ಮತ್ಸ್ಯ ಕನ್ಯೆ ಹೋಲುವ ಮಗು : ಜನಿಸಿದ ಕೆಲವೇ ಗಂಟೆಗಳಲ್ಲಿ ಸಾವು

ಹೈದರಾಬಾದ್, ಮಾ. 14 :ನಾವೆಲ್ಲ ಸಾಮಾನ್ಯವಾಗಿ ಕೈ-ಕಾಲು ಊನತೆಯಿಂದ ಕೂಡಿರುವ ಮಕ್ಕಳು ಜನಿಸುವುದನ್ನು ನೋಡಿರುದ್ದೇವೆ. ಆದರೆ ಮತ್ಸ್ಯರೂಪದಲ್ಲಿ ಮಗು ಜನಿಸುವುದನ್ನು ಎಲ್ಲಾದರೂ ನೋಡಿದ್ದೀರಾ? ಹೈದರಾಬಾದ್​ನಲ್ಲಿ ಇಂತಹ ಅಪರೂಪದ ಮಗುವೊಂದು ಜನಿಸಿದೆ. ಆದರೆ ಈ ಮಗು ಜನಿಸಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ. ಹೌದು, ಹೈದರಾಬಾದ್​​ನ ಪೆಟ್ಲಬುರ್ಜ್​ನಲ್ಲಿರುವ​ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಬುಧವಾರ ಮಹಿಳೆಯೊಬ್ಬಳು ಮಗುವಿಗೆ ಜನ್ಮನೀಡಿದ್ದಳು. ಆದರೆ ಆ ಮಗು ಮತ್ಸ್ಯಕನ್ಯೆ ರೂಪ ಹೊಂದಿತ್ತು. ಜೊತೆಗೆ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮಗು ಸಾವನ್ನಪ್ಪಿತ್ತು.

ಇದೊಂದು ವಿಚಿತ್ರ ಕಾಯಿಲೆಯಾಗಿದ್ದು, ಅಪರೂಪಕ್ಕೆ ಕಾಣಿಸಿಕೊಳ್ಳುತ್ತದೆ. ಮಗು ತಾಯಿಯ ಗರ್ಭದಲ್ಲಿರುವಾಗಲೇ ಕಾಣಿಸಿಕೊಳ್ಳುವ ಒಂದು ಕಾಯಿಲೆಯಾಗಿದೆ. ಹೀಗಾಗಿ ಇದನ್ನು ಜನ್ಮಜಾತ ಬೆಳವಣಿಗೆಯ ರೋಗ ಎನ್ನಲಾಗುತ್ತದೆ. ಇದನ್ನು ಸೈರೆನೊಮೆಲಿಯಾ ಅಥವಾ ಮೆರ್ಮೇಯ್ಡ್​ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.

ವೈದ್ಯರ ಪ್ರಕಾರ, ಮಗು ಜನಿಸಿದ ಕೆಲವೇ ಗಂಟೆಗಳಲ್ಲಿ ಗಂಭೀರ ಪರಿಸ್ಥಿತಿಯಿಂದ ಸಾವನ್ನಪ್ಪಿದೆ. ಮಗು ಬುಧವಾರ ಸಂಜೆ 7 ಗಂಟೆಗೆ ಜನಿಸಿ, ಕೇವಲ ಎರಡು ಗಂಟೆ ಮಾತ್ರ ಜೀವಂತವಾಗಿತ್ತು. ಬಳಿಕ ಮೃತಪಟ್ಟಿತು. ಇಂತಹ ಶಿಶುಗಳ ಜನನ ಬಹಳ ವಿರಳ ಎಂದು ಹೇಳಿದ್ದಾರೆ.

ಸೈರೆನೊಮೆಲಿಯಾ ಅಥವಾ ಮೆರ್ಮೇಯ್ಡ್ ಸಿಂಡ್ರೋಮ್ ಬಹಳ ಅಪರೂಪದ ಕಾಯಿಲೆಯಾಗಿದ್ದು, ಈ ಗುಣಲಕ್ಷಣ ಹೊಂದಿರುವ ಮಗು ಜನನಾಂಗಗಳ ಹೆಚ್ಚುವರಿ ಅನುಪಸ್ಥಿತಿ, ಜಠರ-ಕರುಳಿನ ಕಾಯಿಲೆಗಳು, ಬೆನ್ನುಮೂಳೆಯಲ್ಲಿನ ಅಸ್ವಸ್ಥತೆಗಳು, ಸೊಂಟ ಮತ್ತು ಎರಡೂ ಕಿಡ್ನಿಗಳ ಅನುಪಸ್ಥಿತಿ ಹಾಗೂ ಮೂಳೆಗಳ ಸಂಪೂರ್ಣ ಸಮ್ಮಿಲನದಿಂದ ಜನಿಸುತ್ತದೆ.

Exit mobile version