Visit Channel

October 1, 2021

ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಗೆ ನಾಳೆ ಅಧಿಕೃತ ಚಾಲನೆ

ಬಳ್ಳಾರಿ ಜಿಲ್ಲೆಯ ಸರಹದ್ದುಗಳನ್ನು ಮಾರ್ಪಡಿಸಿ ನೂತನ ವಿಜಯನಗರ ಜಿಲ್ಲೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ನೂತನ ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನ ಹೊಸಪೇಟೆ ಆಗಿರಲಿದೆ. ವಿಜಯನಗರ ಜಿಲ್ಲೆಯಲ್ಲಿ ಒಟ್ಟು ಆರು ತಾಲ್ಲೂಕುಗಳು ಇರಲಿದೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ಘೋಷಿಸಿದೆ. ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲ್ಲೂಕುಗಳು ನೂತನ ಜಿಲ್ಲೆಯ ಭಾಗವಾಗಲಿವೆ.

ಬೆಂಗಳೂರು ಮೆಟ್ರೋ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು 27 ಅಕ್ಟೋಬರ್ 2021 ಕೊನೆಯ ದಿನವಾಗಿದೆ. ಬಿಎಂಆರ್‌ಸಿಎಲ್ ಡೆಪ್ಯೂಟಿ ಜನರಲ್ ಮ್ಯಾನೇಜರ್ 3, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಕರೆಯಲಾಗಿದೆ

ರಾಜ್ಯದಲ್ಲಿ ಮತಾಂತರದಿಂದ ಕೋಮುಗಲಭೆ – ಆರಗ ಜ್ಞಾನೇಂದ್ರ

ರಾಜ್ಯದಲ್ಲಿ ಮತಾಂತರ ನಿಷೇಧ‌ಕ್ಕೆ ಸೂಕ್ತ ಕಾಯಿದೆ ತರಲಾಗುತ್ತದೆ ಎಂದು ಭರವಸೆ ನೀಡಿದರು. ಮತಾಂತರದ ಮೂಲಕ ತಮ್ಮ ಜನರ ಸಂಖ್ಯೆ ಹೆಚ್ಚಿಸಲು ನೋಡುವುದು ಅಧರ್ಮ. ಹಿಂದೂ ಧರ್ಮ ಜಗತ್ತಿನಲ್ಲೇ ಅತ್ಯಂತ ಪಾವಿತ್ರ್ಯತೆ ಹೊಂದಿದ್ದು, ಮತಾಂತರ‌ದಿಂದ ಕೋಮು ಗಲಭೆ ನಡೆಯುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಜೆಡಿಎಸ್‌ಗೆ ಗುಡ್ ಬೈ

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ಮುನಿಸಿಕೊಂಡಿರುವ ಸಂದೇಶ್ ನಾಗರಾಜ್, ಸದ್ಯ ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಜೆಡಿಎಸ್ ನಿಂದ ಗೆದ್ದು ಪರಿಷತ್ ಸದಸ್ಯರಾಗಿದ್ದಾರೆ. ಪರಿಷತ್ ಸದಸ್ಯತ್ವದ ಅವಧಿ ಇದೇ ಡಿಸೆಂಬರ್ ಗೆ ಅಂತ್ಯವಾಗಲಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸಂದೇಶ್ ನಾಗರಾಜ್ ಒಲವು ತೋರಿದ್ದಾರೆ.

21 ಕೋಟಿ ಮೌಲ್ಯದ ಜನಪ್ರಿಯ ಕೋಣ ಸಾವು

ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ಅಜಾನುಬಾಹು ಈ ಸುಲ್ತಾನನ ಮೌಲ್ಯ ಬರೋಬ್ಬರಿ 21 ಕೋಟಿ ಆಗಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿತ್ತು. ಅದರ ಪೂರ್ಣ ಹೆಸರು ಸುಲ್ತಾನ್ ಜೋಟೆ, ಇದು ಹೃದಯಾಘಾತದಿಂದ ಸುಲ್ತಾನ್ ಅನಿರೀಕ್ಷಿತವಾಗಿ ಮೃತಪಟ್ಟಿದೆ ಎಂದು ವೈದರು ದೃಢಪಡಿಸಿದ್ದಾರೆ

ಪದ್ಮಶ್ರೀ ವಾಪಾಸ್‌: ಸುಕ್ರಜ್ಜಿ ನೋವಿನ ನಿರ್ಧಾರ.

ಸರ್ಕಾರಕ್ಕೆ ಹಾಲಕ್ಕಿ ಮಕ್ಕಳ ಕೂಗು ಕೇಳುತ್ತಿಲ್ಲ. ಇವರ ಕೂಗು ಸರ್ಕಾರದ ಮಟ್ಟಕ್ಕೆ ತಲುಪಿಸಲು, ದನಿ ಇಲ್ಲದ ಹಾಲಕ್ಕಿ ಮಕ್ಕಳಿಗೆ ದನಿಯಾಗಲು ವಿಜಯಟೈಮ್ಸ್‌ನ ಕವರ್‌ಸ್ಟೋರಿ ತಂಡ ಹಾಲಕ್ಕಿ ಒಕ್ಕಲು ಜನಾಂಗ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಅಧ್ಯಯನ ಮಾಡಲು ಪ್ರಾರಂಭ ಮಾಡಿದಾಗ ಕೆಲ ಅಚ್ಚರಿಯ, ನೋವಿನ ಸಂಗತಿಗಳು ಬಯಲಾದವು. ಇದೇ ಸಂದರ್ಭದಲ್ಲಿ ಸುಕ್ರಜ್ಜಿ ತಮ್ಮ ಮನದಾಳದ ನೋವನ್ನು ಬಿಚ್ಚಿಟ್ಟು, ಪದ್ಮಶ್ರೀ ಪ್ರಶಸ್ತಿ ಹಿಂದಕ್ಕೆ ಕೊಡುವ ಮಾತನ್ನು ಹೇಳಿದ್ರು. 

ಸಾರಿಗೆ ಇಲಾಖೆಯಲ್ಲಿ ಖಾಲಿಯಿರುವ 1529 ಹುದ್ದೆ ಭರ್ತಿಗೆ ಕ್ರಮ – ಸಾರಿಗೆ ಸಚಿವ

ರಾಜ್ಯದ 15 ಚೆಕ್ಪೋಸ್ಟ್ ಗಳಲ್ಲಿ 37 ಹುದ್ದೆಗಳು ಇವೆ. ಇವುಗಳಲ್ಲಿ 29 ಹುದ್ದೆ ಖಾಲಿಯಿದ್ದು, ಸಾರಿಗೆ ಇಲಾಖೆಯ ಪ್ರಮುಖ ಹುದ್ದೆಗಳಲ್ಲಿ 1529 ಹುದ್ದೆ ಖಾಲಿ ಇವೆ. ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ

ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಈ ಇಬ್ಬರು ಅನುಮಾನಿತರ ವಿರುದ್ಧ ಕುಂಬಳಗೋಡು ಪೊಲೀಸರು ಐಪಿಸಿ ಸೆಕ್ಷನ್ 306(ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಕೇಸ್ ದಾಖಲು ಮಾಡಿ, ದೂರಿನನ್ವಯ ವಿವೇಕ್ ನಂ.1 ಆರೋಪಿ ಹಾಗೂ ಮಹೇಶ್ ನಂ.2 ಆರೋಪಿಯಾಗಿದ್ದಾರೆ. ಮದುವೆ ಆಗದೇ ಹೋದರೆ ಕೊಲೆ ಮಾಡುವೆ  ಎಂಧು ವಿವೇಕ್  ಬೆದರಿಕೆ ಹಾಕಿದ್ದರು ಎಂದು ಪ್ರಭು ಮಾದಪ್ಪ ದೂರಿನಲ್ಲಿ ದಾಖಲಿಸಿದ್ದಾರೆ.