ಯಾವುದೇ ಒಂದು ಅಭ್ಯಾಸವನ್ನು ರೂಡಿಸಿಕೊಳ್ಳಲು ಕನಿಷ್ಠ 21 ದಿನಗಳ ಕಠಿಣ ಪ್ರಯತ್ನ ಅಗತ್ಯ!

Habit

ಬದಲಾಗುತ್ತಿರುವ ಜೀವನ ಶೈಲಿಯಲ್ಲಿ(Lifestyle) ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಹೊಂದುವುದು ಬಹಳ ಮುಖ್ಯ.

ಇದಕ್ಕಾಗಿ ಆರೋಗ್ಯಕರ ಆಹಾರ, ವ್ಯಾಯಾಮ(21 days of hard practice wins) ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸುವ ಅವಶ್ಯಕತೆ ಬಹಳ ಇದೆ.

ಈ ಒಳ್ಳೆಯ ಅಭ್ಯಾಸಗಳನ್ನು (21 days of hard practice wins)ದಿನಚರಿಯಲ್ಲಿ ರೂಢಿಸಿಕೊಳ್ಳುವುದರಿಂದ ನಮ್ಮನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತವೆ.

ದೈಹಿಕ ಆರೋಗ್ಯ(Physical Health) ಮತ್ತು ಮಾನಸಿಕವಾದ ಆರೋಗ್ಯದ(Mental Health) ಕುರಿತಾಗಿ ಹೆಚ್ಚು ಗಮನವಹಿಸಲೇ ಬೇಕು.

ನೀವು ಮಾನಸಿಕವಾಗಿ ಆರೋಗ್ಯವಾಗಿರಬೇಕಾದರೆ ಯಾವ ಅಭ್ಯಾಸಗಳನ್ನು ರೂಢಿಯಲ್ಲಿಟ್ಟುಕೊಳ್ಳಬೇಕು? ಹಾಗೂ ದೈಹಿಕವಾಗಿ ಸದೃಢವಾಗಿರಲು ಯಾವ ಅಭ್ಯಾಸಗಳು ಉತ್ತಮ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. https://vijayatimes.com/21-days-of-hard-practice-wins/

ತಿಳಿದುಕೊಂಡರಷ್ಟೇ ಸಾಲದು, ಅದನ್ನು ಪಾಲಿಸುವುದೂ ಅಷ್ಟೇ ಮುಖ್ಯವಾಗುತ್ತದೆ. ಒಮ್ಮೆ ಯೋಚನೆ ಮಾಡಿ, ನಿಮಗೆ ಯಾವ ಅಭ್ಯಾಸಗಳಿವೆ? ಯಾವ ಒಳ್ಳೇ ಅಭ್ಯಾಸಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಇಷ್ಟಪಡುತ್ತೀರಾ?

ಉದಾಹರಣೆಗೆ, ಪ್ರತಿದಿನ ವ್ಯಾಯಾಮ ಮಾಡುವುದು, ಸಾಕಷ್ಟು ವಿಶ್ರಾಂತಿ ಪಡೆಯುವುದು, ಮನೆಯವರೊಟ್ಟಿಗೆ ಪ್ರೀತಿಯಿಂದ ನಡೆದುಕೊಳ್ಳುವುದು ಹೀಗೇ ಹಲವಾರು ಅಭ್ಯಾಸಗಳಿರಬಹುದು.

ಇಂತಹ ಯಾವುದೇ ಒಂದು ಒಳ್ಳೆಯ ಅಭ್ಯಾಸವನ್ನು ರೂಡಿಸಿಕೊಳ್ಳಲು ಕನಿಷ್ಠ ಪಕ್ಷ ಇಪ್ಪತ್ತೊಂದು ದಿನಗಳಾದರೂ ಬೇಕಾಗುತ್ತವೆ. ಹಾಗಾಗಿ ಯಾವುದೇ ಅಭ್ಯಾಸವನ್ನು ರೂಡಿಸಿಕೊಳ್ಳುವುದು ಮೊದ ಮೊದಲು ಕಷ್ಟ ಎನಿಸಿದರೂ, ಪ್ರಯತ್ನ ಬಿಡದೆ ಮುಂದುವರಿಸಬೇಕು. ಆಗ ಮಾತ್ರ ಉತ್ತಮ ಅಭ್ಯಾಸಗಳು ಮೈಗೂಡುತ್ತವೆ.


ಅದೇ ರೀತಿ, ನಾವು ಬಿಟ್ಟುಬಿಡಬೇಕಾಗಿರುವ ಅಭ್ಯಾಸಗಳೂ ಇರುತ್ತವೆ. ಉದಾಹರಣೆಗೆ, ಸಿಗರೇಟ್‌ ಸೇದುವುದು, ಕುರುಕಲು ತಿಂಡಿಯನ್ನು ಹೆಚ್ಚಾಗಿ ತಿನ್ನುವುದು, ಇಂಟರ್‌ನೆಟ್‍ನಲ್ಲಿ ಜಾಸ್ತಿ ಸಮಯ ಕಳೆಯುವುದು ಇತ್ಯಾದಿ.

ಆದರೆ, ‘ಅಭ್ಯಾಸ ಬಲ ಅಷ್ಟು ಬೇಗ ಹೋಗುವುದಿಲ್ಲ’ ಎನ್ನುವ ಮಾತಿದೆ. ಹಾಗಾಗಿ ಮೈಗೂಡಿರುವ ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡುವುದು ಕೂಡ ಅಷ್ಟು ಸುಲಭ ಅಲ್ಲ. ಈ ಕೆಟ್ಟ ಅಭ್ಯಾಸ ಚಳಿಗಾಲದಲ್ಲಿ ಬೆಚ್ಚಗಿನ ಹಾಸಿಗೆ ಇದ್ದಂತೆ. ಹೋಗಿ ಮಲಗುವುದು ಸುಲಭ, ಆದರೆ ಏಳುವುದು ಕಷ್ಟ. ಅದೇ ರೀತಿ ಅಭ್ಯಾಸಗಳನ್ನು ಕೂಡ ಬಿಡುವುದಕ್ಕೆ ಕಷ್ಟವಾಗುತ್ತದೆ.

ಹಾಗಾಗಿ ನಮ್ಮಲ್ಲಿರುವ ಅಭ್ಯಾಸಗಳನ್ನ ನಿಯಂತ್ರಣದಲ್ಲಿಟ್ಟುಕೊಂಡು, ಅವುಗಳಿಂದ ಪ್ರಯೋಜನ ಪಡೆಯೋದು ಹೇಗೆ ಎನ್ನುವ ನಿಟ್ಟಿನಲ್ಲಿ ನಾವು ಹೆಚ್ಚು ಯೋಚಿಸಬೇಕಾಗುತ್ತದೆ.
Exit mobile version