ಕೋಲಾರದಲ್ಲಿ ಪತ್ತೆಯಾದ ಕಂತೆ ಕಂತೆ ಹಣ ಯಾರದ್ದು, ರಹಸ್ಯ ಬಯಲು!

Kolara (ಮೇ 5) : ವಿಧಾನಸಭಾ ಚುನಾವಣೆ (Assembly Election) ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ಈ ತರಹದ ಅನೇಕ ಪ್ರಕರಣಗಳು ಕೇಳಿ ಬರುತ್ತಿವೆ. ಮತದಾರರಿಗೆ ಹಣ (4 crore cash seized in Kolar) ಹಂಚಿ ಮತ ಹಾಕಲು ರಾಜಕಾರಣಿಗಳು ಓಲೈಸುತ್ತಿದ್ದಾರೆ. ಚುನಾವಣಾ ಅಧಿಕಾರಿಗಳು ಎಷ್ಟೇ ಕ್ರಮ ಕೈಗೊಂಡರು ಇಂತಹ ಪ್ರಕರಣಗಳು ನಡೆಯುತ್ತಲೇ ಇವೆ. ಅಂತಹದೆ ಒಂದು ಪ್ರಕರಣ ನಿನ್ನೆ ಕೋಲಾರದಲ್ಲಿ ನಡೆದಿತ್ತು.

ನಿನ್ನೆ ಕೋಲಾರದ ಹಂಚಾಳ ಬಳಿಯ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್‌ನಲ್ಲಿರುವ (Zion Hills Golf Resort) ಐಷಾರಾಮಿ ವಿಲ್ಲಾಗಳ ಬಳಿ ಕಾರಿನಲ್ಲಿ ಒಟ್ಟು 4 ಕೋಟಿ 5 ಲಕ್ಷ ರೂ.

ನಗದು ಪತ್ತೆಯಾಗಿದ್ದು ಭಾರೀ ಸಂಚಲನ ಮೂಡಿಸಿದೆ. ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ (Ramesh real estate businessman)

ಅವರ ವಿಲ್ಲಾ ಇದಾಗಿದ್ದು, ವಿಲ್ಲಾ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 3 ಗೋಣಿಚೀಲಗಳಿದ್ದು, ಒಟ್ಟು 1.5 ಕೋಟಿ ರೂ.ಇತ್ತು.

ಅತ್ತ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸುತ್ತಿದ್ದಂತೆಯೇ ವಿಲ್ಲಾ ಬಳಿ ಕಾರನ್ನು ಬಿಟ್ಟು ಓಡಿ ಹೋಗಿದ್ದಾರೆ.

ನಂತರ ವಿಲ್ಲಾವನ್ನೂ ಪರಿಶೀಲಿಸಿದ ಪೊಲೀಸರಿಗೆ 2.54 ಕೋಟಿ ರೂ ಸಿಕ್ಕಿದೆ. ಒಟ್ಟಾರೆ ಇಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 4.04 ಕೋಟಿ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ.

ಇದೇ ವೇಳೆ ಹಣದ ಮಾಲೀಕತ್ವದ ಬಗ್ಗೆಯೂ ಮಾಹಿತಿ ಬಹಿರಂಗವಾಗಿದೆ.

ಇದನ್ನೂ ಓದಿ : https://vijayatimes.com/modi-road-show-in-bengaluru/

ಇನ್ನು ಈ ಹಣ ಯಾರದ್ದೆಂದು ಪೊಲೀಸರು ತನಿಖೆ (Police investigation) ನಡೆಸುತ್ತಿದ್ದಾಗ ಹಣ ಪತ್ತೆಯಾದ ಕಾರು ನಾರಾಯಣಸ್ವಾಮಿಯವರಿಗೇ ಸೇರಿದ್ದು ಎಂಬುವುದು ತಿಳಿದು ಬಂದಿದೆ.

ಅಷ್ಟೇ ಅಲ್ಲದೆ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್ ನಾರಾಯಣಸ್ವಾಮಿ (Bangarapet Congress MLA SN Narayanaswamy) ಆಪ್ತ ರಮೇಶ್ ಯಾದವ್ ಮನೆಯಲ್ಲಿ

ಹಣ ಪತ್ತೆಯಾಗಿದೆ ಎಂಬುವುದು ಕೂಡ ತಿಳಿದು ಬಂದಿದೆ.

ಕೋಲಾರದ ಹಂಚಾಳ ಗ್ರಾಮದ ಬಳಿ ಇರುವ ಐಷಾರಾಮಿ ಮೌಂಟ್ ಜಿಯಾನ್ ಗಾಲ್ಫ್ ವಿಲ್ಲಾದಲ್ಲಿ 2.54 ಕೋಟಿ ಹಣ ಪತ್ತೆಯಾಗಿದೆ.

ಮತ್ತು ವಿಲ್ಲಾದ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ 1.5 ಕೋಟಿ ಹಣ (4 crore cash seized in Kolar) ಪತ್ತೆಯಾಗಿ ಭಾರೀ ಕೋಲಾಹಾಲ ಸೃಷ್ಟಿಸಿತ್ತು.

ಅಲ್ಲದೇ ಹಣದ ಕಟ್ಟಲ್ಲಿ ಬಂಗಾರಪೇಟೆ ಕ್ಷೇತ್ರದ ಪಂಚಾಯಿತಿ ಹೆಸರು ಬರೆದು ಇಟ್ಟಿತ್ತು.

ಇದನ್ನೂ ಓದಿ : https://vijayatimes.com/state-assembly-election-2023/

ಹಾಗಾಗಿ ಬಂಗಾರಪೇಟೆ ಕೈ ಅಭ್ಯರ್ಥಿ ಎಸ್.ಎನ್ ನಾರಾಯಣಸ್ವಾಮಿಯವರಿಗೆ ಸೇರಿದ್ದ ಹಣ ಇದಾಗಿದ್ದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲದೇ ಇದು ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಕೂಡಿಟ್ಟ ಹಣವಾಗಿರಬಹುದು ಎಂದು ಊಹಿಸಲಾಗಿದೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿ ನಾರಾಯಣಸ್ವಾಮಿ ಹಾಗೂ ಉದ್ಯಮಿ ರಮೇಶ್ ಯಾದವ್ ವಿರುದ್ದ ಪ್ರಕರಣ ದಾಖಲಾಗಿದೆ ಅಷ್ಟೇ ಅಲ್ಲದೆ ಹಣದ ಜೊತೆ ನಾರಾಯಣಸ್ವಾಮಿ ಹೆಸರಿರೊ ಎನ್ವಲಪ್ ಕವರ್​ಗಳೂ ಪತ್ತೆಯಾಗಿವೆ ಕೂಡ ಎನ್ನಲಾಗಿದೆ.

Exit mobile version