ಶಾಕಿಂಗ್‌ ನ್ಯೂಸ್‌ ! ಜೀಸಸ್‌ ಭೇಟಿಯಾಗಲು 47 ಮಂದಿ ಜೀವಂತ ಸಮಾಧಿ: ಪಾದ್ರಿ ಅಂಗಳದಲ್ಲಿ ಸಿಕ್ತು ಮೃತದೇಹಗಳು

Kenya (ಏ.24) : ಜೀಸಸ್‌ (jesus) ಅನ್ನು ಬೇಟಿಯಾಗಲು, ಸ್ವರ್ಗ ಪ್ರವೇಶ ಮಾಡಲು 47 ಮಂದಿ ಆಜೀವ ಉಪವಾಸ ಮಾಡಿ ಜೀವಂತ ಸಮಾಧಿಯಾಗಿದ್ದಾರೆ. ಮೃತರಲ್ಲಿ ಪುಟ್ಟ ಮಕ್ಕಳೂ ಸೇರಿದ್ದಾರೆ. ಇವರಿಗೆ ಈ ರೀತಿ ಮಾಡಲು ಹೇಳಿದ್ದು ಚರ್ಚ್‌ ಫಾದರ್‌. ಜೀವಂತ ಸಮಾಧಿಯಾದವರ (40 bodies found at Kenya) ಮೃತದೇಹಗಳು ಪಾದ್ರಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿವೆ. ಈ ಭೀಕರ ಘಟನೆ ನಡೆದಿರೋದು ಕೀನ್ಯಾದ ಮಲಿಂದಿ ಗ್ರಾಮದಲ್ಲಿ.


ಉಪವಾಸದ ಮಾಡಿ ಸಾವು ಪಡೆದರೆ ನೀವು ಜೀಸಸನ್ ಭೇಟಿಯಾಗಬಹುದು, ಮತ್ತೆ ಎಂದಿಗೂ ಸಾವಿಲ್ಲ. ಜೀವನ ಪರ್ಯಾಂತ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳಿ ಪಾದ್ರಿಯೊಬ್ಬ ನಂಬಿಸಿದ್ದಾನೆ.

ಆ ಪಾದ್ರಿಯ ಮಾತು ಕೇಳಿ ಉಪವಾಸ ಮಾಡಿದ ಅಮಾಯಕ ಜೀವಗಳು ಪ್ರಾಣ ತ್ಯಜಿಸಿದ್ದಾರೆ. ಮಕ್ಕಳು ಸೇರಿದಂತೆ ಸುಮಾರು 47 ಮಂದಿ ಪಾದ್ರಿಯ ಮಾತು ಕೇಳಿ ಬಲಿಯಾಗಿದ್ದಾರೆ.


ಹೊರಜಗತ್ತಿನ ಸಂಪರ್ಕ ಕಡಿಮೆ ಇರುವಂತಹ, ಹೆಚ್ಚಿನ ಮೂಲಸೌಕರ್ಯವೂ ಇಲ್ಲದ ಕೀನ್ಯಾದ ಮಲಿಂದಿ ಗ್ರಾಮದಲ್ಲಿ ಕೃಷಿ,

ಹಾಗೂ ದುಡಿಮೆ ಮಾಡುವ ಮೂಲಕ ಬದುಕು ಕಟ್ಟಿಕೊಂಡ ಶ್ರಮಜೀವಿಗಳು.

ಇಂತಹ ಮುಗ್ದರನ್ನು ಪಾದ್ರಿಯೊಬ್ಬ ಬಲಿ ತೆಗೆದುಕೊಂಡಿದ್ದಾನೆ. ಕೀನ್ಯಾದ ಕರಾವಳಿ ಭಾಗದಲ್ಲಿರುವ ಮಲಿಂದಿ ಗ್ರಾಮದಲ್ಲಿ ಸಾಕಷ್ಟು ಅರಣ್ಯ ಪ್ರದೇಶಗಳಿವೆ.

ಇದನ್ನೂ ಓದಿ : https://vijayatimes.com/donate-to-pm-cares-fund/

ಇಲ್ಲಿರುವ ಸಮಾಧಿ ಬಳಿ 47 ಮೃತದೇಹ ಪತ್ತೆಯಾಗಿದೆ. ಪೋಲಿಸರು ಈ ಮೃತದೇಹಗಳನ್ನು ಹೊರಕ್ಕೆ ತೆಗೆದು ನಂತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಕೀನ್ಯಾ ಪೊಲೀಸರು ಈವರೆಗೆ 47 ಮೃತದೇಹಗಳನ್ನು ಪತ್ತೆ ಹಚ್ಚಿ ಹೊರಕ್ಕೆ ತೆಗೆದಿದ್ದಾರೆ. ಹಾಗೂ ಇತ್ತ ಪಾದ್ರಿಯನ್ನುಕೂಡ ಬಂಧಿಸಿದ್ದಾರೆ.


ಈ ಗ್ರಾಮದಲ್ಲಿರುವ ಗುಡ್ ನ್ಯೂಸ್ ಎಂಬ ಅಂತಾರಾಷ್ಟ್ರೀಯ ಚರ್ಚ್‌ ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿದೆ ಅನ್ನೋ ಮಾಹಿತಿ ದೊರಕಿದ ಕೂಡಲೇ ಪೊಲೀಸರು ದಾಳಿ ನಡೆಸಿದ್ದರು.

ಈ ವೇಳೆಯಲ್ಲಿ ಇವರು ಉಪವಾಸದಲ್ಲಿದ್ದ 15 ಮಂದಿಯನ್ನು ರಕ್ಷಿಸಿದ್ದರು.

ಇವರು ನೀಡಿದ ಮಾಹಿತಿ ಆಧರಿಸಿ ಚರ್ಚ್ ಪಾದ್ರಿಯನ್ನು ಮತ್ತು ಚರ್ಚ್‌ನ ಮುಖ್ಯಸ್ಥ ಆದ ಪೌಲ್ ಮೆಕಂಢಿ ಎನ್‌ಥೆಂಗೆಯನ್ನು (Paul Nthenge Mackenzie) ಕೂಡ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ಈ ವಿಚಾರಣೆ ವೇಳೆಯಲ್ಲಿ ಅತೀ ದೊಡ್ಡ ಷಡ್ಯಂತ್ರ ನಡೆಯುತ್ತಿರುವುದು ಬಹಿರಂಗವಾಗಿದೆ.

ಆ ಪಾದ್ರಿಯು ಕ್ರಿಶ್ಚಿಯನ್ ಧರ್ಮ (Christianity) ಬೋಧನೆ ಮಾಡುತ್ತಾ, ಜನರಿಗೆ ಉಪವಾಸದ ಮೂಲಕ ಸಾವು ಪಡೆಯಲು ಸೂಚಿದ್ದಾನೆ.

ಇಷ್ಟೇ ಅಲ್ಲದೆ ಬಲವಂತವಾಗಿ ಈವರೆಗೆ ಹಲವರನ್ನು ಉಪವಾಸ ಕೂರಿಸಿದ್ದಾನೆ.

ಪೋಲಿಸರು ತನಿಖೆ ತೀವ್ರಗೊಳಿಸಿದರು ನಂತರ ಪಾದ್ರಿಯನ್ನು ಶಾಕಹೊಲಾ ಅರಣ್ಯಕ್ಕೆ ಕರೆದುಕೊಂಡು ಹೋಗಿದ್ದಾರೆ ಈ ವೇಳೆ ಹಲವು ಸಮಾಧಿಗಳನ್ನು ಪಾದ್ರಿ ತೋರಿಸಿದ್ದಾನೆ.

ಉಪವಾಸದಲ್ಲಿ ಅಂತ್ಯ ಕಂಡ ಜನರನ್ನುಪಾದ್ರಿಯು ಇದೇ ಅರಣ್ಯದಲ್ಲಿ ಸಮಾದಿ ಮಾಡಿದ್ದಾನೆ ಎಂದು ತಿಳಿದು

ಬಂದಿದೆ ಅಲ್ಲದೆ ಒಂದು ಸಮಾದಿಯಲ್ಲಿ ಮೂವರು ಮಕ್ಕಳು ಹಾಗೂ ಪೋಷಕರ ಮೃತದೇಹ ಕೂಡ ಪತ್ತೆಯಾಗಿದೆ.

ಇದೀಗ ಶಾಕಹೊಲಾ ಅರಣ್ಯದಲ್ಲಿ ಪೋಲಿಸರು ಮತ್ತಷ್ಟು ಶೋಧ ಕಾರ್ಯ ನಡೆಸುತ್ತಿದ್ದಾರೆ ಇದುವರೆಗೆ 47 ಮೃತದೇಹಗಳು ಪತ್ತೆಯಾಗಿದೆ.

ಇದನ್ನೂ ಓದಿ : https://vijayatimes.com/donate-to-pm-cares-fund/

ಅಲ್ಲದೆ ಗುಡ್ ನ್ಯೂಸ್ ಅಂತಾರಾಷ್ಟ್ರೀಯ ಚರ್ಚ್‌ಗೆ (International Church) ಬೀಗ ಕೂಡ ಜಡಿಯಲಾಗಿದೆ. ಶಾಂತವಾಗಿದ್ದ2018ರಲ್ಲಿ ಗ್ರಾಮದಲ್ಲಿ ಚರ್ಚ್ ಆರಂಭಿಸಿ,

ಮತಾಂತರ, ಅತ್ಯಾಚಾರ ನಡೆಸುತ್ತಿರುವುದಾಗಿ ಈ ಚರ್ಚ್ ಹಾಗೂ ಪಾದ್ರಿ ಮೆಕೆಂಜಿಯ ವಿರುದ್ಧ ಹಲವು ಆರೋಪಗಳು ಕೇಳಿಬಂದಿತ್ತು.

Exit mobile version