ಬೆಂಗಳೂರು ಮಹಿಳೆಯರಿಗೆ ಸೇಫ್‌ ಅಲ್ವಾ? ಒಂದೇ ವರ್ಷದಲ್ಲಿ 156 ರೇಪ್‌ ಕೇಸ್‌ ದಾಖಲು !

Bengaluru : ರಾಜಧಾನಿ ಬೆಂಗಳೂರು ಮಹಿಳೆಯರಿಗೆ ಸೇಫ ಅಲ್ವಾ? ಈ ಪ್ರಶ್ನೆ ಈಗ ಬೆಂಗಳೂರಿಗರನ್ನು ಕಾಡಲಾರಂಭಿಸಿದೆ. ಇದಕ್ಕೆ ಕಾರಣ ಕಳೆದ ವರ್ಷ ದಾಖಲಾದ ರೇಪ್‌ ಕೇಸ್‌ಗಳು(156 rape cases registered). ಹೌದು ಕಳೆದ ವರ್ಷ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿವೆ.

ಒಂದೇ ವರ್ಷದಲ್ಲಿ 156 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಅಂತ ಬೆಂಗಳೂರು ನಗರ ಪೊಲೀಸರು(Bangalore City Police) ಬುಧವಾರ,

ಕಳೆದ ವರ್ಷದ ಅಪರಾಧ ಪ್ರಕರಣಗಳ ವಿಶ್ಲೇಷಣೆ ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಈ ಸುದ್ದಿಗೋಷ್ಠಿತ ಮುಖ್ಯಾಂಶಗಳನ್ನು ನೋಡೋದಾದ್ರೆ.

ಹೈಲೈಟ್ಸ್‌:

ಇದನ್ನೂ ಓದಿ : https://vijayatimes.com/kishore-clarified-about-twitter-account/

ಕಳೆದ ವರ್ಷ ನಡೆದ ಪ್ರಕರಣಗಳನ್ನು ಪರಿಶೀಲಿಸಿದಾಗ ವರದಕ್ಷಿಣೆ ಕಿರುಕುಳ, ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯಗಳು(156 rape cases registered) ಶೇ. 30ರಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ.

156 ಅತ್ಯಾಚಾರ ಕೃತ್ಯಗಳು ಬೆಳಕಿಗೆ ಬಂದಿದ್ದು, ಈ ಪೈಕಿ 149 ಪ್ರಕರಣಗಳಲ್ಲಿ ಆರೋಪಿಗಳು ಸಂಬಂಧಿಕರೇ ಆಗಿದ್ದಾರೆ.

ಬಹುತೇಕ ಪ್ರಕರಣಗಳಲ್ಲಿ ಪ್ರೀತಿ, ಮದುವೆ, ಲಿವ್‌ ಇನ್‌ ರಿಲೇಷನ್‌ಶಿಪ್‌ ಸಂಬಂಧಗಳಿಂದಲೇ ದೌರ್ಜನ್ಯ ನಡೆದಿವೆ.

ಅಪರಿಚಿತರಿಂದ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳಲ್ಲಿ ತುರ್ತಾಗಿ ಕೇಸ್ ದಾಖಲಿಸಿ ತನಿಖೆಯ ನಂತರ, ಆರೋಪಿಗಳನ್ನು ಬಂಧಿಸಲಾಗಿದೆ.


ಮಹಿಳೆಯರ ಸುರಕ್ಷತೆನ್ನು ಗಮನದಲ್ಲಿಟ್ಟುಕೊಂಡು ನಗರದಲ್ಲಿ‘ಸೇಫ್‌ ಸಿಟಿ’ ಯೋಜನೆಯನ್ನು ಆರಂಭಿಸಿದೆ ಸುಮಾರು 4100 ಸಿಸಿ ಕ್ಯಾಮೆರಾಗಳನ್ನು(CC camera) ಗೊತ್ತು ಪಡಿಸಿದ ಹಾಗೂ ಅಸುರಕ್ಷಿತ ಸ್ಥಳಗಳಲ್ಲಿ ಅಳವಡಿಸಲಾಗಿದೆ.

ಜೊತೆಗೆ, 60 ಮಹಿಳಾ ಹೊರಠಾಣೆ, 50 ಸೇಫ್ಟಿ ಐಲ್ಯಾಂಡ್‌, 8 ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಆರೈಕೆ ಸ್ಪಂದನಾ ಘಟಕಗಳ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ.

ರಾಬರಿಗೆ ಅಗ್ರಸ್ಥಾನ ಪಡೆದ ರಾಜಧಾನಿ!

ಕಳೆದ ವರ್ಷ ನಡೆದ ದರೋಡೆ, ವಾಹನ ಕಳವು ಪ್ರಕರಣಗಳು ಹೆಚ್ಚಾಗಿವೆ. ಉಳಿದಂತೆ ಇತರೆ ಅಪರಾಧ ಕೃತ್ಯಗಳು ಇಳಿಕೆಯಾಗಿವೆ.

2022ರಲ್ಲಿ ನಗರ ಪೊಲೀಸರು ಕೊಲೆ, ಸುಲಿಗೆ, ಅತ್ಯಾಚಾರ, ವಂಚನೆ ಸೇರಿದಂತೆ ಐಪಿಸಿ(IPC) ಕಲಂಗಳ ಅಡಿಯಲ್ಲಿ ಸುಮಾರು 28,518 ಪ್ರಕರಣಗಳು ದಾಖಲಾಗಿವೆ.

ಅಲ್ಲದೆ ಕರ್ನಾಟಕ ಪೊಲೀಸ್‌ ಕಾಯಿದೆ ಅನ್ವಯ ಜೂಜಾಟಕ್ಕೆ ಸಂಬಂಧಿಸಿದ 421 ಕೇಸ್‌, ಕ್ರಿಕೆಟ್‌ ಬೆಟ್ಟಿಂಗ್‌(Cricket Betting) ಸಂಬಂಧಿತ 201 ಹಾಗೂ ವೇಶ್ಯಾವಾಟಿಕೆ,

ಮಾನವ ಕಳ್ಳಸಾಗಾಣಿಕೆ ನಡೆಸಿದವರ ವಿರುದ್ಧ 154 ಪ್ರಕರಣಗಳನ್ನು ದಾಖಲಿಸಲಾಗಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ 2022ರಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿರುವುದು ಕಂಡುಬಂದಿವೆ. ರೌಡಿ ಚಟುವಟಿಕೆಗಳ ಮೇಲೂ ನಿಗಾ ಇಡಲಾಗಿದ್ದು,

ಇದನ್ನೂ ಓದಿ : https://vijayatimes.com/namma-metro-pre-scheduled-auto/

3100 ಮಂದಿ ವಿರುದ್ಧ ಭದ್ರತಾ ಕಾಯಿದೆಯಡಿ ಕ್ರಮ ಜರುಗಿಸಲಾಗಿದೆ. ನಿಯಮ ಉಲ್ಲಂಘಿಸಿದ 2234 ರೌಡಿಗಳನ್ನು ಜೈಲಿಗೆ ಕಳುಹಿಸಲಾಗಿದೆ.

40 ರೌಡಿಗಳ ಬಾಂಡ್‌ ಮೊತ್ತ ಜಪ್ತಿ ಮಾಡಿದ್ದು, 13 ಮಂದಿಯನ್ನು ನಗರದಿಂದ ಗಡಿಪಾರು ಮಾಡಲಾಗಿದೆ.

22 ಮಂದಿ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಾಗಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌ ಪ್ರತಾಪ್‌ ರೆಡ್ಡಿ(CH Pratap Reddy) ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.

ಸೈಬರ್‌ ವಂಚಕರಿಂದ ಫ್ರೀಜ್‌ ಆಯ್ತು 13 ಕೋಟಿ ರೂ. !

ಕಳೆದ ವರ್ಷ ಸೈಬರ್‌ ವಂಚನೆ(cyber crime) ಸಂಬಂಧ 9939 ಕೇಸ್‌ಗಳು ದಾಖಲಾಗಿವೆ.

ಜೊತೆಗೆ, ವಂಚನೆಗೆ ಒಳಗಾದವರು ತಕ್ಷಣ ಪೊಲೀಸರಿಗೆ ಸಿಐಆರ್‌(CIR) ಮೂಲಕ ವರದಿ ಮಾಡಿದ್ದ 8773 ದೂರುಗಳ ಪೈಕಿ 7734 ದೂರನ್ನು

ಸಂಧಾನ ಮಾಡಿ ಸೈಬರ್‌ ವಂಚಕರ ಪಾಲಾಗಬೇಕಿದ್ದ ವಿವಿಧ ಅಕೌಂಟ್‌ಗಳಿಂದ 13,06,65,146 ರೂ. ಗಳನ್ನು ಫ್ರೀಜ್‌ ಮಾಡಿಸಲಾಗಿದೆ ಎಂದು ತಿಳಿಸಿದರು.


ಡೇಂಜರಸ್ ಡ್ರಗ್ಸ್‌ ವಿರುದ್ಧ ಧ್ವನಿ! : 579 ಡ್ರಗ್‌ ಪೆಡ್ಲರ್‌ಗಳ ವಿರುದ್ಧ ಕೇಸ್‌ ದಾಖಲು

ಬೆಂಗಳೂರಿನಂತಹ ಮಹಾನಗರಗಳಲ್ಲೇ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದು ನಿಜಕ್ಕೂ ನೋವಿನ ವಿಷಯ.

ಮಹಿಳೆಯರ ಸುರಕ್ಷತೆಗೆ ಕೆಲವೊಂದು ಯೋಜನೆಗಳನ್ನು ರೂಪಿಸಿದ್ದರೂ ಕೂಡ ಅವು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಬೇಕಾಗಿದೆ.

ಗಾಂಧೀಜಿಯವರ ಮಾತಿನಂತೆ ಮಧ್ಯರಾತ್ರಿ ಯಲ್ಲಿ ಮಹಿಳೆಯರು ನಿರ್ಭಿತರಾಗಿ ಓಡಾಡಿದಾಗ ಮಾತ್ರ ಆ ದೇಶ ನಿಜಕ್ಕೂ ಸ್ವಾತಂತ್ರ್ಯ ಪಡೆದುಕೊಂಡಿದೆ ಎಂದು ಅರ್ಥೈಸಿಕೊಳ್ಳಬಹುದಾಗಿದೆ.

Exit mobile version