Bengaluru: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ಶಕ್ತಿ (17 crore female passenger) ಯೋಜನೆ ಮಂಗಳವಾರ ಒಂದು ತಿಂಗಳು ಪೂರ್ಣಗೊಂಡಿದೆ.

ಸಾರಿಗೆ ಇಲಾಖೆಯ ಮಾಹಿತಿಯ ಪ್ರಕಾರ, 17 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕ ಸಾರಿಗೆ ಇಲಾಖೆಯ ಪ್ರಕಾರ, ಕಳೆದ ಒಂದು ತಿಂಗಳಲ್ಲಿ 16.73 ಕೋಟಿ ಮಹಿಳಾ ಪ್ರಯಾಣಿಕರು ಎಲ್ಲಾ ನಾಲ್ಕು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ಗಳಲ್ಲಿ ಪ್ರಯಾಣಿಸಿದ್ದಾರೆ.
ಅದರಲ್ಲಿ ಸುಮಾರು 70 ಲಕ್ಷ ಮಹಿಳೆಯರು ಜುಲೈ 4 ರಂದೇ ಪ್ರಯಾಣಿಸಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳಲ್ಲಿ ಕಳೆದ ಒಂದು ತಿಂಗಳಲ್ಲಿ ಅತಿ ಹೆಚ್ಚು ಮಹಿಳಾ ಪ್ರಯಾಣಿಕರು
ಪ್ರಯಾಣಿಸಿದ್ದಾರೆ. ಏಕೆಂದರೆ ಕರ್ನಾಟಕದ ರಾಜಧಾನಿಯಲ್ಲಿ ಐದು ಕೋಟಿಗೂ ಹೆಚ್ಚು ಮಹಿಳೆಯರು ಈ ಬಸ್ಗಳಲ್ಲಿ ಸವಾರಿ ಮಾಡಿದ್ದಾರೆ. ಈ ಉಚಿತ ಯೋಜನೆಯಿಂದಾಗಿ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ರಾಜ್ಯ
ಸಿಲಿಕಾನ್ ಸಿಟಿಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಟ್ವಿಸ್ಟ್, ಹುಡುಗಿ ವಿಚಾರಕ್ಕೆ ನಡೆಯಿತು ಕೊಲೆ!
ಸರ್ಕಾರ ಇದೀಗ 401 ಕೋಟಿ ರೂಪಾಯಿ (17 crore female passenger) ನೀಡಬೇಕಿದೆ.
ಈ ಯೋಜನೆ ಜಾರಿಕೊಂಡ ನಂತರ ರಾಜ್ಯದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅನೇಕ ಕಡೆ ಹೆಚ್ಚಿನ ಬಸ್ ಸೇವೆ ಒದಗಿಸುವಂತೆ ಒತ್ತಾಯವೂ ಕೇಳಿ ಬಂದಿದ್ದು,

ಸಾರಿಗೆ ಇಲಾಖೆಯ ಮೇಲೆ ಒತ್ತಡ ಉಂಟಾಗಿದೆ. ಶಾಲಾ-ಕಾಲೇಜುಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೂ ಸರ್ಕಾರಿ ಬಸ್ಗಳಲ್ಲಿ ಪ್ರಮಾಣಿಸಲು ಅವಕಾಶ ಸಿಗುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.
ಇನ್ನು ಶಕ್ತಿ ಯೋಜನೆಯು ಕರ್ನಾಟಕದ ಸಾಮಾನ್ಯ ಸರ್ಕಾರಿ ಬಸ್ ಸೇವೆಗಳಿಗೆ ಮಾತ್ರ ಅನ್ವಯಿಸುತ್ತದೆ. ಐರಾವತ್, ಐರಾವತ್ ಕ್ಲಬ್ ಕ್ಲಾಸ್, ಐರಾವತ್ ಗೋಲ್ಡ್ ಕ್ಲಾಸ್, ಅಂಬಾರಿ,
ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ, ಫ್ಲೈ ಬಸ್, ವಾಯು ವಜ್ರ, ವಜ್ರ, ನಾನ್-ಎಸಿ ಸ್ಲೀಪರ್, ರಾಜಹಂಸ ಮತ್ತು ಇವಿ ಪವರ್ ಪ್ಲಸ್ ಎಸಿ ಬಸ್ಗಳನ್ನು ಈ ಯೋಜನೆಯಲ್ಲಿ ಹೊರಗಿಡಲಾಗಿದೆ.
ರಾಜ್ಯದಿಂದ ಹೊರಗೆ ಪ್ರಯಾಣಿಸುವ ಬಸ್ಗಳಿಗೂ ಈ ಯೋಜನೆ ಅನ್ವಯಿಸುವುದಿಲ್ಲ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ನ ಐದು ಚುನಾವಣಾ ಭರವಸೆಗಳಲ್ಲಿ ಶಕ್ತಿ ಯೋಜನೆಯೂ ಒಂದಾಗಿದೆ.