ನವದೆಹಲಿ ಆ 23 : ಫೆಡರೇಶನ್ ಆಫ್ ಇಂಟರ್ನ್ಯಾಶನಲ್ ವಾಲಿಬಾಲ್ ಇವರ ಆಶ್ರಯದಲ್ಲಿ ಆಗಸ್ಟ್ 24ರಿಂದ ಸೆ. 2ರವರೆಗೆ ಇರಾನಿನ ತೆಹ್ರಾನ್ನಲ್ಲಿ ನಡೆಯಲಿರುವ 19 ವರ್ಷ ವಯೋಮಿತಿಯ ವರ್ಲ್ಡ್ ವಾಲಿಬಾಲ್ ಚಾಂಪಿಯನ್ಶಿಪ್ ನಡೆಯಲಿದೆ ಈ ಹಿನ್ನಲೆಯಲ್ಲಿ ವಿವಿಧ ರಾಜ್ಯದ ಪ್ರತಿಭಾನ್ವಿತ ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ.
19ರ ವಯೋಮಿತಿಯ ಭಾರತ ತಂಡ
- ಸಂದೀಪ್ ರಾಜಸ್ತಾನ
- ಸಮೀರ್ ಚೌಧರಿ ದೆಹಲಿ
- ಅಮನ್ ಕುಮಾರ್ ಹರಿಯಾಣ
- ಹರ್ಷೀತ್ ಗಿರಿ ಚಂಢೀಗಡ್
- ಅಜಯ್ ಕುಮಾರ್ ಹರಿಯಾಣ
- ತನೀಶ್ ಚೌಧರಿ ದೆಹಲಿ
- ಜೊಷ್ನೂರ್ ದಿಂಡ್ಸಾ ಪಂಜಾಬ್
- ಜಿಬಿನ್ ಜಾಬ್ ಕೇರಳ
- ದುಶ್ಯಂತ್ ಸಿಂಗ್ ರಾಜಸ್ತಾನ
- ಶ್ರೀನಾಥ್ ಸೆಲ್ವಕುಮಾರ್ ತಮಿಳುನಾಡು
- ದಿಬ್ಯಮ್ ಶಾಹಿ ಉತ್ತರ ಪ್ರದೇಶ
- ಚಿಕ್ಕಣ್ಣ ವೇಣು ತಮಿಳುನಾಡು
ಈ ತಂಡಕ್ಕೆ ಮುಖ್ಯ ತರಬೇತುದಾರರಾಗಿ ಪ್ರೀತಮ್ ಸಿಂಗ್ ಚೌಹಾಣ್ ಸಹಾಯಕ ಕೋಚ್ ಆಗಿ ಪ್ರವೀಣ್ ಕುಮಾರ್ ಶರ್ಮಾ ಅವರು ಆಯ್ಜೆಯಾಗಿದ್ದಾರೆ ಎಂದು ವಾಲಿಬಾಲ್ ಫೆಡರೆಷನ್ ಆಫ್ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರೂಪ್ A ವಿಭಾಗದಲ್ಲಿ ಭಾರತ, ಇರಾನ್, ಗ್ವಾಟೆಮಾಲಾ, ನೈಜಿರಿಯಾ ಹಾಗೂ ಪೊಲೆಂಡ್ ತಂಡಗಳು ಸ್ಪರ್ಧಿಸಲಿದೆ.