್ನು ನಿರ್ಮಾಣ ಭವನದ ಆವರಣದಲ್ಲಿರುವ ಸಚಿವಾಲಯಕ್ಕೆ ಕರೆದೊಯ್ದು,

ಸಚಿವಾಲಯದ ಅಧಿಕಾರಿಗಳಂತೆ ತೋರಿಸಿಕೊಂಡಿದ್ದು, ನಕಲಿ ಕೆಲಸದ ಆದೇಶಗಳ ಮೇಲೆ ದೂರುದಾರರ ಸಹಿ ಪಡೆದುಕೊಂಡಿದ್ದಾರೆ.

ಆ ನಕಲಿ ಕೆಲಸದ ಆದೇಶಗಳಿಗೆ ದೂರುದಾರರಿಂದ 15 ಕೋಟಿ ರೂ. ಪಡೆದಿದ್ದಾರೆ ಎಂದು ಹೇಳಲಾಗಿದೆ.

ಆರೋಪಿಗಳ ಬ್ಯಾಂಕ್ ಖಾತೆಗಳು ಮತ್ತು ಇತರ ವಿವರಗಳಲ್ಲಿ ಭಾರಿ ವಹಿವಾಟು ನಡೆದಿರುವುದು ಸ್ಪಷ್ಟವಾಗಿದೆ.

ಆರೋಪಿ ಬಾತ್ರಾ ಕಾನ್ಫರೆನ್ಸ್ ಕೊಠಡಿಯಿಂದ ಕೆಲಸ ಮಾಡುವ ಆರೋಗ್ಯ ಸಚಿವಾಲಯದ ಅಧಿಕಾರಿಯಾಗಿ ತೋರಿಸಿಕೊಂಡಿದ್ದಾರೆ.

ಈ ನಕಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಬಾತ್ರಾ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ಪೊಲೀಸರ ನಿರಂತರ ಕಾರ್ಯಾಚರಣೆಯ ಫಲದಿಂದ ಆರೋಪಿ ಬಾತ್ರಾ ಬಂಧನ ಯಶಸ್ವಿಯಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Exit mobile version