ಸದನದ ಕಲಾಪಕ್ಕೆ ಅಡ್ಡಿ: ಸಂಸತ್ತಿನಲ್ಲಿ ಪ್ರತಿಪಕ್ಷದ 15 ಸಂಸದರು ಲೋಕಸಭೆಯಿಂದ ಅಮಾನತು

New Delhi: ಲೋಕಸಭಾ (15MPs suspended from Loksabha) ಕಲಾಪದ ವೇಳೆ ಭಾರಿ ಭದ್ರತಾ ಲೋಪ ಪ್ರಕರಣದ ಕುರಿತು ಸದನದ ಕಣಕ್ಕಿಳಿದು ಪ್ರತಿಭಟಿಸಿದ್ದ ಐವರು ಕಾಂಗ್ರೆಸ್

(Congress)​ ಸಂಸದರನ್ನು ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಲಾಗಿದ್ದು, ಲೋಕಸಭೆಯಿಂದ ಪ್ರತಿಪಕ್ಷಗಳ 15 ​ಸಂಸದರನ್ನು ಅಮಾನತುಗೊಳಿಸಲಾಗಿದೆ.

ಸಂಸತ್ ಭವನದ ಒಳಗೆ ಭದ್ರತಾ ಲೋಪಗಳ ಕುರಿತು ಪ್ರತಿಪಕ್ಷಗಳು ಸದನದಲ್ಲಿ ಗದ್ದಲ ಸೃಷ್ಟಿಯಾಗುತ್ತಲೇ ಇದ್ದು, ರಾಜ್ಯಸಭೆ ಕಲಾಪವನ್ನು ನಾಳೆಗೆ ಮುಂದೂಡಲಾಗಿದ್ದು, ಟಿಎನ್ ಪ್ರತಾಪನ್

(T N Pratapan) , ಹೈಬಿ ಈಡನ್, ಜೋತಿಮಣಿ, ರಮ್ಯಾ ಹರಿದಾಸ್ (Ramya Haridas) ಮತ್ತು ಡೀನ್ ಕುರಿಯಾಕೋಸ್ ಅವರನ್ನು ಅಮಾನತುಗೊಳಿಸಲಾಗಿದೆ.

ಈ ವಿಚಾರದಲ್ಲಿ ಯಾವುದೇ ಸದಸ್ಯರಿಂದ ರಾಜಕೀಯ ನಿರೀಕ್ಷಿಸುವುದಿಲ್ಲ, ಪಕ್ಷ ರಾಜಕಾರಣ ಮೀರಿ ಕೆಲಸ ಮಾಡಬೇಕು ಎಂದು ಸ್ಪೀಕರ್ (Speaker) ಹೇಳಿದ್ದು, ಈ ಹಿಂದೆಯೂ ಸಂಸತ್ತಿನಲ್ಲಿ ಇಂತಹ

ಭದ್ರತಾ ಲೋಪದ ಘಟನೆಗಳು ನಡೆದಿದೆ. ಅಂದಿನ ಲೋಕಸಭಾ ಸ್ಪೀಕರ್‌ಗಳ ಸೂಚನೆಯಂತೆ (15MPs suspended from Loksabha) ಕಲಾಪ ನಡೆಸಲಾಗಿದೆ.

ಕಾಂಗ್ರೆಸ್​ನ 9 ಸಂಸದರು, ಡಿಎಂಕೆಯ (DMK) ಇಬ್ಬರು ಸಂಸದರು, ಸಿಪಿಎಂನ ಇಬ್ಬರು ಸಂಸದರು, ಸಿಪಿಐನ ಓರ್ವ, ಟಿಎಂಸಿಯ (TMC) ಓರ್ವ ಸಂಸದರು ಅಮಾನತುಗೊಂಡಿದ್ದು, ಇದಕ್ಕೂ

ಮುನ್ನ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒ’ಬ್ರೇನ್ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು. ಅವರ ಅಮಾನತು ಕುರಿತು ವಿರೋಧ ಪಕ್ಷಗಳ ಸಂಸದರು

ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಸಿದರು. ಇದಾದ ಬಳಿಕ ರಾಜ್ಯಸಭೆಯ ಕಲಾಪವನ್ನು 3 ಗಂಟೆಗೆ ಮುಂದೂಡಲಾಯಿತು.

ಲೋಕಸಭೆಯಲ್ಲಿ ಬುಧವಾರ ಗದ್ದಲ ಉಂಟಾಗಿತ್ತು, ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರಿರುವ ಕಡೆಗೆ ಇಬ್ಬರು ನುಗ್ಗಿದ್ದರು, ಅಷ್ಟೇ ಅಲ್ಲದೇ ಸ್ಮೋಕ್​ ಬಾಂಬ್ (Smoke Bomb) ಸಿಡಿಸಿದ್ದರು. ಈ ಕುರಿತು

ಕಾಂಗ್ರೆಸ್​ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸಂಸದರ ಅಶಿಸ್ತಿನ ವರ್ತನೆಗಾಗಿ ಐವರು ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಬೆಳಗ್ಗೆಯಷ್ಟೇ ಟಿಎಂಸಿಯ

ರಾಜ್ಯಸಭಾ ಸಂಸದ ಡೆರೆಕ್ ಒಬ್ರಿಯಾನ್ (Derek O’Brien) ಅವರನ್ನು ಇದೇ ಕಾರಣಗಳಿಂದಾಗಿ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ (Speaker Om Birla) ಅವರು 5 ಕಾಂಗ್ರೆಸ್ ಸಂಸದರನ್ನು ಲೋಕಸಭೆಯಲ್ಲಿ ಅಮಾನತುಗೊಳಿಸಿದ್ದು, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ

(Prahlad Joshi) ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸದನದ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ವ್ಯಕ್ತಿಗಳು ಜಿಗಿದ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಸಂಸತ್ತಿನ ಭದ್ರತೆಯನ್ನು

ಪರಿಶೀಲಿಸುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಗೃಹ ಸಚಿವಾಲಯಕ್ಕೆ ಪತ್ರ ಬರೆಯಬಹುದು ಎನ್ನಲಾಗಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ನಿಯಮ ಉಲ್ಲಂಘಿಸಿದಕ್ಕಾಗಿ ಲೋಕಸಭೆಯಿಂದ ಚಳಿಗಾಲದ ಅಧಿವೇಶನ ಮುಗಿಯೋವರೆಗೆ ಕಾಂಗ್ರೆಸ್ ಸಂಸದರಾದ ಟಿ.ಎನ್. ಪ್ರತಾಪನ್ , ಹಿಬಿ ಈಡನ್

(Hiby Eden), ಡೀನ್ ಕುರಿಯಕೋಸ್, ಜ್ಯೋತಿ ಮಣಿ ಮತ್ತು ರಮ್ಯಾ ಹರಿದಾಸ್ ಅಮಾನತುಗೊಂಡಿದ್ದು (Suspended), ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು

ಕಾಂಗ್ರೆಸ್‌ನ ಐವರನ್ನು ಅಮಾನತುಗೊಳಿಸುವ ಗದ್ದಲದ ನಡುವೆಯೇ ನಿರ್ಣಯವನ್ನು ಮಂಡಿಸಿದರು.

ಇದನ್ನು ಓದಿ: ನಿಮಗಿದು ಗೊತ್ತೇ: ಬಾಲಿವುಡ್​ನ ಶ್ರೀಮಂತ ನಟಿಯರು ಯಾರೆಂದು ತಿಳಿದಿದೀಯಾ? ಸಂಪೂರ್ಣ ವಿವರ ಹೀಗಿದೆ.

Exit mobile version