ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆ ಸೊಸೈಟಿ ಅಡಿಯಲ್ಲಿನ ವಸತಿ ಶಾಲೆಗಳಲ್ಲಿ ಎಸ್ಡಿಎ, ಎಫ್ಡಿಎ, ಗ್ರಂಥಪಾಲಕರು, ಅಡುಗೆಯವರು, ಶೀಘ್ರಲಿಪಿಕಾರರು ಸೇರಿದಂತೆ ಒಟ್ಟು 8883 ಹುದ್ದೆಗಳ ಭರ್ತಿಗೆ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಶೀಘ್ರದಲ್ಲೇ ಸದರಿ ಹುದ್ದೆಗಳಿಗೆ ಅಂತಿಮ ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಈ ಕೆಳಗಿನಂತೆ ಕೆಆರ್ಇಐಎಸ್ ಹುದ್ದೆಗಳ ಹೆಸರು, ವೇತನ, ಅರ್ಹತೆಗಳ ಬಗ್ಗೆ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿಸಲಾಗಿದೆ.
FDA ಕಮ್ ಕಂಪ್ಯೂಟರ್ ಆಪರೇಟರ್ ಹುದ್ದೆಗಳ ಸಂಖ್ಯೆ: 716
ವಿದ್ಯಾರ್ಹತೆ : ಯಾವುದೇ ಪದವಿ ಪಾಸ್.
ನೇಮಕ ವಿಧಾನ : ಶೇ.50 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ, ಶೇ.50 ಹುದ್ದೆಗಳನ್ನು ಮುಂಬಡ್ತಿ ಮೂಲಕ ನೇಮಕ ಮಾಡಲಾಗುತ್ತದೆ.
ವೇತನ : ರೂ.27,650 ರಿಂದ 52,650 ವರೆಗೆ.
SDA ಕಮ್ ಕಂಪ್ಯೂಟರ್ ಆಪರೇಟರ್ ಹುದ್ದೆಗಳ ಸಂಖ್ಯೆ: 33
ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಪಾಸ್
ನೇಮಕ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಪಿಯುಸಿಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ.
ವೇತನ : ರೂ.21,400 ರಿಂದ 42,000
ಗ್ರಂಥಪಾಲಕರು ಹುದ್ದೆಗಳ ಸಂಖ್ಯೆ : 14
ವಿದ್ಯಾರ್ಹತೆ : ಲೈಬ್ರರಿ ಸೈನ್ಸ್ ನಲ್ಲಿ ಡಿಗ್ರಿ
ನೇಮಕ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ.
ವೇತನ : ರೂ.30,350 ರಿಂದ 58,250 ವರೆಗೆ
ವಾರ್ಡನ್ ಹುದ್ದೆಗಳ ಸಂಖ್ಯೆ: 712
ವಿದ್ಯಾರ್ಹತೆ : ಯಾವುದೇ ಪದವಿ ಜತೆಗೆ ಬಿ.ಇಡಿ ಪದವಿ ಪಡೆದಿರಬೇಕು.
ನೇಮಕ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ನಿಗದಿತ ಶೈಕ್ಷಣಿಕ ಅರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ಲಿಸ್ಟ್ ಮಾಡಿ ನೇಮಕ.
ವೇತನ : ರೂ.27,650 ರಿಂದ 52,650.
ಪ್ರಯೋಗಾಲಯ ಸಹಾಯಕ ಹುದ್ದೆಗಳ ಸಂಖ್ಯೆ : 11
ವಿದ್ಯಾರ್ಹತೆ : ಪಿಯು ಸೈನ್ಸ್ ಪಾಸ್ ಮತ್ತು ಜತೆಗೆ ಡಿಪ್ಲೊಮ ಇನ್ ಲ್ಯಾಬೋರೇಟರಿ ಟೆಕ್ನಿಕ್ಸ್
ನೇಮಕ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಪಿಯು ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ.
ವೇತನ : ರೂ.21,400 ರಿಂದ 42,000 ವರೆಗೆ.
ಅಡುಗೆಯವರು ಹುದ್ದೆಗಳ ಸಂಖ್ಯೆ : 2039
ವಿದ್ಯಾರ್ಹತೆ : ಎಸ್ಎಸ್ಎಲ್ಸಿ ಜತೆಗೆ 2 ವರ್ಷ ಅಡುಗೆಯಲ್ಲಿ ಅನುಭವ.
ನೇಮಕ ವಿಧಾನ : ತಾತ್ಕಾಲಿಕ ಹುದ್ದೆಗಳ ನೇಮಕ. ಅರ್ಜಿ ಸಲ್ಲಿಸಿದವರನ್ನು ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇವು ತಾತ್ಕಾಲಿಕ ಹುದ್ದೆಗಳಾಗಿವೆ.
ವೇತನ : ರೂ.18,600 ರಿಂದ 32,600 ವರೆಗೆ.
ಸಹಾಯಕ ಅಡುಗೆಯವರ ಹುದ್ದೆಗಳ ಸಂಖ್ಯೆ : 1512
ವಿದ್ಯಾರ್ಹತೆ : SSLC ಪಾಸ್ ಅಥವಾ ಫೇಲ್
ನೇಮಕ ವಿಧಾನ : ಕಾರ್ಯಾನುಭವದ ಆಧಾರದಲ್ಲಿ
ವೇತನ : ರೂ.17,000 ದಿಂದ 28,950
ಚಾಲಕ ಹುದ್ದೆಗಳ ಸಂಖ್ಯೆ : 19
ವಿದ್ಯಾರ್ಹತೆ : SSLC ಪಾಸ್ ಜತೆಗೆ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು.
ನೇಮಕ ವಿಧಾನ : ತಾತ್ಕಾಲಿಕ ಹುದ್ದೆ ಇದಾಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಕಾರ್ಯಾನುಭವದ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.
ವೇತನ : ರೂ.21,400 ರಿಂದ 42,000.
ಸ್ವೀಪರ್ಸ್ ಹುದ್ದೆಗಳ ಸಂಖ್ಯೆ: 1728
ವಿದ್ಯಾರ್ಹತೆ : ಎಸ್ಎಸ್ಎಲ್ಸಿ
ನೇಮಕ ವಿಧಾನ : ವಿದ್ಯಾರ್ಹತೆ, ಸೇವಾನುಭವ ಆಧಾರದಲ್ಲಿ ಆಯ್ಕೆ.
ವೇತನ : ರೂ.17,000 ದಿಂದ 28,950.
ವಾಚ್ಮನ್ ಅಥವಾ ಪ್ಯೂನ್ ಹುದ್ದೆಗಳ ಸಂಖ್ಯೆ : 2098
ವಿದ್ಯಾರ್ಹತೆ : SSLC ಪಾಸ್ ಅಥವಾ ಫೇಲ್
ನೇಮಕ ವಿಧಾನ : ವಿದ್ಯಾರ್ಹತೆ, ಕಾರ್ಯಾನುಭವ ಆಧಾರದ ಮೇಲೆ ಆಯ್ಕೆ.
ವೇತನ : ರೂ.17,000 ದಿಂದ 28,950 ವರೆಗೆ.
ಶೀಘ್ರಲಿಪಿಕಾರರು ಹುದ್ದೆಗಳ ಸಂಖ್ಯೆ : 1
ವಿದ್ಯಾರ್ಹತೆ : ಪಿಯುಸಿ ಜತೆಗೆ ಕನ್ನಡ ಮತ್ತು ಇಂಗ್ಲಿಷ್ ಹಿರಿಯ ದರ್ಜೆ ಬೆರಳಚ್ಚು ಹಾಗೂ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ನೇಮಕ ವಿಧಾನ : ಪಿಯುಸಿ, ಬೆರಳಚ್ಚು ಹಾಗೂ ಶೀಘ್ರಲಿಪಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ.
ವೇತನ : ರೂ.27,650 ರಿಂದ 52,650 ವರೆಗೆ.