ನೀರು ತುಂಬಿದ ಗುಂಡಿ ರಸ್ತೆಯಲ್ಲಿ ದುರ್ಗೆಯ ವೇಷ ಧರಿಸಿ ಶಾಲಾ ಬಾಲಕಿ ಮೆರವಣಿಗೆ ; ವೀಡಿಯೋ ವೈರಲ್

Hubballi : 2ನೇ ತರಗತಿಯ ವ್ಯಾಸಂಗ ಮಾಡುತ್ತಿರುವ 9 ವರ್ಷದ ಬಾಲಕಿಯೊಬ್ಬಳು ನವರಾತ್ರಿಯ (Navarathri) ವೇಳೆ ದುರ್ಗೆಯ ವೇಷ ಧರಿಸಿ ನೀರಿನ ಕೊಚ್ಚೆ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಮೆರವಣಿಗೆ ಹೋಗಿದ್ದಾಳೆ.

ಕರ್ನಾಟಕ (Karnataka) ರಾಜ್ಯದ ಹುಬ್ಬಳ್ಳಿಯಲ್ಲಿನ (Hubballi) ಕೆಲ ಪ್ರದೇಶದ ರಸ್ತೆಗಳ ದುರವಸ್ಥೆಯ ಬಗ್ಗೆ ಸರ್ಕಾರಕ್ಕೆ ಅರಿವು ಮೂಡಿಸಲು ಈ ವಿಭಿನ್ನ ಪ್ರಯತ್ನ ಮಾಡಿದ್ದಾಳೆ ಎನ್ನಲಾಗಿದೆ.

9 ವರ್ಷದ ಹರ್ಷಿತಾ ಎಂದು ಗುರುತಿಸಲಾದ ಬಾಲಕಿ ದುರ್ಗೆಯ ವೇಷ ಧರಿಸಿ ಮಳೆ (9 Year old girl dressed up as durga) ನೀರಿನಿಂದ ರಸ್ತೆಯಲ್ಲಿ ಗುಂಡಿ ಬಿದ್ದಿದ್ದ ರಸ್ತೆಗಳು ಸಂಪೂರ್ಣವಾಗಿ ತುಂಬಿತ್ತು. ಈ ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ಬಾಲಕಿ ನಡೆದುಕೊಂಡು ಹೋಗುತ್ತಿರುವುದನ್ನು ದೃಶ್ಯಾವಳಿಗಳಲ್ಲಿ ಕಾಣಬಹುದು.

ಇದನ್ನೂ ಓದಿ : https://vijayatimes.com/uae-enlists-new-visa-for-travellers/

ಕೆಸರಿನ ನೀರಿನಿಂದ ತುಂಬಿದ ಅಂತಹ ಒಂದು ಗುಂಡಿಯ ಮಧ್ಯದಲ್ಲಿ ಬಾಲಕಿ ದೇವಿ ವೇಷ (9 Year old girl dressed up as durga) ಧರಿಸಿಕೊಂಡು ಮೆರವಣಿಗೆ ಹೋಗಿದ್ದಾಳೆ.

https://youtu.be/4imXTD0zXs0

ಹದಗೆಟ್ಟ ರಸ್ತೆಗಳು ಮತ್ತು ವಾಹನ ಸವಾರರಿಗೆ ಅಪಾಯಕಾರಿಯಾಗಿ ತೋರುವ ಹೊಂಡಗಳತ್ತ ಗಮನ ಸೆಳೆಯುವ ಸಲುವಾಗಿ, ಬಾಲಕಿಯೂ ದೇವತೆಯಂತೆ ವೇಷಭೂಷಣವನ್ನು ಧರಿಸಿ ರಸ್ತೆ ಪೂರ ಓಡಾಡಿದ್ದಾಳೆ.

ಯುವತಿ ಮತ್ತು ಆಕೆಯ ಕುಟುಂಬವು ನವರಾತ್ರಿಯ ಸಂದರ್ಭವನ್ನು ಬಳಸಿಕೊಂಡು ರಸ್ತೆಯ ಕೆಟ್ಟ ಸ್ಥಿತಿಯನ್ನು ವಿಶಿಷ್ಟ ರೀತಿಯಲ್ಲಿ ಗಮನ ಸೆಳೆಯಲು ನಿರ್ಧರಿಸಿತ್ತು ಎನ್ನಲಾಗಿದೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕುಟುಂಬಸ್ಥರು, ದುರ್ಗಾ ದೇವಿ ವೇಷದಲ್ಲಿರುವ ಬಾಲಕಿ ಹೆಸರು ಹರ್ಷಿತಾ, ಇಲ್ಲಿನ ರಸ್ತೆಯ ಸ್ಥಿತಿ ತುಂಬಾ ಕಳವಳಕಾರಿಯಾಗಿದೆ.

ಇದನ್ನೂ ಓದಿ : https://vijayatimes.com/state-bjp-taunts-siddaramaiah/

ಪ್ರತಿ ದಿನ ಆಟೊಗಳಲ್ಲಿ ಶಾಲೆಗೆ ಹೋಗುವಾಗ ಮಕ್ಕಳಿಗೂ ತೊಂದರೆಯಾಗುತ್ತದೆ. ಗುಂಡಿಗಳಲ್ಲಿ ಸಾಕಷ್ಟು ಕೆಸರು ಮತ್ತು ನೀರು ಇರುವುದರಿಂದ ಸಮಸ್ಯೆ ಉಂಟಾಗುತ್ತಿದೆ.

ಹುಬ್ಬಳ್ಳಿಯ ಪೌರಕಾರ್ಮಿಕರು ರಸ್ತೆಯ ದುಸ್ಥಿತಿಯನ್ನು ನಿರ್ಲಕ್ಷಿಸಿದ್ದಾರೆ. ಹಾಗಾಗಿ ಈ ಒಂದು ವಿಭಿನ್ನ ರೀತಿಯ ಪ್ರಯತ್ನವನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ.
Exit mobile version