ತಮಿಳುನಾಡಿನಲ್ಲಿ ಬಾಲ್ಯವಿವಾಹ ನಡೆಸಿದ ಮೂವರು ಅರ್ಚಕರ ಬಂಧನ!

Stop

Tamilnadu : ಹಲವಾರು ಅನಿಷ್ಠ ಪದ್ಧತಿಗಳು ಭಾರತದಿಂದ (India) ತೊಲಗಿದರೂ ಬಾಲ್ಯ ವಿವಾಹ ಪದ್ದತಿ (3 priests arrested for child marriage) ಮಾತ್ರ ಸಂಪೂರ್ಣವಾಗಿ ನಿರ್ನಾಮಗೊಂಡಿಲ್ಲ.

ಕರ್ನಾಟಕದ ಹಲವು ರಾಜ್ಯಗಳಲ್ಲಿ ಈಗಲೂ ಬಾಲ್ಯ ವಿವಾಹ ಪದ್ಧತಿ ಜಾರಿಯಲ್ಲಿದೆ.

ಬಾಲ್ಯ ವಿವಾಹಗಳಿಂದ ವಿವಿಧ ರೀತಿಯ ದುಷ್ಪರಿಣಾಮಗಳಾಗುತ್ತಿದ್ದರೂ, ನಮ್ಮ ಸಮಾಜದಲ್ಲಿ ಇಂದಿಗೂ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಇದನ್ನು ತಡೆಗಟ್ಟಲು 2006ನೇ ಇಸವಿಯಲ್ಲಿ ಒಂದು ನೂತನ ಕಾಯಿದೆಯನ್ನು ರಚಿಸಲಾಗಿತ್ತು.

ಈ ಕಾಯ್ದೆ ಜಾರಿಗೆ ಬಂದ ನಂತರ ಬಾಲ್ಯ ವಿವಾಹ ನಿಷೇಧ (Prohibition of child marriage) ಕುರಿತು ಜಾಗೃತಿ ಮೂಡಿಸುತ್ತಲೇ ಬರಲಾಗಿದೆ, ಕಾನೂನು ಕಠಿಣವಾಗಿದೆ.

ಹೀಗಿದ್ದರೂ ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ.


ಇದೀಗ, ಇಂತದ್ದೇ ಪ್ರಕರಣವೊಂದು ನೆರೆ ರಾಜ್ಯ ತಮಿಳುನಾಡಿನಲ್ಲಿ (Tamilnadu) ನಡೆದಿದೆ. ತಮಿಳುನಾಡಿನ ಚಿದಂಬರಂನಲ್ಲಿರುವ ನಟರಾಜ ದೇವಸ್ಥಾನದ ಮೂವರು ಅರ್ಚಕರು ಅಕ್ಟೋಬರ್ 15ರಂದು ಬಾಲ್ಯ ವಿವಾಹ ಮಾಡಿಸಿದ್ದಾರೆ.

ಇದೀಗ ಈ ಆರೋಪ ಮೇಲೆ ಮೂವರು ಅರ್ಚಕರನ್ನು ಬಂಧಿಸಲಾಗಿದೆ. ಅರ್ಚಕರ ಬಂಧನದ (3 priests arrested for child marriage) ವಿರುದ್ಧ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು, ಆದರೆ ನಂತರ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

ಇದನ್ನೂ ಓದಿ :https://vijayatimes.com/seer-basavaprabhu-to-murugha-mutt/

ಪ್ರಕರಣದ ವಿವರ ಹೀಗಿದೆ; ತಮಿಳುನಾಡಿನ ಕಡಲೂರು ಜಿಲ್ಲೆಯ ಚಿದಂಬರಂ ನಟರಾಜ ದೇಗುಲದ ಅರ್ಚಕರು ಮತ್ತು ಆ ದೇವಾಲಯದ ಕಾರ್ಯದರ್ಶಿ ಹೇಮಸಾಬೇಶ ಮತ್ತು ವಿಜಯಬಾಲ ಅವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಜೊತೆಗೆ, ಈ ಆರೋಪದಲ್ಲಿ ವಿಜಯಬಾಲಾ ಅವರ ಪುತ್ರ ಜ್ಞಾನಶೇಖರನ್‌ ಅವರನ್ನು ಕೂಡ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯು ಕಡಲೂರು ಪೊಲೀಸರಿಗೆ ದೂರು ನೀಡಿದ್ದು, ಹೇಮಸಾಬೇಶ ಅರ್ಚಕರು ತನ್ನ 13 ವರ್ಷದ ಮಗಳನ್ನು ವಿಜಯಬಾಲಾ ಅರ್ಚಕರ 17 ವರ್ಷ ಮಗ ಜ್ಞಾನಶೇಖರನ್‌ಗೆ ಮದುವೆ ಮಾಡಿಕೊಟ್ಟಿದ್ದಾರೆ.

ಈ ವಿಚಾರವಾಗಿ ಅರ್ಚಕರ ಬೆಂಬಲಿಗರು ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರೂ, ನಂತರದಲ್ಲಿ ಈ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಈ ಬಗ್ಗೆ ಮಾತನಾಡಿದ ಅರ್ಚಕರು, ನಮ್ಮ ಜಾತಿಯವರಿಗೆ ನಾವು ನಮ್ಮ ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :https://vijayatimes.com/kharagpur-student-decomposed-body-found/

ಈ ಇಬ್ಬರು ಅರ್ಚಕರು ಚಿದಂಬರಂ ನಟರಾಜರ ದೇವಸ್ಥಾನವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ, ಹಿಂದೂ ಧರ್ಮದಾಯ ಮತ್ತು ದತ್ತಿ ಇಲಾಖೆಯು ದೇವಾಲಯದ ಸಮಸ್ಯೆಗಳ ಬಗ್ಗೆ ವಿವರಗಳನ್ನು ಕೇಳಿತ್ತು, ಈ ವಿಚಾರವಾಗಿ ಸ್ಥಳೀಯರ ಅಕ್ರೋಶ ಕೂಡ ಇತ್ತು.

ಈ ದೇವಸ್ಥಾನದಲ್ಲಿ ಬಾಲ್ಯವಿವಾಹ ನಡೆಸಲಾಗುತ್ತಿದೆ ಎಂಬ ಆರೋಪ ಸೇರಿದಂತೆ, ದೇವಸ್ಥಾನದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಸುಮಾರು 19,000 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ದತ್ತಿ ಇಲಾಖೆ ತಿಳಿಸಿದೆ.
Exit mobile version